ಈ ಆರೋಗ್ಯ ಸಮಸ್ಯೆ ಇದ್ದವರಿಗೆ ಸೇಬುಹಣ್ಣು ಶಾಪ!

ಮಣಿಕಂಠ ಪಾ ಹಿರೇಮಠ

ಈ ಆರೋಗ್ಯ ಸಮಸ್ಯೆ ಇದ್ದವರಿಗೆ ಸೇಬುಹಣ್ಣು ಶಾಪ!

ಆರೋಗ್ಯ ವೃದ್ಧಿಗೆ ಹಣ್ಣುಗಳು ಉತ್ತಮವಾದರೂ, ಅತಿಯಾದರೆ ಅಮೃತವೂ ವಿಷ ಎಂಬಂತೆ ಎಲ್ಲರ ದೇಹಪ್ರಕೃತಿಗೆ ಇವು ಒಗ್ಗುವುದಿಲ್ಲ. ಎದುರಿಸುತ್ತಿರುವ ಅನಾರೋಗ್ಯದ ಆಧಾರದ ಮೇಲೆ ಕೆಲವು ಪೌಷ್ಟಿಕ ಆಹಾರಗಳ ಸೇವನೆಯೂ ಅಪಾಯ ತರಬಹುದು, ಆದ್ದರಿಂದ ಜಾಗರೂಕತೆ ಅತ್ಯಗತ್ಯ.

ಮಧುಮೇಹಿಗಳು

ಸೇಬಿನಲ್ಲಿ ಹೆಚ್ಚಿನ ಪ್ರಮಾಣದ ನೈಸರ್ಗಿಕ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಇರುವುದರಿಂದ, ಅತಿಯಾಗಿ ಸೇವಿಸಿದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ತಕ್ಷಣವೇ ಏರಿಕೆಯಾಗಬಹುದು.

ಜೀರ್ಣಾಂಗ ಸಮಸ್ಯೆ ಇರುವವರು

ಸೇಬಿನಲ್ಲಿರುವ ಫ್ರಕ್ಟೋಸ್ ಮತ್ತು ಫೈಬರ್ ಅಂಶವು ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಹಾಗೂ ಅತಿಸಾರಕ್ಕೆ ಕಾರಣವಾಗಬಹುದು.

ಹಲ್ಲಿನ ಎನಾಮೆಲ್ ತೊಂದರೆ ಇರುವವರು:

ಸೇಬಿನಲ್ಲಿರುವ ನೈಸರ್ಗಿಕ ಆಮ್ಲೀಯತೆಯು ಹಲ್ಲುಗಳ ಹೊರಕವಚವಾದ ಎನಾಮೆಲ್ ಅನ್ನು ಸವೆಸಿ ಹಲ್ಲುಗಳನ್ನು ದುರ್ಬಲಗೊಳಿಸಬಹುದು.

ಅಲರ್ಜಿ ಸಮಸ್ಯೆ ಉಳ್ಳವರು:

ಪೋಲನ್ ಆಪಲ್ ಸಿಂಡ್ರೋಮ್ ಇರುವವರಿಗೆ ಸೇಬು ತಿಂದ ತಕ್ಷಣ ಬಾಯಿ ನುರಿತ, ತುಟಿ ಮತ್ತು ಗಂಟಲಿನಲ್ಲಿ ಬಾವು ಉಂಟಾಗುವ ಸಾಧ್ಯತೆ ಇರುತ್ತದೆ.

ಕಡಿಮೆ ರಕ್ತದೊತ್ತಡ ಇರುವವರು

ಸೇಬುಹಣ್ಣಿನಲ್ಲಿರುವ ಅಧಿಕ ಪೊಟ್ಯಾಶಿಯಂ ರಕ್ತದೊತ್ತಡವನ್ನು ಮತ್ತಷ್ಟು ತಗ್ಗಿಸುವುದರಿಂದ ಲೋ ಬಿಸಿಪಿ ಸಮಸ್ಯೆ ಇರುವವರು ಮಿತವಾಗಿ ಸೇವಿಸಬೇಕು.