ಮತ್ತೆ ಹಾಟ್​ ಅವತಾರವೆತ್ತಿದ ವಿಷ್ಣು ಪ್ರಿಯಾ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಮತ್ತೆ ಹಾಟ್​ ಅವತಾರವೆತ್ತಿದ ವಿಷ್ಣು ಪ್ರಿಯಾ!

ತಮ್ಮ ಹಾಟ್​ ಅವತಾರಗಳಿಂದಲೇ ಸಖತ್​ ಸುದ್ದಿಯಾಗುವ ನಿರೂಪಕಿ ಹಾಗೂ ನಟಿ ವಿಷ್ಣು ಪ್ರಿಯಾ ಅವರು ಮತ್ತೊಮ್ಮೆ ಬೋಲ್ಡ್​ ಅವತಾರ ತಾಳಿದ್ದಾರೆ. ಅವರ ಹೊಸ ಫೋಟೋಶೂಟ್​ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಸ್ಟ್ರ್ಯಾಪ್‌ಲೆಸ್ ಬ್ಲ್ಯಾಕ್ ಗೌನ್​

ವಿಷ್ಣು ಪ್ರಿಯಾ ತಮ್ಮ ಹೊಸ ಫೋಟೋಶೂಟ್​ನಲ್ಲಿ ಗ್ಲಾಮರಸ್ ಸ್ಟ್ರ್ಯಾಪ್‌ಲೆಸ್ ಬ್ಲ್ಯಾಕ್ ಗೌನ್ ಧರಿಸಿದ್ದಾರೆ. ರೋಸ್ ಗೋಲ್ಡ್ ಸಿಕ್ವಿನ್ ಫ್ಲೋರಲ್ ಎಂಬ್ರಾಯ್ಡರಿ, ಹೈ ಸ್ಲಿಟ್ ಮತ್ತು ಬಾಡಿ-ಹಗ್ ಫಿಟ್‌ನೊಂದಿಗೆ ಬೆಂಕಿಯಂತಹ ಬೋಲ್ಡ್ ಲುಕ್ ನೀಡಿದ್ದಾರೆ.

ಕಾಮೆಂಟ್​ಗಳ ಮಹಾಪೂರ

ಹೊಸ ಫೋಟೋಶೂಟ್​ನಲ್ಲಿ ಹಾಟ್​ ಬ್ಯೂಟಿ ವಿಷ್ಣು ಪ್ರಿಯಾ ಅವರ ಮೈಮಾಟವನ್ನು ಕಂಡು ಫಿದಾ ಆಗಿರುವ ನೆಟ್ಟಿಗರು ಕಾಮೆಂಟ್​ಗಳ ಮೂಲಕ ನಟಿಯ ಹಾಟ್​ನೆಸ್​ ಅನ್ನು ಹೊಗಳುತ್ತಿದ್ದಾರೆ. ಕೆಲವರು ಟೀಕೆಗಳನ್ನು ಸಹ ಮಾಡಿದ್ದಾರೆ.

ಹೈದರಾಬಾದ್​​ ಸುಂದರಿ

ವಿಷ್ಣು ಪ್ರಿಯಾ ಅವರು ಫೆಬ್ರವರಿ 22, 1990 ರಂದು ಹೈದರಾಬಾದ್‌ನಲ್ಲಿ ಜನಿಸಿದರು. ಇವರು ಮೂಲತಃ ತೆಲುಗು ನಟಿಯಾಗಿದ್ದು, ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ.

ವೃತ್ತಿಜೀವನದ ಆರಂಭ

ವಿಷ್ಣುಪ್ರಿಯಾ ಅವರು ತೆಲುಗು ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ರಿಯಾಲಿಟಿ ಶೋ 'ಪೋವೇ ಪೋರಾ' ಕಾರ್ಯಕ್ರಮವನ್ನು ಸುಡಿಗಾಲಿ ಸುಧೀರ್ ಜೊತೆ ನಿರೂಪಣೆ ಮಾಡುವ ಮೂಲಕ ಮನೆಮಾತಾದರು.

