ಮಲಯಾಳಂ ಸಿನಿಮಾ ಸುಂದರಿ ಅನುಪಮಾ ಪರಮೇಶ್ವರನ್ ತಮ್ಮ ಸೌಂದರ್ಯ ಮತ್ತು ನಟನೆಯಿಂದ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಕನ್ನಡಿಗರಿಗೂ ಪರಿಚಯ
ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಮಿಂಚಿರುವ ಅನುಪಮಾ, ಪುನೀತ್ ರಾಜ್ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾದಲ್ಲೂ ನಟಿಸುವ ಮೂಲಕ ಅನುಪಮಾ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ತ್ರಿಸ್ಸೂರ್ನಲ್ಲಿ ಜನನ
ಅನುಪಮಾ ಪರಮೇಶ್ವರನ್ ಕೇರಳದ ತ್ರಿಸ್ಸೂರ್ ಜಿಲ್ಲೆಯ ಇರಿಂಜಲಕುಡದಲ್ಲಿ 1996, ಫೆ. 18ರಂದು ಮಲಯಾಳಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಪರಮೇಶ್ವರನ್ ಎರೆಕ್ಕತ್ ಮತ್ತು ತಾಯಿ ಸುನಿತಾ ಪರಮೇಶ್ವರನ್.
ಮೊದಲ ಚಿತ್ರದಲ್ಲೇ ಯಶಸ್ಸು
2015ರಲ್ಲಿ ಮಲಯಾಳ ಚಿತ್ರ 'ಪ್ರೇಮಂ'ನಲ್ಲಿ ಮೇರಿ ಜಾರ್ಜ್ ಪಾತ್ರದ ಮೂಲಕ ಅಭಿನಯ ಜಗತ್ತಿಗೆ ಪರಿಚಯಿಸಿಕೊಂಡ ಅನುಪಮಾ, ನಿವಿನ್ ಪೌಲಿಯೊಂದಿಗೆ ನಟಿಸಿ ದೊಡ್ಡ ಯಶಸ್ಸು ಗಳಿಸಿದರು.
ಸಾಲು ಚಿತ್ರಗಳಲ್ಲಿ ನಟನೆ
ಮೊದಲ ಸಿನಿಮಾ ಯಶಸ್ಸಿನ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಅವುಗಳಲ್ಲಿ 'ಕೋಡಿ' (2016), 'ವುನ್ನಾದಿ ಒಕಟೆ ಜಿಂದಗಿ' (2017), 'ಶತಮಾಂಭವತಿ' (2017), 'ಕಾರ್ತಿಕೇಯ 2' (2022) 'ಟಿಲ್ಲು ಸ್ಕ್ವೇರ್' (2024) ಗಮನ ಸೆಳೆದವು.
ಮಾದಕ ಫೋಟೋಗಳು
ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಅನುಪಮಾ, ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಮಾದಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ವೈರಲ್ ಆಗುತ್ತಿದ್ದು, ಬಗೆಬಗೆಯ ಕಾಮೆಂಟ್ಗಳು ಹರಿದುಬರುತ್ತಿವೆ.