'ಕೊಯಮತ್ತೂರು ಮಾಪಿಳ್ಳೈ' ಸಿನಿಮಾದಲ್ಲಿ ಅನ್ನಾ ಬೆನ್​

ಮಮತಾ

'ಕೊಯಮತ್ತೂರು ಮಾಪಿಳ್ಳೈ' ಸಿನಿಮಾದಲ್ಲಿ ಅನ್ನಾ ಬೆನ್​

ಕಿಶೋರ್​ ರಾಜ್​ಕುಮಾರ್​ ನಿರ್ದೇಶನದ 'ಕೊಯಮತ್ತೂರು ಮಾಪಿಳ್ಳೈ' ಸಿನಿಮಾದಲ್ಲಿ ಕುಂಬಳಂಗಿ ನೈಟ್ಸ್​​ ಖ್ಯಾತಿಯ ನಟಿ ಅನ್ನಾಬೆನ್​ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಅವರ ಹೆಸರು ಕನಗವಲ್ಲಿಯಾಗಿರಲಿದ್ದು, ಅವರ ಫಸ್ಟ್​ಲುಕ್​ ಅನ್ನು ಸಿನಿಮಾ ತಂಡ ರಿಲೀಸ್​ ಮಾಡಿದೆ.

ಓಣಂ ಸೀರೆಯಲ್ಲಿ ರಾಣಿಯಂತೆ ಕಂಡ ಅನ್ನಾ

ಅನ್ನಾ ಬೆನ್​ ಅವರು ಅಂಚಿನಲ್ಲಿ ಮರೂನ್​​ ಬಣ್ಣವಿರುವ ಜರಿಯ ಬಿಳಿ ಬಣ್ಣದ ಸೀರೆಯನ್ನುಟ್ಟು ಹಳೆ ಕಾಲದಲ್ಲಿ ಮಹಿಳೆಯರು ಉಡುತ್ತಿದ್ದ ಶೈಲಿಯಂತೆ ಸೀರೆಯುಟ್ಟು ಮಿಂಚಿದ್ದಾರೆ. ಸಿಂಪಲ್​ ಮೇಕಪ್​, ದುಂಡನೆಯ ಕಣ್ಣು, ಬಾಯ್ತುಂಬ ನಗು ಅವರ ಅಂದವನ್ನು ಹೆಚ್ಚಿಸಿದೆ.

ಹೇಗಿದೆ ಪೋಸ್ಟರ್​

ಪೋಸ್ಟರ್‌ನಲ್ಲಿ ಅಣ್ಣಾ ಬೆನ್ ಅವರು ಸಾಂಪ್ರದಾಯಿಕ ಸೀರೆಯಲ್ಲಿ ತಮ್ಮ ಎಂದಿನ ಸುಂದರವಾದ ಕರ್ಲಿ ಹೇರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 'ನೈ ಸೇಕರ್' ಚಿತ್ರದ ಖ್ಯಾತಿಯ ಕಿಶೋರ್ ರಾಜ್‌ಕುಮಾರ್ ಅವರು ಈ ಚಿತ್ರವನ್ನು ಬರೆದು ನಿರ್ದೇಶಿಸುತ್ತಿದ್ದಾರೆ.

ಕನಗವಲ್ಲಿಯಾಗಿ ಬಡ್ತಿ

ಶುಕ್ರವಾರ ಅನ್ನಾಬೆನ್​ ಹುಟ್ಟುಹಬ್ಬ ಹಿನ್ನೆಲೆ 'ಕೊಯಮತ್ತೂರು ಮಾಪಿಳ್ಳೈ' ಸಿನಿಮಾ ತಂಡ ನಟಿಯ ಪಾತ್ರದ ಹೆಸರು ಹಾಗೂ ಗೆಟಪ್​ ಬಗ್ಗೆ ಪೋಸ್ಟರ್ ಹಂಚಿಕೊಂಡಿದೆ.

ಅಣ್ಣಾಬೆನ್​ ಜೋಡಿ ಕಿಶೋರ್ ರಾಜ್‌ಕುಮಾರ್

ಇದೇ ಮೊದಲ ಬಾರಿಗೆ ಅವರು ಅಣ್ಣಾ ಬೆನ್ ಜೋಡಿಯಾಗಿ ನಾಯಕನಟನಾಗಿಯೂ ಚಿತ್ರರಂಗಕ್ಕೆ ಕಿಶೋರ್ ರಾಜ್‌ಕುಮಾರ್ ಪದಾರ್ಪಣೆ ಮಾಡುತ್ತಿದ್ದಾರೆ.

'ಕೊಯಮತ್ತೂರು ಮಾಪಿಳ್ಳೈ' ಕತೆ ಏನು?

ಸಂಬಂಧಗಳ ಹೊಂದಾಣಿಕೆ ಮತ್ತು ಹಾಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಈ ಚಿತ್ರವು ಸಂಪೂರ್ಣವಾಗಿ ಪ್ರೀತಿ ಮತ್ತು ನಗೆಯಿಂದ ಕೂಡಿದ ಒಂದು ಫೀಲ್-ಗುಡ್ ಕೌಟುಂಬಿಕ ಮನರಂಜನಾ ಚಿತ್ರವಾಗಿದೆ.ನಾಯ್ಸ್ ಅಂಡ್ ಗ್ರೇನ್ಸ್' ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ.

ಹೊಸ ಸಿನಿಮಾಕ್ಕೆ ಸಿಎಂ ವಿಜಯ್​ ಅವ್ರ ಹಳೇ ಸಿನಿಮಾ ಹೆಸರು

ತಮಿಳುನಾಡಿನ ಸಿಎಂ ವಿಜಯ್​ ಅವರು ನಟಿಸಿದ್ದ 'ಕೊಯಮತ್ತೂರು ಮಾಪಿಳ್ಳೈ' ಸಿನಿಮಾ 1996ರಲ್ಲಿ ರಿಲೀಸ್ ಆಗಿತ್ತು. ಈ ಹೊಸ ಸಿನಿಮಾಕ್ಕೂ ಹಳೆಯ ಹೆಸರನ್ನೇ ಇಟ್ಟಿದ್ದಾರೆ. ಚಿತ್ರದಲ್ಲಿ ನಾಯಕಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಕಾನ್​ಸಿಟಿಯಲ್ಲಿ ಅನ್ನಾ ಮಿಂಚಿಂಗ್

ಅರ್ಜುನ್​ ದಾಸ್, ಅನ್ನಾ ಬೆನ್​, ಯೋಗಿ ಬಾಬು ನಟಿಸಿದ್ದ ಅನ್ನಾ ಬೆನ್​ ಸಿನಿಮಾವು ಒಟಿಟಿಯಲ್ಲಿ ಭಾರಿ ಸದ್ದು ಮಾಡಿತ್ತು. ಹಣಕ್ಕಾಗಿ ತಪ್ಪು ದಾರಿಯನ್ನು ಹಿಡಿಯುವ ನಾಲ್ವರು ಪಾತ್ರಧಾರಿಗಳು ಮತ್ತೆ ಹಣಕ್ಕಾಗಿ ಒಟ್ಟಾಗಿ ಹೇಗೆ ಜೀವನ ಸಾಗಿಸುತ್ತಾರೆ. ಕಳೆದುಕೊಂಡ ಹಣ ಪಡೆಯೋದು ಹೇಗೆ ಎನ್ನುವ ಸುತ್ತ ಕತೆ ಹೆಣೆಯಲಾಗಿದೆ,