ಹಳೆಯ ಸ್ವಿಮ್ ಬಟ್ಟೆ ಧರಿಸಿದ್ದ ವಿಡಿಯೋ ಹಾಕಿ ಮತ್ತೆ ನಟ ಶಿವಾಜಿ ಟಾಂಗ್ ನೀಡಿದ ಅನಸೂಯಾ

ನಿರುಪಾದಿ ಬ್ಯಾಡಗಿ

ಹಳೆಯ ಸ್ವಿಮ್ ಬಟ್ಟೆ ಧರಿಸಿದ್ದ ವಿಡಿಯೋ ಹಾಕಿ ಮತ್ತೆ ನಟ ಶಿವಾಜಿ ಟಾಂಗ್ ನೀಡಿದ ಅನಸೂಯಾ

ನಟಿಯರು ಮೈತುಂಬ ಸೀರೆ ಉಟ್ಟರೆ ಚೆಂದ, ಅಂದ. ಅದನ್ನು ಬಿಟ್ಟು ದೇಹದ ಅಂಗಾಂಗ ಕಾಣುವಂತ ಬಟ್ಟೆಗಳನ್ನು ಧರಿಸುವುದು ಸರಿಯಲ್ಲ ಎಂದಿದ್ದ ನಟ ಶಿವಾಜಿಗೆ ಮತ್ತೊಮ್ಮೆ ಸ್ವಿಮ್ ಬಟ್ಟೆಯ ವಿಡಿಯೋ ಹಾಕಿ ನಟಿ ಅನಸೂಯ ಟಾಂಗ್

ನಮ್ಮ ದೇಹ ನಿಮ್ಮದಲ್ಲ

ದಂಡೋರ್ ಸಿನಿಮಾ ಇವೆಂಟ್​ನಲ್ಲಿ ಶಿವಾಜಿ ಹೇಳಿದ್ದ ಮಾತುಗಳಿಗೆ ನಮ್ಮ ದೇಹ ನಿಮ್ಮದಲ್ಲ ಎಂದಿದ್ದ ನಟಿ ಅನಸೂಯ

ನಿಮ್ಮಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ

ಯಾವ ರೀತಿಯ ಡ್ರೆಸ್‌ ಧರಿಸಬೇಕು ಎಂದು ನಿಮ್ಮಿಂದ ಹೇಳಿಸಿಕೊಳ್ಳುವ ಅಗತ್ಯ ನಮಗಿಲ್ಲ ಎಂದು ತೀಕ್ಷ್ಣವಾಗಿಯೇ ಹೇಳಿದ್ದ ಅನಸೂಯ

ಋಣ ತೀರಿಸುವ ಅವಕಾಶ ಸಿಗಲಿ

ನಟಿ ಅನಸೂಯಾ ಮಾತಿಗೆ ಕೌಂಟರ್ ನೀಡಿದ್ದ ನಟ ಶಿವಾಜಿ, ಬೇಗನೇ ನಿಮ್ಮ ಋಣ ತೀರಿಸುವ ಅವಕಾಶ ಬರಲಿ ಎಂದಿದ್ದರು. ಅದಕ್ಕೆ ನಿಮ್ಮ ಸಪೋರ್ಟ್‌ ನನಗೆ ಅಗತ್ಯವಿಲ್ಲ ಎಂದು ಅನಸೂಯ ತಿರುಗೇಟು

ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್

ನಟಿಯರ ಬಟ್ಟೆ ಬಗೆಗಿನ ಕಮೆಂಟ್ ಬಗ್ಗೆ ನಟ ಶಿವಾಜಿ ಮತ್ತು ಅದಕ್ಕೆ ಪ್ರತಿಕ್ರಿಯೆ ನೀಡಿದ ಬಗೆಗೆ ಅನಸೂಯಾ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗಿದ್ದಾರೆ

ಹಳೆಯ ಯೂರೋಪ್ ಟೂರ್ ಫೋಟೋ

ನಟಿಯರ ಬಟ್ಟೆ ಬಗೆಗಿನ ವಿವಾದದ ಬಳಿಕ ಇಂದು ಅನಸೂಯಾರಿಂದ ಮತ್ತೊಮ್ಮೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಳೆಯ ಯೂರೋಪ್ ಟೂರ್​ ಭಾಗದ ಸ್ವಿಮ್ ಬಟ್ಟೆಯ ವಿಡಿಯೋ ಪೋಸ್ಟ್

ಟ್ರಾವೆಲ್ ಡೇಸ್ ಮಿಸ್

ಹಳೆಯ ವಿಡಿಯೋ ಜೊತೆ, ನೀರಿನ ಹತ್ತಿರ ಇರುವಾಗ ನಾನು ತುಂಬಾ ಸಂತೋಷವಾಗಿರುತ್ತೇನೆ. ಟ್ರಾವೆಲ್‌ ಡೇಸ್‌ ಮಿಸ್‌ ಆಗುತ್ತಿವೆ. ಬೇಗನೇ ಮತ್ತೊಂದು ಟ್ರಿಪ್‌ಗೆ ಪ್ಲಾನ್‌ ಮಾಡಬೇಕು ಎಂದು ಬರೆದುಕೊಂಡಿದ್ದಾರೆ

ಸ್ವಿಮ್ ಬಟ್ಟೆಯ ವಿಡಿಯೋ ವೈರಲ್

ಪ್ರಸ್ತುತ ಅನಸೂಯಾ ಅವರು ಹಾಕಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗ್ತಿದೆ. ಶಿವಾಜಿಗೆ ಕೌಂಟರ್ ಆಗಿಯೇ ವೀಡಿಯೊ ಶೇರ್‌ ಮಾಡಿದ್ದಾರೆ ಎಂದು ಕೆಲವರಿಂದ ಕಮೆಂಟ್