ಸಿನಿಮಾ ರಂಗಕ್ಕೆ ಎಂಟ್ರಿ

ಕೇವಲ ಕಿರುತೆರೆಗಷ್ಟೇ ಸೀಮಿತವಾಗದ ಇವರು, ಚೆಕ್ ಮೇಟ್ ಎಂಬ ತೆಲುಗು ಚಿತ್ರದ ಮೂಲಕ ಬೆಳ್ಳಿಪರದೆಗೂ ಕಾಲಿಟ್ಟರು. ತದನಂತರ ಕೆಲವು ವೆಬ್ ಸರಣಿಗಳು ಹಾಗೂ ಪೋಷಕ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾ ಸ್ಟಾರ್

ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ವಿಷ್ಣುಪ್ರಿಯಾ, ತಮ್ಮ ಹಾಟ್ ಫೋಟೋಶೂಟ್‌ಗಳು, ಮಾಡೆಲಿಂಗ್ ಚಿತ್ರಗಳು ಮತ್ತು ರೀಲ್ಸ್ ಡ್ಯಾನ್ಸ್ ವಿಡಿಯೋಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ.

ಬೋಲ್ಡ್ ಉಡುಗೆ ಹಾಗೂ ಟ್ರೋಲಿಂಗ್ ವಿವಾದ

ವಿಷ್ಣುಪ್ರಿಯಾ ಅವರು ಆಗಾಗ ಅತಿ ಹೆಚ್ಚು ಗ್ಲಾಮರಸ್ ಹಾಗೂ ಬೋಲ್ಡ್ ಆದ ಉಡುಪುಗಳನ್ನು ಧರಿಸಿ ಫೋಟೋಶೂಟ್ ಮಾಡಿಸುತ್ತಾರೆ. ಇದೇ ಕಾರಣಕ್ಕೆ ಆಗಾಗ ಸಂಪ್ರದಾಯವಾದಿ ನೆಟ್ಟಿಗರಿಂದ ಟ್ರೋಲ್ ಆಗುತ್ತಿರುತ್ತಾರೆ.

ಲವ್ ಮತ್ತು ಮದುವೆ ವದಂತಿಗಳ ವಿವಾದ

ಖ್ಯಾತ ನಟ ಮತ್ತು ನಿರ್ದೇಶಕ ಜೆಡಿ ಚಕ್ರವರ್ತಿ ಅವರೊಂದಿಗೆ ವಿಷ್ಣುಪ್ರಿಯಾ ಪ್ರೀತಿಯಲ್ಲಿದ್ದಾರೆ ಮತ್ತು ಅವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಟಾಲಿವುಡ್‌ನಲ್ಲಿ ಭಾರಿ ಸದ್ದು ಮಾಡಿದ್ದವು.

ಬಿಗ್ ಬಾಸ್ ರಿಯಾಲಿಟಿ ಶೋ ಭಾಗಿ

ಬಿಗ್ ಬಾಸ್ ತೆಲುಗು ಸೀಸನ್ 8'ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ವಿಷ್ಣುಪ್ರಿಯಾ, ಅಲ್ಲಿ ತಮ್ಮ ನೇರ ನಡೆ-ನುಡಿ ಹಾಗೂ ಆಟದ ಶೈಲಿಯಿಂದ ಗಮನ ಸೆಳೆದಿದ್ದರು. ಅಲ್ಲೂ ಸಹ ಅವರ ಕೆಲವೊಂದು ಹೇಳಿಕೆಗಳು ಮತ್ತು ವರ್ತನೆಗಳು ವಿವಾದ ಹಾಗೂ ಚರ್ಚೆಗಳಿಗೆ ಕಾರಣವಾಗಿದ್ದವು.