ಹತ್ಯೆಗೀಡಾದ ಅಮೇರಿಕನ್ ಅಧ್ಯಕ್ಷರು

ವಿನಾಯಕ ನಾಯಕ

ಹತ್ಯೆಗೀಡಾದ ಅಮೇರಿಕನ್ ಅಧ್ಯಕ್ಷರು

ಅಮೆರಿಕದ ಇತಿಹಾಸದಲ್ಲಿ ಒಟ್ಟು ನಾಲ್ವರು ಅಧ್ಯಕ್ಷರು ಅಧಿಕಾರದಲ್ಲಿದ್ದಾಗಲೇ ಹತ್ಯೆಗೀಡಾಗಿದ್ದಾರೆ. ಅಬ್ರಹಾಂ ಲಿಂಕನ್, ಜೇಮ್ಸ್ ಗಾರ್ಫೀಲ್ಡ್, ವಿಲಿಯಂ ಮೆಕಿನ್ಲಿ ಮತ್ತು ಜಾನ್ ಎಫ್. ಕೆನಡಿ ಅವರು ಗುಂಡೇಟಿಗೆ ಬಲಿಯಾದ ದುರ್ದೈವಿಗಳು.

ಅಬ್ರಹಾಂ ಲಿಂಕನ್ (Abraham Lincoln)

ಅಬ್ರಹಾಂ ಲಿಂಕನ್ ಹತ್ಯೆಗೀಡಾದ ಅಮೆರಿಕದ ಮೊದಲ ಅಧ್ಯಕ್ಷರು. ಇವರು ಏಪ್ರಿಲ್ 14, 1865 ಸಾವನ್ನಪ್ಪಿದರು. ಇವರನ್ನು ವಾಷಿಂಗ್ಟನ್ ಡಿಸಿಯ ಫೋರ್ಡ್ಸ್ ಥಿಯೇಟರ್​ನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಇವರನ್ನು ಕೊಂದವನು ಜಾನ್ ವಿಲ್ಕ್ಸ್ ಬೂತ್ (John Wilkes Booth).

ಜೇಮ್ಸ್ ಎ. ಗಾರ್ಫೀಲ್ಡ್ (James A. Garfield)

ಜೇಮ್ಸ್ ಎ. ಗಾರ್ಫೀಲ್ಡ್ ಮೇಲೆ ಜುಲೈ 2, 1881 ರಲ್ಲಿ ದಾಳಿ ನಡೆದಿತ್ತು. ಇವರು ಸೆಪ್ಟೆಂಬರ್ 19, 1881 ರಂದು ನಿಧನರಾದರು. ಇವರನ್ನು ವಾಷಿಂಗ್ಟನ್ ಡಿಸಿಯ ರೈಲ್ವೆ ನಿಲ್ದಾಣದಲ್ಲಿ ಗುಂಡನ್ನು ಹಾರಿಸಲಾಯಿತು. ಇವರ ಹತ್ಯೆಗೆ ಕಾರಣಾದವರು ಚಾರ್ಲ್ಸ್ ಜೆ. ಗಿಟೌ (Charles J. Guiteau).

ವಿಲಿಯಂ ಮೆಕಿನ್ಲಿ (William McKinley)

ವಿಲಿಯಂ ಮೆಕಿನ್ಲಿ ಮೇಲೆ ಸೆಪ್ಟೆಂಬರ್ 6, 1901 ರಲ್ಲಿ ದಾಳಿ ಮಾಡಲಾಯಿತು. ಮೆಕಿನ್ಲಿ ಅವರು ಜನರಿಗೆ ಹಸ್ತಲಾಘವ ಮಾಡುತ್ತಿದ್ದಾಗ, ಹಂತಕನು ಕೈಬೆರಳಿನ ಪಟ್ಟಿಯೊಳಗೆ ಬಚ್ಚಿಟ್ಟಿದ್ದ ಗನ್‌ನಿಂದ ಹೊಟ್ಟೆಗೆ ಗುಂಡು ಹಾರಿಸಿದನು. ಎಂಟು ದಿನಗಳ ನಂತರ ಅವರು ನಿಧನರಾದರು. ಇವರ ಹಂತಕನನ್ನು ಲಿಯಾನ್ ಝೋಲ್ಗೊಸ್ಜ್ (Leon Czolgosz) ಗುರುತಿಸಲಾಗಿದೆ.

ಜಾನ್ ಎಫ್. ಕೆನಡಿ (John F. Kennedy / JFK)

ಜಾನ್ ಎಫ್. ಕೆನಡಿ ಸಾವನ್ನು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಚರ್ಚಿಸಲ್ಪಟ್ಟ ಹತ್ಯೆಯಾಗಿದೆ. ಇವರನ್ನು ನವೆಂಬರ್ 22, 1963 ರಂದು ಟೆಕ್ಸಾಸ್‌ನ ಡಲ್ಲಾಸ್​ನಲ್ಲಿ ಲೀ ಹಾರ್ವೆ ಓಸ್ವಾಲ್ಡ್ ಎಂಬಾತ ಗುಂಡಿಕ್ಕಿ ಕೊಂದನು.

ಡೊನಾಲ್ಡ್​ ಟ್ರಂಪ್​ (Donald Trump)

ನಿನ್ನೆ (ಏ.25) ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹತ್ಯೆಗೆ ಯೋಜನೆ ರೂಪಿಸಿದ್ದು, ವರದಿಗಾರರೊಂದಿಗೆ ಔತಣಕೂಟದಲ್ಲಿ ಭಾಗಿಯಾಗಿದ್ದಾಗ ಕೊಲ್ಲಲು ಪ್ರಯತ್ನಿಸಲಾಗಿದೆ. ಆದರೆ ಹಂತಕ ಅಧ್ಯಕ್ಷರನ್ನು ತಲುಪುವ ಮೊದಲೇ ಭದ್ರತಾ ಸಿಬ್ಬಂದಿಗಳ ವಶಕ್ಕೆ ಬಂದಿದ್ದಾನೆ. ಬಂಧಿತ ಆರೋಪಿಯ್ನು ಕೋಲ್​ ಥಾಮಸ್​ ಅಲೆನ್​ ಎಂದು ಗುರುತಿಸಲಾಗಿದೆ.