ಗುಲಾಬಿ ಸೀರೆಯಲ್ಲಿ ಮಿಂಚಿದ ಮಲಯಾಳಿ ಕುಟ್ಟಿ ಅನ್ನಾ ಬೆನ್

ಮಮತಾ

ಗುಲಾಬಿ ಸೀರೆಯಲ್ಲಿ ಮಿಂಚಿದ ಮಲಯಾಳಿ ಕುಟ್ಟಿ ಅನ್ನಾ ಬೆನ್

ಸಾಕಷ್ಟು ಮಹಿಳಾ ಪ್ರಧಾನ ಸಿನಿಮಾದಲ್ಲೇ ಕಾಣಿಸಿಕೊಳ್ಳುವ 26 ವರ್ಷದ ನಟಿ ಅನ್ನಾ ಬೆನ್​ ಸದ್ಯ ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ನಟ ಸಂಗೀತ ಪ್ರತಾಪ್ ಜೊತೆ ಈ ಸಿನಿಮಾದಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಅನ್ನಾ ಬೆನ್​ ಸೌಂದರ್ಯಕ್ಕೆ ಫ್ಯಾನ್ಸ್​ ಫಿದಾ

ಕೇರಳ ಮೂಲದವರಾದ ಅನ್ನಾಬೆನ್​ ನಗು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತದೆ. ಕಾಡಿಗೆ ಹಚ್ಚಿದ ಕಣ್ಗಳು, ಕರ್ಲಿ ಹೇರ್​ ಸಾಕಷ್ಟು ಸೌಂದರ್ಯವನ್ನು ಹೆಚ್ಚಿಸುತ್ತದೆ. ಗುಲಾಬಿ ಬಣ್ಣದ ಸೀರೆಯುಟ್ಟು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಅವರ ಫೋಟೋಗಳಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಕಾನ್ ಸಿಟಿ ಸಿನಿಮಾ ಒಟಿಟಿಗೆ ಲಗ್ಗೆ

ಅನ್ನಾ ಬೆನ್ ನಟನೆಯ ಕಾನ್ಸಿಟಿ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದೆ. ಇದೊಂದು ಕ್ರೈಮ್ ಡ್ರಾಮಾ ಸಿನಿಮಾವಾಗಿದ್ದು, ಇದೇ ಜುಲೈ 24ರಂದು ನೆಟ್​ಫ್ಲಿಕ್ಸ್​ನಲ್ಲಿ ನೋಡಬಹುದಾಗಿದೆ. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸದ್ದು ಮಾಡಲಿಲ್ಲ, ಆದರೆ ಸಿನಿಮಾ ಥಿಯೇಟರ್‌ಗಳಲ್ಲಿ ಸಿನಿಮಾ ನೋಡದ ಅನೇಕ ಜನರು ಡಿಜಿಟಲ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

'ಕುಂಬಳಂಗಿ ನೈಟ್ಸ್'ನಲ್ಲಿ ಜೀವಂತಿಕೆಯ ನಟನೆ

'ಕುಂಬಳಂಗಿ ನೈಟ್ಸ್' ಸಿನಿಮಾದಲ್ಲಿ ಅನ್ನಾಬೆನ್​ ಪಾತ್ರ ಹೆಚ್ಚು ಇಷ್ಟವಾಗುತ್ತದೆ. ಯುವಕನನ್ನು ಪ್ರೀತಿಸುವ ಪರಿ, ಇಬ್ಬರ ಅನೋನ್ಯತೆಯು ಲವರ್ಸ್​ ಎಂದರೆ ಹೀಗೆ ಇರಬೇಕು ಎಂದೆನಿಸುವಂತೆ ಮಾಡುತ್ತದೆ.

ಮಹಿಳಾ ಪ್ರಾಧಾನ್ಯ ಸಿನಿಮಾ ಆಯ್ಕೆ ಮಾಡುವ ಅನ್ನಾ ಬೆನ್​

ಅನ್ನಾ ಬೆನ್​ ಎಂದಿಗೂ ಮಹಿಳೆಗೆ ಹೆಚ್ಚು ಪ್ರಧಾನ್ಯ ಇರುವ ಸಿನಿಮಾವನ್ನು ಮಾತ್ರ ಆಯ್ಕೆ ಮಾಡುತ್ತಾರೆ. ಹೀಗಾಗಿಯೇ ಇವರು ಹೆಚ್ಚು ಇಷ್ಟವಾಗುತ್ತಾರೆ. ಅಷ್ಟೇ ಅಲ್ಲದೇ ಇವರ ಯಾವ ಸಿನಿಮಾದಲ್ಲಿಯೂ ಅಶ್ಲೀಲತೆಯಿಂದ ಕೂಡಿರೋದಿಲ್ಲ.

ಕೊಟ್ಟುಕ್ಕಲಿ ಸಿನಿಮಾದಲ್ಲಿ ಅಬ್ಬರ

ಹೆಲೆನ್​, ಕಪ್ಪೆಲಾ, ಕುಂಬಳಂಗಿ ನೈಟ್ಸ್​​, ಸಾರಾಸ್​, ಕೊಟ್ಟುಕ್ಕಲಿ ಸೇರಿದಂತೆ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ಇವರ ನಟನೆ ಜೀವಂತಿಕೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