ಚಹಾ ಇಲ್ಲದ ದಿನವೇ ಇಲ್ಲ, ದಿನಚರಿಯೂ ಇಲ್ಲ ಎಂಬುದು ಹಲವರ ಮಾತು. ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಬಿಸಿ ಬಿಸಿ ಟೀ ಕುಡಿದರೆ, ಮುಂದಿನ ಎಲ್ಲ ಕೆಲಸಗಳು ಸರಳ ಎಂಬ ಭಾವನೆ ಟೀ ಪ್ರಿಯರಿಗೆ.
ಕಬ್ಬಿಣಾಂಶ ಅಧಿಕವಿರುವ ಆಹಾರಗಳು
ಕಬ್ಬಿಣಾಂಶ ಹೆಚ್ಚಿರುವ ಆಹಾರಗಳಾದ ಸೊಪ್ಪು, ತರಕಾರಿಗಳು, ದ್ವಿದಳ ಧಾನ್ಯಗಳ ಜತೆ ಚಹಾ ಬೇಡ. ಟೀ ಟ್ಯಾನಿನ್‌ಗಳು, ಆಕ್ಸಲೇಟ್‌ಗಳಲ್ಲಿ ಸಮೃದ್ಧವಾಗಿದೆ.
ಎಣ್ಣೆಯಲ್ಲಿ ಕರಿದ ತಿನಿಸುಗಳು
ಚಹಾಗೆ ಪಕೋಡಾ, ಬಜ್ಜಿ, ಸಮೋಸಾ ಈವೆಲ್ಲವೂ ತುಂಬಾ ರುಚಿಕರವಾದ ತಿಂಡಿಗಳೇ ನಿಜ. ಆದರೆ, ಈ ಆಹಾರಗಳನ್ನು ಎಣ್ಣೆಯಿಂದಲೇ ಮಾಡುವುದರಿಂದ ಇದು ಟೀಗೆ ಉತ್ತಮ ಹೊಂದಾಣಿಕೆ ಅಲ್ಲವೇ ಅಲ್ಲ.
ಕೋಲ್ಡ್ ಫುಡ್ಸ್
ಚಹಾ ಕುಡಿದ ಕೆಲವೇ ಕ್ಷಣಗಳ ಬಳಿಕ ಐಸ್ ಕ್ರೀಮ್ ಅಥವಾ ಕೋಲ್ಡ್ ಪದಾರ್ಥಗಳನ್ನು ತಿನ್ನಬೇಡಿ. ಬೇರೆ ಬೇರೆ ತಾಪಮಾನ ಹೊಂದಿರುವ ಆಹಾರಗಳನ್ನು ತಿನ್ನುವುದು ಅಜೀರ್ಣಕ್ಕೆ ಕಾರಣವಾಗಬಹುದು.
ಅರಿಶಿಣ
ಟೀ ಜತೆ ಅರಿಶಿಣವನ್ನು ಬೆರೆಸುವುದು ಅಪಾಯಕಾರಿಯೇ. ಕಾರಣ ಇದರಲ್ಲಿರುವ ಸಂಯುಕ್ತಗಳು ಹೊಟ್ಟೆಯ ಒಳಪದರದಲ್ಲಿ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಇದು ಅಜೀರ್ಣ ಮತ್ತು ಎದೆಯುರಿಗೂ ಕಾರಣವಾಗಬಹುದು.
ಅಧಿಕ ಪ್ರೋಟಿನ್ಯುಕ್ತ ಆಹಾರಗಳು
ಪ್ರೋಟೀನ್ ಭರಿತ ಆಹಾರಗಳೊಂದಿಗೆ ಟೀ ಸೇವಿಸುವುದರಿಂದ ಚಹಾದ ಪ್ರಯೋಜನಕಾರಿ ಉತ್ಕರ್ಷಣ ನಿರೋಧಕಗಳ ಹೀರಿಕೊಳ್ಳುವಿಕೆಗೆ ಅಡ್ಡಿಯಾಗಬಹುದು.