''ಬ್ಲ್ಯೂ'' ಮ್ಯಾಜಿಕ್​ ಮಾಡಿದ ಆಶಿಕಾ ರಂಗನಾಥ್​​

ಭೂಮಿಕಾ ವಿ. ನಾಥ್​​​

''ಬ್ಲ್ಯೂ'' ಮ್ಯಾಜಿಕ್​ ಮಾಡಿದ ಆಶಿಕಾ ರಂಗನಾಥ್​​

ಮಾಸ್ ಲೀಡರ್, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ರಾಂಬೋ-2, ಗರುಡ, ತಾಯಿಗೆ ತಕ್ಕ ಮಗ, ಅವತಾರ ಪುರುಷ ಭಾಗ 1 ಮತ್ತು ಭಾಗ 2, ಮದಗಜ, ರೆಮೋ, ಹೀಗೆ ಹೊಸಬರ ಮತ್ತು ಹಳಬರ ಚಿತ್ರಗಳಲ್ಲಿ ಅವಕಾಶ ಪಡೆಯುತ್ತಲೇ, ಕನ್ನಡದ ಬೇಡಿಕೆಯ ನಾಯಕಿ ಆಶಿಕಾ ಬ್ಲ್ಯೂ ಲೆಹೆಂಗಾ ತೊಟ್ಟು ಮಿಂಚಿದ್ದಾರೆ.

''ಬ್ಲ್ಯೂ ಲೆಹೆಂಗಾ'' ತೊಟ್ಟು ಪೋಸ್​​

ಬ್ಲ್ಯೂ ಲೆಹೆಂಗಾ ತೊಟ್ಟು ಆಶಿಕಾ ರಂಗನಾಥ್ ಹೊಚ್ಚ ಹೊಸ ಫೋಟೊ ಶೇರ್​​ ಮಾಡಿಕೊಂಡಿದ್ದು, ಅನೇಕರ ಕಣ್ಮನ ಸೆಳೆಯುತ್ತಿದ್ದಾರೆ.

ಸಹಜ ಸುಂದರಿ ಎಂಬ ಬಿರುದು

ಸಹಜ ಸೌಂದರ್ಯದಿಂದ ಅನೇಕರ ಹೃದಯವನ್ನು ಗೆದ್ದ ಬೆಡಗಿ. ಇದಕ್ಕೆ ಕೈಗನ್ನಡಿ ಎಂಬಂತೆ ಇರುವ ಈ ನಯಾ ಭಾವಚಿತ್ರಗಳನ್ನು ನೋಡಿದ ಅನೇಕರು ಆಶಿಕಾ ಅವರಿಗೆ ಸಹಜ ಸುಂದರಿ ಎಂಬ ಬಿರುದನ್ನು ಕೂಡ ನೀಡುತ್ತಿದ್ದಾರೆ.

ಆಶಿಕಾ ರಂಗನಾಥ್ ಈಗ ಕೇವಲ ಕನ್ನಡ ನಾಯಕಿಯಲ್ಲ

ಆಶಿಕಾ ರಂಗನಾಥ್ ಈಗ ಕೇವಲ ಕನ್ನಡ ನಾಯಕಿಯಲ್ಲ. ತ್ರಿಭಾಷಾ ನಟಿ ಕೂಡ ಹೌದು. ಪಟ್ಟತ್ತು ಅರಸನ್ ಮೂಲಕ ತಮಿಳು ಚಿತ್ರರಂಗವನ್ನು ಪ್ರವೇಶಿಸಿದ್ದ ಆಶಿಕಾ ಆ ನಂತರ ಅಮಿಗೊಸ್ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದರು.

ನಾಗಾರ್ಜುನ ಜೊತೆ ತೆರೆ ಹಂಚಿಕೊಂಡ ಆಶಿಕಾ

ಅಮಿಗೊಸ್ ನಂತರ ನಾ ಸಾಮಿ ರಂಗ ಚಿತ್ರದಲ್ಲಿ ನಾಗಾರ್ಜುನ ಜೊತೆ ತೆರೆ ಹಂಚಿಕೊಂಡ ಆಶಿಕಾ ಆ ನಂತರ ಮಿಸ್ ಯೂ ಎಂಬ ತಮಿಳು ಚಿತ್ರವನ್ನು ಕೂಡ ಮಾಡಿದರು.