ಬೋರ್ಡ್ ಪರೀಕ್ಷೆಯ ಭಯವೇ? ಟಾಪರ್ ಆಗಲು ಇಲ್ಲಿವೆ ಗೋಲ್ಡನ್ ಟಿಪ್ಸ್!

ಭಾನುಪ್ರಿಯ ಡಿ.ಕೆ

ಬೋರ್ಡ್ ಪರೀಕ್ಷೆಯ ಭಯವೇ? ಟಾಪರ್ ಆಗಲು ಇಲ್ಲಿವೆ ಗೋಲ್ಡನ್ ಟಿಪ್ಸ್!

ಪರೀಕ್ಷೆ ಹತ್ತಿರ ಬಂದ ಕೂಡಲೇ ಸಾಮಾನ್ಯವಾಗಿ ವಿದ್ಯಾರ್ಥಿಗಳು ಹೆದರುವುದರುಂಟು. ಇದರಿಂದ ಕಲಿತದ್ದನ್ನು ಮರೆತು ಕಡಿಮೆ ಅಂಕಗಳನ್ನು ಪಡೆಯುತ್ತಾರೆ. ಈ ಎಲ್ಲಾ ಸಲಹೆಗಳನ್ನು ಬಳಸಿಕೊಂಡರೆ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆಯುವುದು ಗ್ಯಾರಂಟಿ.

ಸಿಲಬಸ್ ಅರ್ಥಮಾಡಿಕೊಂಡು ಸರಿಯಾದ ಸ್ಟಡಿ ಪ್ಲಾನ್ ಮಾಡಿ

ಮೊದಲು ಪೂರ್ತಿ ಸಿಲಬಸ್ ಮತ್ತು ಎಕ್ಸಾಂ ಪ್ಯಾಟರ್ನ್ ಚೆನ್ನಾಗಿ ನೋಡಿ. ನಂತರ ವಾರದ ಟೈಮ್‌ ಟೇಬಲ್ ತಯಾರಿಸಿಕೊಳ್ಳಿ. ಪ್ರತಿ ವಿಷಯಕ್ಕೆ ಸಮಯ ಹಂಚಿಕೆ, ಕಷ್ಟದ ವಿಷಯಗಳಿಗೆ ಹೆಚ್ಚು ಟೈಮ್ ಕೊಡಿ. ಪ್ರತಿದಿನ ನಿಯಮಿತವಾಗಿ ಓದಿ.

ಕಾನ್ಸೆಪ್ಟ್ ಅರ್ಥಮಾಡಿಕೊಳ್ಳಿ, ಕಂಠಪಾಠ ಮಾಡಬೇಡಿ

ಟೆಕ್ಸ್ಟ್‌ಬುಕ್‌ಗಳನ್ನು ಮೂಲ ಆಧಾರವಾಗಿಟ್ಟುಕೊಳ್ಳಿ – ಎಲ್ಲಾ ಉದಾಹರಣೆಗಳು, ಡಯಾಗ್ರಾಂ, ಸೂತ್ರಗಳನ್ನು ಅರ್ಥಮಾಡಿಕೊಳ್ಳಿ. ಇದರಿಂದ ಅಪ್ಲಿಕೇಶನ್ ಪ್ರಶ್ನೆಗಳಿಗೆ ಉತ್ತರ ಬರೆಯಲು ಸುಲಭವಾಗುತ್ತದೆ ಮತ್ತು ಮರೆತುಹೋಗುವುದಿಲ್ಲ.

ಸ್ಯಾಂಪಲ್ ಪೇಪರ್‌ಗಳನ್ನು ಹೆಚ್ಚು ಪ್ರಾಕ್ಟೀಸ್ ಮಾಡಿ

ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳು, ಮಾಡೆಲ್ ಪೇಪರ್‌ಗಳನ್ನು ಸಮಯ ಮಿತಿಯೊಳಗೆ ಬರೆಯಿರಿ. ಟೈಮ್ ಮ್ಯಾನೇಜ್‌ಮೆಂಟ್ ಕಲಿಯಿರಿ. ತಪ್ಪುಗಳನ್ನು ಎರರ್ ನೋಟ್‌ಬುಕ್‌ನಲ್ಲಿ ಬರೆದುಕೊಳ್ಳಿ ಮತ್ತು ಮರುಪರಿಶೀಲಿಸಿ.

ಉತ್ತರ ಬರೆಯುವ ರೀತಿಯನ್ನು ಸುಧಾರಿಸಿ

ಪರೀಕ್ಷೆಯಲ್ಲಿ ಪ್ರಶ್ನೆ ಚೆನ್ನಾಗಿ ಓದಿ, ಪಾಯಿಂಟ್‌ಗಳಲ್ಲಿ ಬರೆಯಿರಿ. ಡಯಾಗ್ರಾಂ, ಫಾರ್ಮುಲಾ, ಟೇಬಲ್‌ಗಳನ್ನು ಸ್ಪಷ್ಟವಾಗಿ ಡ್ರಾ ಮಾಡಿ. ಸ್ಪಷ್ಟ ಹಸ್ತಾಕ್ಷರ, ಸರಿಯಾದ ಸ್ಪೆಲಿಂಗ್, ವ್ಯಾಕರಣ ಇರಲಿ.

ಆರೋಗ್ಯ ಮತ್ತು ಮನಸ್ಸನ್ನು ಸರಿಯಾಗಿ ನಿರ್ವಹಿಸಿ

ಪ್ರತಿದಿನ 7-8 ಗಂಟೆ ನಿದ್ರೆ, ಆರೋಗ್ಯಕರ ಆಹಾರ, ಸ್ವಲ್ಪ ವ್ಯಾಯಾಮ ಅಥವಾ ವಾಕ್ ಮಾಡಿ. ಒತ್ತಡ ಬಂದರೆ ಡೀಪ್ ಬ್ರೀಥಿಂಗ್ ಅಥವಾ 5 ನಿಮಿಷ ಬ್ರೇಕ್ ತೆಗೆದುಕೊಳ್ಳಿ. ಪಾಸಿಟಿವ್ ಆಗಿರಿ, ಸ್ವಂತದಲ್ಲಿ ವಿಶ್ವಾಸ ಇರಲಿ.