ಪತಿ ರೋಷನ್‌ ಜತೆಗೆ ಆಂಕರ್ ಅನುಶ್ರೀ ಜಾಲಿ ಟ್ರಿಪ್

ಭೂಮಿಕಾ ವಿ. ನಾಥ್​​​

ಪತಿ ರೋಷನ್‌ ಜತೆಗೆ ಆಂಕರ್ ಅನುಶ್ರೀ ಜಾಲಿ ಟ್ರಿಪ್

ಮದುವೆಯ ನಂತರ ʻಮಹಾನಟಿ ಸೀಸನ್‌ 2ʼ ರಿಯಾಲಿಟಿ ಶೋ ನಿರೂಪಣೆಯಲ್ಲಿ ಅನುಶ್ರೀ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಗಂಡನೊಂದಿಗೆ ಅನುಶ್ರೀ ಜಾಲಿ ಟ್ರಿಪ್‌ ಮಾಡಿದ್ದಾರೆ. ಪ್ರಕೃತಿ ಸೌಂದರ್ಯವನ್ನ ಸವಿಯುವುದರ ಜತೆಗೆ ಬೆಟ್ಟದ ಮೇಲೆ ಫೋಟೋ ಕ್ಲಿಕ್ಕಿಸಕೊಂಡಿದ್ದಾರೆ.

ಆಗಸ್ಟ್‌ 28ರಂದು ಬಹುಕಾಲದ ಗೆಳೆಯನ ಜತೆ ಮದುವೆ

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಆಗಸ್ಟ್‌ 28ರಂದು ಬಹುಕಾಲದ ಗೆಳೆಯ ರೋಷನ್‌ ರಾಮಮೂರ್ತಿ ಜೊತೆಗೆ ವಿವಾಹವಾಗಿದ್ದರು.

ಸೋಷಿಯಲ್​ ಮೀಡಿಯಾದಲ್ಲಿ ಸದಾ ಆಕ್ಟಿವ್​

ಪತಿ ರೋಷನ್‌ ಜೊತೆಗೆ ಜಾಲಿ ಟ್ರಿಪ್‌ ಮಾಡಿರುವ ಫೋಟೋಗಳನ್ನ ಅನುಶ್ರೀ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ವೈರಲ್‌ ಆಗಿವೆ.

ಅನುಶ್ರೀ ನಿಜಕ್ಕೂ ಎಲ್ಲರ ಫೇವರಿಟ್

ಸ್ಯಾಂಡಲ್‌ವುಡ್‌ನ ಅನುಶ್ರೀ ನಿಜಕ್ಕೂ ಎಲ್ಲರ ಫೇವರಿಟ್ ಆಗಿದ್ದಾರೆ. ಒಂದೇ ವಾಹಿನಿಯಲ್ಲಿಯೇ ವಿವಿಧ ಕಾರ್ಯಕ್ರಮಕ್ಕೆ ನಿರೂಪಕಿ ಆಗಿರೋದು ಗೊತ್ತೇ ಇದೆ. ಆದರೆ, ಈ ನಟಿ ಕನ್ನಡ ಸಿನಿಮಾರಂಗದ ಬಹು ಬೇಡಿಕೆಯ ಆ್ಯಂಕರ್ ಕೂಡ ಆಗಿದ್ದಾರೆ.

ಸಿನಿಮಾ ಕೂಡ ಮಾಡಿದ್ದಾರೆ

ಅನುಶ್ರೀ ನಿರೂಪಕಿ ಆಗಿಯೇ ಗುರುತಿಸಿಕೊಂಡಿದ್ದಾರೆ. ಆದರೆ, ನಟನೆಯ ಆಸಕ್ತಿ ಇದ್ದ ಕಾರಣ, ಸಿನಿಮಾ ಕೂಡ ಮಾಡಿದ್ದಾರೆ. ಬೆಂಕಿಪಟ್ನ ಚಿತ್ರದಲ್ಲಿ ಹೀರೊಯಿನ್ ಆಗಿಯೂ ಗಮನ ಸೆಳೆದಿದ್ದರು.

ಉಪ್ಪು ಹುಳಿ ಖಾರ ಚಿತ್ರದಲ್ಲಿ ಗೆಸ್ಟ್ ರೋಲ್

ಮಾದ ಮತ್ತು ಮಾನಸಿ, ಉಪ್ಪು ಹುಳಿ ಖಾರ ಚಿತ್ರದಲ್ಲೂ ಅನುಶ್ರೀ ಗೆಸ್ಟ್ ರೋಲ್ ಮಾಡಿದ್ದಾರೆ. ಆದರೆ, ಈ ಎಲ್ಲ ಚಿತ್ರಗಳ ಮುಂಚೆ 2011 ರಲ್ಲಿಯೇ ನಟನೆ ಶುರು ಮಾಡಿದ್ದರು.