ಪ್ರಸ್ತುತ ಸ್ಯಾಂಡಲ್ವುಡ್ನಲ್ಲಿ ಇರುವ ಸ್ಟಾರ್ ನಟಿಯರಲ್ಲಿ ಆಶಿಕಾ ರಂಗನಾಥ್ ಕೂಡ ಒಬ್ಬರು. ಕೌಟುಂಬಿಕ ಪಾತ್ರಗಳಿಗೂ ಸೈ ಹಾಗೂ ಮೈಮಾಟ ಪ್ರದರ್ಶಿಸುವ ಬೋಲ್ಡ್ ಪಾತ್ರಗಳಿಗೂ ಸೈ.
ಹಾಸನ ಕುವರಿ
ಆಶಿಕಾ ರಂಗನಾಥ್ ಅವರು 1996ರ ಆಗಸ್ಟ್ 5ರಂದು ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಜನಿಸಿದರು. ತಂದೆ ಎನ್. ರಂಗನಾಥ್ ಸಿವಿಲ್ ಕಾಂಟ್ರಾಕ್ಟರ್ ಮತ್ತು ತಾಯಿ ಬಿ. ಸುಧಾ ರಂಗನಾಥ್ ಗೃಹಿಣಿ. ಅಕ್ಕ ಅನುಷಾ ರಂಗನಾಥ್ ಕೂಡ ನಟಿ.
ಕ್ರೇಜಿ ಎಂಟ್ರಿ
ಆಶಿಕಾ ಅವರು Clean and Clear Fresh Face Bangalore ಸ್ಪರ್ಧೆಯಲ್ಲಿ ರನರ್-ಅಪ್ ಆಗಿ ಗಮನ ಸೆಳೆದರು. ನಂತರ ನಿರ್ದೇಶಕ ಮಹೇಶ್ ಬಾಬು ಅವರಿಂದ 'ಕ್ರೇಜಿ ಬಾಯ್' (2016) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
ಸಾಲು ಸಾಲು ಸಿನಿಮಾ
ಕ್ರೇಜಿ ಬಾಯ್ ಬಳಿಕ ರ್ಯಾಂಬೋ, ಮದಗಜ, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ತಾಯಿಗೆ ತಕ್ಕ ಮಗ, ಅವತಾರ ಪುರುಷ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಆಶಿಕಾ ನಟಿಸಿದ್ದಾರೆ ಮತ್ತು ಇಂದಿಗೂ ಸಕ್ರಿಯರಾಗಿದ್ದಾರೆ.
ಬಹುಭಾಷ ನಟಿ
ಆಶಿಕಾ ಅವರು ಕೇವಲ ಕನ್ನಡ ಭಾಷೆಗೆ ಸೀಮಿತವಾಗಿಲ್ಲ. ಇದೀಗ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ. ತಮಿಳಿನಲ್ಲಿ ಪಟ್ಟತು ಅರಸನ್, ತೆಲಗಿನಲ್ಲಿ ಅಮಿಗೋಸ್, ನಾ ಸಾಮಿ ರಂಗ, ಭರ್ತ ಮಹಾಸಾಯುಲಕು ವಿಜ್ಞಪ್ತಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕೆಂಪು ಸೀರೆಯಲ್ಲಿ ಬೋಲ್ಡ್ ಲುಕ್
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಆಶಿಕಾ, ಆಗಾಗ ಹಾಟ್ ಫೋಟೋಗಳನ್ನು ಹರಿಬಿಡುತ್ತಲೇ ಇರುತ್ತಾರೆ. ಇದೀಗ ಕೆಂಪು ಸೀರೆ ತೊಟ್ಟು, ಕ್ಯಾಮೆರಾ ಮುಂದೆ ಮಾದಕ ನೋಟ ಬೀರಿದ್ದಾರೆ.
ಫ್ಯಾನ್ಸ್ ಫಿದಾ
ಕೆಂಪು ಸೀರೆಯಲ್ಲಿ ಆಶಿಕಾರ ಮೈಮಾಟಕ್ಕೆ ಫಿದಾ ಆಗಿರುವ ಅಭಿಮಾನಿಗಳು ಅವರ ಸೌಂದರ್ಯವನ್ನು ಹೊಗಳಿ ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ.