ವೀರ ಕನ್ನಡಿಗ ಸುಂದ್ರಿಯ ಹಾಟ್​​ ಅವತಾರ

ರಮೇಶ್​ ಕುಮಾರ್​​ ಬಿ ಎಡಮೋಳೆ

ವೀರ ಕನ್ನಡಿಗ ಸುಂದ್ರಿಯ ಹಾಟ್​​ ಅವತಾರ

ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ವೀರ ಕನ್ನಡಿಗ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾದ ನಟಿ ಅನಿತಾ ಹಸಾನಂದಾನಿ ಅವರ ಹಾಟ್​ ಫೋಟೋಗಳು ಇದೀಗ ವೈರಲ್​ ಆಗಿವೆ.

ಬಹುಭಾಷಾ ನಟಿ

ಅನಿತಾ ಅವರು ಕೇವಲ ಹಿಂದಿ ಮಾತ್ರವಲ್ಲದೆ ಕನ್ನಡ, ತೆಲುಗು ಮತ್ತು ತಮಿಳಿನಲ್ಲೂ ನಟಿಸಿದ್ದಾರೆ. ವೀರ ಕನ್ನಡಿಗ ಮಾತ್ರವಲ್ಲದೆ, ಶಿವರಾಜ್‌ಕುಮಾರ್ ನಟನೆಯ 'ಗಂಡುಗಲಿ ಕುಮಾರರಾಮ' ಚಿತ್ರದಲ್ಲೂ ಅಭಿನಯಿಸಿದ್ದಾರೆ.

ಕಿರುತೆರೆಯ ರಾಣಿ

ಚಲನಚಿತ್ರಗಳಿಗಿಂತ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದರು. 'ಕಾವ್ಯಾಂಜಲಿ'ಯ ಅಂಜಲಿ, 'ಯೇ ಹೈ ಮೊಹಬ್ಬತೇನ್' ಸರಣಿಯ ಶಗುನ್ ಅರೋರಾ ಮತ್ತು 'ನಾಗಿನ್' ಸರಣಿಯ ವಿಶಾಖ ಪಾತ್ರಗಳು ಖ್ಯಾತಿ ತಂದುಕೊಟ್ಟವು.

ಆರಂಭಿಕ ಜೀವನ ಮತ್ತು ಕಷ್ಟ

ಮುಂಬೈನಲ್ಲಿ ಜನಿಸಿದ ಅನಿತಾ, ತಮ್ಮ 15ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು. ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಇವರು, ನಂತರ ನಟಿಯಾಗಿ ಬೆಳೆದರು.

ಹೆಸರಿನ ಬದಲಾವಣೆ

ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಇವರು ತಮ್ಮ ಹೆಸರನ್ನು 'ನತಾಶಾ' ಎಂದು ಬದಲಿಸಿಕೊಂಡಿದ್ದರು. ಆರಂಭಿಕ ಸಿನಿಮಾಗಳಲ್ಲಿ ಇದೇ ಹೆಸರನ್ನು ಬಳಸಲಾಗುತ್ತಿತ್ತು ಆದರೆ, ಮತ್ತೆ ತಮ್ಮ ಮೂಲ ಹೆಸರಾದ 'ಅನಿತಾ' ಎಂದೇ ಮುಂದುವರಿಯಲು ನಿರ್ಧರಿಸಿದರು.

ವೈಯಕ್ತಿಕ ಜೀವನ

2013 ರಲ್ಲಿ ಉದ್ಯಮಿ ರೋಹಿತ್ ರೆಡ್ಡಿ ಅವರನ್ನು ವಿವಾಹವಾದರು. ದಂಪತಿಗೆ ಆನ್ವಯ್ ರೆಡ್ಡಿ ಎಂಬ ಮಗನಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅನಿತಾ, ತಮ್ಮ ಕುಟುಂಬದ ಸುಂದರ ಕ್ಷಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸ್ವಿಮ್​ಶೂಟ್​ನಲ್ಲಿ ಅನಿತಾ

ಇದೀಗ ಅನಿತಾ ಅವರು ಸ್ವಿಮ್​ಶೂಟ್​ ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.