ಅಪ್ಸರೆಯ ಮಾದಕ ನೋಟ

ರಮೇಶ್​ ಕುಮಾರ್​​ ಬಿ ಎಡಮೋಳೆ

ಅಪ್ಸರೆಯ ಮಾದಕ ನೋಟ

ಟಾಲಿವುಡ್ ಉದ್ಯಮದಲ್ಲಿ ತನ್ನ ಹಾಟ್​ ಬ್ಯೂಟಿಯಿಂದಲೇ ಗುರುತಿಸಿಕೊಂಡಿರುವ ಅಪ್ಸರಾ ರಾಣಿ, ಐಟಂ ಸಾಂಗ್​​ಗಳಿಗೆ ಹೆಸರುವಾಸಿ. ಅವರ ಗ್ಲಾಮರ್ ಡೋಸ್ ಬಗ್ಗೆ ಎಷ್ಟೇ ಮಾತನಾಡಿದರೂ ಸಾಲಲ್ಲ.

ಅಂಕೇತಾ ಮಹಾರಾಣಾ

ಅಪ್ಸರಾ ರಾಣಿಯ ನಿಜವಾದ ಹೆಸರು ಅಂಕೇತಾ ಮಹಾರಾಣಾ. ಈಕೆ 1996 ಜನವರಿ 12 ರಂದು ಉತ್ತರಾಖಂಡದ ಡೆಹರಾಡೂನ್‌ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದಲೇ ನಟನೆಯ ಕಡೆಗೆ ಆಕರ್ಷಿತರಾದರು.

ಕರ್ನಾಟಕದಲ್ಲಿ ಶಿಕ್ಷಣ

ಉತ್ತರಾಖಂಡದ ಖಾಸಗಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣ ಪೂರ್ಣಗೊಳಿಸಿದ ಅಪ್ಸರಾ ಅವರು, ನಂತರ ಬೆಳಗಾವಿಯ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (GIT)ನಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿದರು.

ಆರ್​ಜಿವಿ ಪರಿಚಯಿಸಿದ ಸುಂದರಿ

2017ರಲ್ಲಿ ಲೆಜೆಂಡರಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ "ಥ್ರಿಲ್ಲರ್" ಚಿತ್ರದ ಮೂಲಕ ತೆಲುಗು ಸಿನಿಮಾ ಜಗತ್ತಿಗೆ ಎಂಟ್ರಿ ನೀಡಿದರು.

ಹೆಸರು ಬದಲಾವಣೆ

ತಮ್ಮ ಮೊದಲ ಚಿತ್ರದಲ್ಲಿ ತಮ್ಮ ಹೆಸರನ್ನು ರಾಮ್ ಗೋಪಾಲ್ ವರ್ಮಾರ ಸಲಹೆಯ ಮೇರೆಗೆ ಅಂಕೇತಾ ಮಹಾರಾಣಾದಿಂದ ಅಪ್ಸರಾ ರಾಣಿಗೆ ಬದಲಾಯಿಸಲಾಯಿತು.

ಮೊದಲ ಲೆಸ್ಬಿಯನ್​ ಕ್ರೈಂ ಚಿತ್ರ

"4 ಲೆಟರ್ಸ್" (2017), "ಊಲ್ಲಳ್ಳಾ ಊಲ್ಲಳ್ಳಾ" (2020), "ಕ್ರ್ಯಾಕ್" (2021, ರವಿ ತೇಜ ನಟನೆ), "ಡಿ ಕಂಪನಿ" (2021), "ಡೇಂಜರಸ್" (2022, ಭಾರತದ ಮೊದಲ ಲೆಸ್ಬಿಯನ್ ಕ್ರೈಮ್ ಥ್ರಿಲ್ಲರ್) ಮತ್ತು "ರಚರಿಕಾಂ" (2024) ಚಿತ್ರಗಳಲ್ಲಿ ನಟನೆ.

ಅಪ್ಸರಾ ಹಾಟ್​

ಕನ್ನಡ, ತೆಲುಗು ಮತ್ತು ಒಡಿಯಾ ಚಿತ್ರಗಳಲ್ಲಿ ಅಪ್ಸರಾ ಕೆಲಸ ಮಾಡಿದ್ದಾರೆ. ಅವರ ಫೋಟೋಗಳು ಆಗಾಗ ಟ್ರೋಲ್‌ ಆಗುತ್ತಿರುತ್ತವೆ. ಆದರೆ, ಇದ್ಯಾವುಕ್ಕೂ ತಲೆ ಕೆಡಿಸಿಕೊಳ್ಳದೇ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಅಪ್ಸರಾ ಮೈಮಾಟಕ್ಕೆ ಫಿದಾ

ಇತ್ತೀಚೆಗೆ ಅಪ್ಸರಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಕಪ್ಪು ಬಣ್ಣದ ಟಾಪ್​ ಮತ್ತು ಸ್ಕರ್ಟ್ ಧರಿಸಿ, ಕ್ಯಾಮೆರಾ ಕಣ್ಣಿಗೆ ಮಾದಕ ನೋಟ ಬೀರಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಪ್ಸರಾ ಮೈಮಾಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.