ನಟಿ ಆಶಿಕಾ ರಂಗನಾಥ್ ಕೆಂಪು ಬಣ್ಣದ ಸೀರೆಯಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಮಿಂಚಿದ್ದಾರೆ. ಚಿನ್ನದ ಬಣ್ಣದ ಬ್ಲೌಸ್ ಮತ್ತು ಆಭರಣಗಳು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.
ಮಿಸ್ ಫ್ರೆಶ್ ಫೇಸ್
ಕಾಲೇಜು ದಿನಗಳಲ್ಲೇ ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಇವರು 2014ರಲ್ಲಿ 'ಕ್ಲೀನ್ ಅಂಡ್ ಕ್ಲಿಯರ್ ಮಿಸ್ ಫ್ರೆಶ್ ಫೇಸ್' ಸ್ಪರ್ಧೆಯಲ್ಲಿ ರನ್ನರ್-ಅಪ್ ಆಗಿ ಹೊರಹೊಮ್ಮಿದರು. ಇದು ಅವರ ಚಿತ್ರರಂಗದ ಪ್ರವೇಶಕ್ಕೆ ದಾರಿಯಾಯಿತು.
ಸ್ಯಾಂಡಲ್‌ವುಡ್ ಎಂಟ್ರಿ
2016ರಲ್ಲಿ ಪ್ರೀತ್ ಜಯನ್ ಅವರ ನಿರ್ದೇಶನ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಶಿವರಾಜ್‌ಕುಮಾರ್ ನಟನೆಯ 'ಕ್ರೇಜಿ ಬಾಯ್' ಚಿತ್ರದ ಮೂಲಕ ಆಶಿಕಾ ರಂಗನಾಥ್ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡಿದರು.
ಉಡುಗೆ ಮತ್ತು ಆಭರಣಗಳ
ಕಂಠಹಾರ, ಕಿವಿಯೋಲೆ, ಉಂಗುರ ಮತ್ತು ಬಳೆಗಳು ಸೀರೆಯೊಂದಿಗೆ ಅತ್ಯುತ್ತಮವಾಗಿ ಹೊಂದಿಕೊಂಡಿವೆ. ಆಭರಣಗಳ ಆಯ್ಕೆ ರಾಜಮನೆತನದ ಶೈಲಿಯನ್ನು ನೆನಪಿಸುವಂತಿದ್ದು, ಅವರ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರುಗು ತಂದಿದೆ.
ಪ್ರಮುಖ ಕನ್ನಡ ಚಿತ್ರಗಳು
ಮುಗುಳು ನಗೆ, ತಾಯಿಗೆ ತಕ್ಕ ಮಗ, ರಾಂಬೋ 2, ಅವತಾರ ಪುರುಷ, ರೇಮೋ, ಮತ್ತು ಮಧಗಜ.
ಪ್ರಶಸ್ತಿಗಳು
'ರೇಮೋ' ಚಿತ್ರದ ನಟನೆಗಾಗಿ ಪ್ರತಿಷ್ಠಿತ SIIMA ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ 'ರ್ಯಾಂಬೋ 2' ಮತ್ತು 'ಮದಗಜ' ಚಿತ್ರಗಳಿಗಾಗಿ ಸೈಮಾ ಹಾಗೂ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದಾರೆ. 'ಬೆಂಗಳೂರು ಟೈಮ್ಸ್ ಮೋಸ್ಟ್ ಡಿಸೈರಬಲ್ ವುಮನ್' ಪಟ್ಟಿಯಲ್ಲೂ ಇವರು ಮುಂಚೂಣಿ ಸ್ಥಾನ ಪಡೆದಿದ್ದಾರೆ.