ಕಟ್ಟಳೆಗಳ 'ಪರದಾ' ಸರಿಸಿದ ಅನುಪಮಾ

ಮಮತಾ

ಕಟ್ಟಳೆಗಳ 'ಪರದಾ' ಸರಿಸಿದ ಅನುಪಮಾ

ಪುನೀತ್​ ರಾಜ್​ಕುಮಾರ್​ ನಟನೆಯ ನಟ ಸಾರ್ವಭೌಮ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲೂ ತಮ್ಮ ಫ್ಯಾನ್ಸ್ ಸಮೂಹ ಪಡೆದುಕೊಂಡಿರುವ ನಟಿ ಅನುಪಮಾ ಪರಮೇಶ್ವರನ್​ ಅವರು ಮತ್ತೆ ಸೋಶಿಯಲ್​ ಮೀಡಿಯಾಗೆ ಕಂಬ್ಯಾಕ್​ ಆಗಿದ್ದಾರೆ. ಸೋಮವಾರ ಇನ್​ಸ್ಟಾಗ್ರಾಮ್​ನಲ್ಲಿ ಅವರು ಹಂಚಿಕೊಂಡಿರುವ ವಿಡಿಯೋ ಹಾಗೂ ಪೋಸ್ಟ್ ಸಾಕಷ್ಟು ಸದ್ದು ಮಾಡುತ್ತಿದೆ.

ಸ್ವತ್ರಂತ್ಯವಾಗಿದ್ದೇನೆ

ಇನ್ಮುಂದೆ ಯಾರ ಅನುಮತಿ ಕೇಳಬೇಕಿಲ್ಲ. ಯಾರ ಭಯವೂ ಇಲ್ಲ. ಇಷ್ಟ ಬಂದದನ್ನು ಪೋಸ್ಟ್​ ಮಾಡಬಹುದು, ಹಾಡು ಹಾಕಬಹುದು ಎಂದು ಅನುಪಮಾ ಅವರು ದಿಢೀರನೆ ಪೋಸ್ಟ್ ಮಾಡಿದ್ದರು. ಸೋಶಿಯಲ್​ ಮೀಡಿಯಾದಿಂದ ದೂರವಿದ್ದು ಏಕಾಏಕಿ ಇಂತಹ ಪೋಸ್ಟ್​ಗಳನ್ನು ಹಂಚಿಕೊಂಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.

ಪ್ರೇಮಂ ಮೂಲಕ ಪಾದಾರ್ಪಣೆ

ಮೂಲತಃ ಕೇರಳದವರಾದ ಅನುಪಮಾ ಹೆಚ್ಚು ಪರಿಚಿತರಾಗಿದ್ದು ಪ್ರೇಮಂ ಸಿನಿಮಾದಿಂದಾಗಿ ಬೆಳ್ಳಿ ತೆರೆಗೆ ಕಾಲಿಟ್ಟರು..ಅವರ ಕರ್ಲಿ ಹೇರ್​, ನ್ಯಾಚುರಲ್​ ಸ್ಕಿನ್​ ಟೋನ್​ ಪಡ್ಡೆ ಹುಡುಗರ ನಿದ್ದೆ ಕೆಡಿಸಿತ್ತು. ಪ್ರೇಮಂ ನಂತರ ಹೆಚ್ಚು ಸಿನಿಮಾ ಮಾಡಿದ್ದು ಟಾಲಿವುಡ್​​ನಲ್ಲಿ, ಕಾಲಿವುಡ್​​ನಲ್ಲಿಯೂ ಸಾಕಷ್ಟು ಸಿನಿಮಾಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಪ್ರಕೃತಿ ಮಡಿಲಲ್ಲಿ ಅನುಪಮಾ

ಕೇರಳದಲ್ಲಿ ಜನಿಸಿರುವ ಅನುಪಮಾ ಅವರಿಗೆ ಪ್ರಕೃತಿ ಮಡಿಲಲ್ಲಿ ತಂಗುವುದು ಅಚ್ಚರಿಯೇನಲ್ಲ. ಆದರೂ ಕೆಲವೊಮ್ಮೆ ಹಸಿರು ಒತ್ತಡದ ಬದುಕಿಗೆ ಒಂದು ರಿಲ್ಯಾಕ್ಸ್​​ ಮೂಡ್​ ಕೊಡುವ ಶಕ್ತಿಯಿದೆ. ಹೀಗಾಗಿ ಅನುಪಮಾ ಅವರು ಪ್ರಕೃತಿ ಹಾಗೂ ತಮ್ಮ ಕುಟುಂಬದ ಜೊತೆಗೆ ಕಳೆದಿರುವ ಫೋಟೋ ಹಂಚಿಕೊಂಡಿದ್ದಾರೆ

ಧ್ರುವ್​​, ಅನುಪಮಾ ಡೇಟಿಂಗ್​?

