ರುಚಿ ಮತ್ತು ಆರೋಗ್ಯಕ್ಕೆ ಉತ್ತಮ ಅಂಜೂರ

ಕಲಾನ್ವಿತ ಜಿ ಜೈನ್

ರುಚಿ ಮತ್ತು ಆರೋಗ್ಯಕ್ಕೆ ಉತ್ತಮ ಅಂಜೂರ

ಪ್ರತಿ ಹಣ್ಣುಗಳಲ್ಲೂ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳಿರುತ್ತವೆ. ಅದರಲ್ಲೂ ಚಳಿಗಾಲದ ಸಮಯದಲ್ಲಿ ಹೇರಳವಾಗಿ ಸಿಗುವ ಅಂಜೂರ ಹಣ್ಣಿನ ಪ್ರಯೋಜನ ಏನು?

ಜೀರ್ಣಕ್ರಿಯೆಗೆ ಉತ್ತಮ

ಅಂಜೂರದಲ್ಲಿ ಹೇರಳವಾದ ಫೈಬರ್ ಅಂಶ ಇರುವುದರಿಂದ ಮಲಬದ್ಧತೆಯನ್ನು ನಿವಾರಿಸಿ ಜೀರ್ಣವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಆರೋಗ್ಯಕರ ಕರುಳನ್ನು ಕಾಪಾಡುತ್ತದೆ.

ಎಲುಬುಗಳ ಆರೋಗ್ಯಕ್ಕೆ ಸಹಾಯಕ

ಕ್ಯಾಲ್ಸಿಯಂ, ಪೊಟಾಷಿಯಂ ಮತ್ತು ಮೆಗ್ನೀಷಿಯಂನಂಥ ಖನಿಜಗಳು ಎಲುಬುಗಳನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತದೆ.

ಹೃದಯ ಆರೋಗ್ಯಕ್ಕೆ ಉತ್ತಮ

ಪೊಟಾಷಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಆಂಟಿಆಕ್ಸಿಡೆಂಟ್‌ಗಳು ಉರಿಯೂತವನ್ನು ಕಡಿಮೆಗೊಳಿಸಿ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ತಗ್ಗಿಸುತ್ತವೆ.