ಜೂನಿಯರ್ ಸಮಂತಾ ಎಂದೇ ಖ್ಯಾತಿಯಾಗಿರುವ ಟಾಲಿವುಡ್ ಬ್ಯೂಟಿ ಅಶು ರೆಡ್ಡಿ ಅವರ ಹೊಸ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಸೋಶಿಯಲ್ ಮೀಡಿಯಾ ಸ್ಟಾರ್
ಅಶು ರೆಡ್ಡಿ ಟೆಲಿವಿಷನ್ ಪ್ರೇಕ್ಷಕರಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಪರಿಚಿತ ಹಾಗೂ ಜನಪ್ರಿಯ ಹೆಸರಾಗಿದ್ದು, ಪ್ರಸ್ತುತ ಹಲವು ಟಿವಿ ಶೋಗಳು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಬಿಜಿಯಾಗಿದ್ದಾರೆ.
ಬಿಗ್ ಬಾಸ್ ಖ್ಯಾತಿ
ನೆಟ್ಟಿಗರಿಂದ 'ಜ್ಯೂನಿಯರ್ ಸಮಂತಾ' ಎಂದೇ ಕರೆಸಿಕೊಳ್ಳುವ ಈ ಚೆಲುವೆ, ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ತೆಲುಗು ಪ್ರೇಕ್ಷಕರಿಗೆ ಹೆಚ್ಚು ಹತ್ತಿರವಾದರು.
ಯೂಟ್ಯೂಬ್ ಮೂಲಕ ಜನಪ್ರಿಯತೆ
ಡಬ್‌ಸ್ಮಾಶ್ ವಿಡಿಯೋಗಳ ಮೂಲಕ ಮೊದಲು ಗುರುತಿಸಿಕೊಂಡ ಇವರು, ನಂತರ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಸೆಲೆಬ್ರಿಟಿಗಳನ್ನು ಸಂದರ್ಶಿಸುವ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು.
ಆರ್‌ಜಿವಿ ಸಂದರ್ಶನದಿಂದ ಸಿಕ್ಕ ಬ್ರೇಕ್
ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರೊಂದಿಗೆ ಅಶು ರೆಡ್ಡಿ ನಡೆಸಿದ ಸಂದರ್ಶನವು ಇವರ ಕ್ರೇಜ್ ಮತ್ತು ಜನಪ್ರಿಯತೆಯನ್ನು ಸಂಪೂರ್ಣವಾಗಿ ಬೇರೆ ಮಟ್ಟಕ್ಕೇರಿಸಿತು.
ಸಿನಿಮಾ ಹಾಗೂ ವೆಬ್ ಸೀರೀಸ್
ಕೆಲವು ಸಿನಿಮಾಗಳಲ್ಲಿ ನಾಯಕಿಯ ಗೆಳತಿಯಾಗಿ ನಟಿಸಿ ಯುವಕರ ಮನಗೆದ್ದಿರುವ ಇವರು, ಬಿಗ್ ಬಾಸ್ ನಂತರ ವಿಶೇಷ ಕಾರ್ಯಕ್ರಮಗಳು, ಸಿನಿಮಾಗಳು ಹಾಗೂ ವೆಬ್ ಸೀರೀಸ್‌ಗಳಲ್ಲಿ ಸತತವಾಗಿ ನಟಿಸುತ್ತಿದ್ದಾರೆ.
ಸ್ವಿಮ್ಮಿಂಗ್ ಪೂಲ್ ಬಳಿ ಗ್ಲಾಮರಸ್
ಇನ್‌ಸ್ಟಾಗ್ರಾಮ್‌ನಲ್ಲಿ ಸದಾ ಸಕ್ರಿಯರಾಗಿರುವ ಅಶು, ಇತ್ತೀಚೆಗಷ್ಟೇ ಸ್ವಿಮ್ಮಿಂಗ್ ಪೂಲ್ ಬಳಿ ತಮ್ಮ ಸ್ಟೈಲಿಶ್ ಹಾಗೂ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡಿದ್ದು, ಆ ಚಿತ್ರಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಫ್ಯಾನ್ಸ್ ಫಿದಾ
ಹಾಟ್ ಅವರಾತದಲ್ಲಿ ಅಶು ರೆಡ್ಡಿಯವರ ಮೈಮಾಟವನ್ನು ನೋಡಿ ಫಿದಾ ಆಗಿರುವ ಫ್ಯಾನ್ಸ್ ತರಹೇವಾರಿ ಕಾಮೆಂಟ್ಗಳ ಮೂಲಕ ಜೂನಿಯರ್ ಸಮಂತಾರ ಸೌಂದರ್ಯವನ್ನು ಕೊಂಡಾಡುತ್ತಿದ್ದಾರೆ.