ಧ್ರುವ್​ ವಿಕ್ರಂ ಹಾಗೂ ಅನುಪಮಾ ಅವರು ಒಟ್ಟಾಗಿ ಓಡಾಡುತ್ತಿದ್ದಾರೆ. ಇಬ್ಬರು ಪ್ರೀತಿ ಮಾಡುತ್ತಿದ್ದಾರೆ ಎನ್ನುವ ವದಂತಿಗಳು ಹರಡಿದ್ದವು. ಬೈಸನ್​ ಸಿನಿಮಾ ರಿಲೀಸ್​ಗೂ ಮುನ್ನ ಪ್ರೀ ಈವೆಂಟ್ ಕಾರ್ಯಕ್ರಮದಲ್ಲಿ ಇಬ್ಬರು ನಾಚಿ ನೀರಾಗಿದ್ದ ಬಗ್ಗೆ ವಿಡಿಯೋ ವೈರಲ್ ಆಗಿತ್ತು. ಇವೆಲ್ಲ ಸತ್ಯ ಎಂದು ಪ್ರೂವ್​ ಆಗುವ ಮುನ್ನವೇ ಬ್ರೇಕಪ್​ ಸುದ್ದಿಗಳು ಹರಿದಾಡುತ್ತಿದೆ.

ಅನುಪಮಾ ಸಿನಿ ಪಯಣ

ಟಿಲ್ಲು ಸ್ಕ್ವೇರ್​​, ರಾಕ್ಷಸುಡು, ಕಾರ್ತೀಕೇಯ2, ಹೆಲೋ ಗುರು ಪ್ರೇಮ ಕೋಸಮೆ, 18 ಪೇಜಸ್​, ಶತಮಾನಂ ಭವತಿ, ಆಆ, ವುನ್ನದಿ ಒಕಟೆ ಜಿಂದಗಿ ಸೇರಿದಂತೆ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ರಾಮ್​ ಪೋತಿನೇನಿ ಹಾಗೂ ಅನುಪಮಾ ನಟಿಸಿದ ಎರಡು ಸಿನಿಮಾಗಳು ಹಿಟ್​ ಕಂಡಿದ್ದವು.

ಪರದಾ ಸಿನಿಮಾದಲ್ಲಿ ಡಿಫರೆಂಟ್​​ ಆಕ್ಟಿಂಗ್​

ಪ್ರವೀಣ್ ಕಂಡ್ರೇಗುಲ ನಿರ್ದೇಶನದ ಪರದಾ ಸಿನಿಮಾ 2025ರಲ್ಲಿ ರಿಲೀಸ್​ ಆಗಿತ್ತು. ಈ ಸಿನಿಮಾದಲ್ಲಿ ಅನುಪಮಾ ಅವರ ಅಭಿನಯ ಮಾತ್ರ ಜೀವಂತ. ಪದಾತಿ ಎನ್ನುವ ಹಳ್ಳಿಯಲ್ಲಿ ಮಹಿಳಯರು ಮುಖದ ಪರದೆ ತೆಗೆಯುವುದು ಸಂಹಾರಕ್ಕೆ ಕಾರಣ ಎನ್ನುವ ಮೂಡನಂಬಿಕೆಯನ್ನು ಒಬ್ಬ ಫೋಟೋಗ್ರಾಫರ್​ ಹೇಗೆ ಪರೋಕ್ಷವಾಗಿ ಸಹಾಯ ಮಾಡುತ್ತಾನೆ ಎನ್ನುವುದೇ ಕಥಾಹಂದರ. ಸಿನಿಮಾದಲ್ಲಿ ದರ್ಣಾ ರಾಜೇಂದ್ರನ್​​, ಸಂಗೀತಾ ಕ್ರಿಶ್​ ಸೇರಿದಂತೆ ಹಲವರು ಇದ್ದಾರೆ.

ಮರೀಚಿಕಾ

ಇತ್ತೀಚೆಗೆ ಅನುಪಮಾ ಹಾಗೂ ರೆಜಿನಾ ಕ್ಯಾಸಂಡ್ರಾ ಮತ್ತು ವಿರಾಜ್ ಅಶ್ವಿನ್ ನಟನೆಯ ಕ್ರೈಂ ಥ್ರಿಲ್ಲರ್​ ಸಿನಿಮಾವಾಗಿದೆ. ಇದರಲ್ಲಿ ಅನುಪಮಾರ ಡಿ ಗ್ಲಾಮರಸ್​ ಹಾಗೂ ಗ್ಲಾಮರಸ್​ ಆಕ್ಟಿಂಗ್​ ಭಾರಿ ಸದ್ದು ಮಾಡಿತ್ತು