ವೈನ್​​​ ರೆಡ್ ಸೀರೆಯಲ್ಲಿ ಅನುಪಮಾ ಸ್ಟನ್ನಿಂಗ್ ಲುಕ್​

ಮಮತಾ

ವೈನ್​​​ ರೆಡ್ ಸೀರೆಯಲ್ಲಿ ಅನುಪಮಾ ಸ್ಟನ್ನಿಂಗ್ ಲುಕ್​

ಮಾಲಿವುಡ್​​, ಕಾಲಿವುಡ್​ ಹಾಗೂ ಸೌತ್​ ಇಂಡಿಯಾ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಅನುಪಮಾ ಪರಮೇಶ್ವರನ್​ ಅವರು ಮತ್ತೊಂದು ಹೊಸ ಫೋಟೋಶೂಟ್​ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ತಲೆಕೆಡಿಸುವ ಗುಂಗುರು ಕೂದಲು, ಸಿಂಪಲ್​ ಮೇಕಪ್​​, ಹಾಲ್ಗೆನ್ನೆ, ಮುಕ್ತ ನಗು ಪಡ್ಡೆ ಹುಡುಗರನ್ನು ಮಂತ್ರಮುಗ್ಧರನ್ನಾಗಿಸಿದೆ.

ಮಾದಕ ಲುಕ್

ವೈನ್ ರೆಡ್ ಸಿಲ್ಕ್ ಸೀರೆಯಲ್ಲಿ ಅವರು ಕಂಗೊಳಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಸೀರೆಗೆ ತಕ್ಕಂತೆ ಹಾಕಿರುವ ಸಾಂಪ್ರದಾಯಿಕ ಜುಮ್ಕಾ ಧರಿಸಿ, ಕೇಶವಿನ್ಯಾಸದೊಂದಿಗೆ ಫೋಸ್​​ಕೊಟ್ಟಿದ್ದಾರೆ

ಅನು ಪೋಸ್ಟ್​ ವೈರಲ್

ಇತ್ತೀಚೆಗೆ ಅನುಪಮಾ ಅವರು ಹಂಚಿಕೊಂಡಿದ್ದ ಪೋಸ್ಟ್​ ಸಾಕಷ್ಟು ಸದ್ದು ಮಾಡಿತ್ತು. ನನಗೆ ಇನ್ನೂ ಯಾರ ಅನುಮತಿ ಬೇಕಾಗಿಲ್ಲ. ನನ್ನ ಫೋಟೋಗಳನ್ನು ನನ್ನಿಷ್ಟದ ಹಾಡಿನೊಂದಿಗೆ ಹಾಕುವಷ್ಟು ಸ್ವತಂತ್ರ್ಯಳಾಗಿದ್ದೇನೆ ಎಂದು ಹೇಳಿದ್ದರು.

ಧ್ರುವ್​ ಜೊತೆಗೆ ಬ್ರೇಕಪ್

ಬೈಸನ್​ ಸಿನಿಮಾ ಮೂಲಕ ಧ್ರುವ್​​ ವಿಕ್ರಂ ಹಾಗೂ ಅನುಪಮಾ ಒಂದಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ರೂಮರ್ಸ್​ ಹರಡಿತ್ತು. ಆದರೆ, ಅದಕ್ಕೂ ಮುನ್ನವೇ ಅವರು ಹಂಚಿಕೊಂಡಿದ್ದ ಪೋಸ್ಟ್ ಕಂಡ ಫ್ಯಾನ್ಸ್​ ಬ್ರೇಕಪ್ ಆಗಿರ್ಬೇಕು ಎಂದು ಮಾತನಾಡಿಕೊಂಡಿದ್ದರು.

ಇತ್ತೀಚೆಗೆ ನಟಿಸಿದ ಸಿನಿಮಾವಿದು

'ಲಾಕ್‌ಡೌನ್' ಹಾಗೂ 'ಮರೀಚಿಕಾ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಪ್ರದೀಪ್ ರಂಗನಾಥನ್ ಜೊತೆಗಿನ ತಮಿಳು ಬ್ಲಾಕ್‌ಬಸ್ಟರ್ 'ಡ್ರ್ಯಾಗನ್' ಚಿತ್ರದಲ್ಲೂ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಪರದಾ ಸಿನಿಮಾ ಅವರಿಗೆ ಸಾಕಷ್ಟು ಹಿಟ್​ ತಂದುಕೊಟ್ಟಿತ್ತು

ಭೋಗ್​ ಹೊಸ ಸಿನಿಮಾ

ಶರ್ವಾನಂದ್ ನಟನೆಯ,ಸಂಪತ್ ನಂದಿ ನಿರ್ದೇಶನದ ಹೆಚ್ಚು ನಿರೀಕ್ಷಿತ ಅವಧಿಯ ಆಕ್ಷನ್ ಡ್ರಾಮಾ ಚಿತ್ರವಾದ 'ಭೋಗಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೂಲಕ ಅವರು ದೊಡ್ಡ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.