ವಿಜಯವಾಣಿ ಸುದ್ದಿ ಜಾಲ
ಟಾಲಿವುಡ್‌ನ ಜನಪ್ರಿಯ ನಿರೂಪಕಿ ಹಾಗೂ ನಟಿ ಅನಸೂಯಾ ಭಾರದ್ವಾಜ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಶೇರ್ ಮಾಡಿರುವ ಸೀರೆ ಫೋಟೋಶೂಟ್ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿವೆ.
ತಮ್ಮ ಕ್ಯೂಟ್ ನಗು ಮತ್ತು ಗ್ಲಾಮರಸ್ ಲುಕ್ ಮೂಲಕವೇ ಸದಾ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಅನಸೂಯಾ, ತಮ್ಮ ಅದ್ಭುತ ನಟನಾ ಸಾಮರ್ಥ್ಯ ಹಾಗೂ ಸೌಂದರ್ಯದಿಂದಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಅನಸೂಯಾ ಅವರು ಹಂಚಿಕೊಂಡಿರುವ ಹೊಸ ಫೋಟೋಗಳಲ್ಲಿ ಸಾಂಪ್ರದಾಯಿಕ ಹಾಗೂ ಟ್ರೆಂಡಿ ಲುಕ್‌ನಲ್ಲಿ ಕಂಗೊಳಿಸುತ್ತಿದ್ದಾರೆ. ಅವರು ತೊಟ್ಟಿರುವ ಸುಂದರವಾದ ಡಿಸೈನರ್ ಸೀರೆ ಹಾಗೂ ಅದಕ್ಕೆ ಮ್ಯಾಚ್ ಆಗುವಂತಿರುವ ಆಭರಣಗಳು ನೆಟ್ಟಿಗರ ಮನಗೆದ್ದಿವೆ.
ಸಾಂಪ್ರದಾಯಿಕ ಸೀರೆಯುಟ್ಟು ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ನೀಡಿರುವ ಅನಸೂಯಾ, ಸೀರೆಯಲ್ಲೂ ತಮ್ಮ ಗ್ಲಾಮರ್ ಪ್ರದರ್ಶಿಸಿದ್ದಾರೆ. ನಟಿಯ ಮೈಮಾಟಕ್ಕೆ ಫಿದಾ ಆಗಿರುವ ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಅನಸೂಯಾ ಅವರು ತಮ್ಮ ವೃತ್ತಿಜೀವನವನ್ನು ಟೆಲಿವಿಷನ್ ನಿರೂಪಕಿಯಾಗಿ ಆರಂಭಿಸಿ, ಅತ್ಯಂತ ಕಡಿಮೆ ಅವಧಿಯಲ್ಲಿ ಮನೆಮಾತಾದರು.
ವಿವಿಧ ರಿಯಾಲಿಟಿ ಶೋಗಳು ಹಾಗೂ ಕಾಮಿಡಿ ಕಾರ್ಯಕ್ರಮಗಳನ್ನು ನಿರೂಪಿಸುವ ಮೂಲಕ ಅವರು ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡರು.
ಟಿವಿ ಶೋಗಳ ಯಶಸ್ಸಿನ ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟು, ಪೋಷಕ ಪಾತ್ರಗಳಲ್ಲಿ ಹಾಗೂ ವಿಶೇಷ ಪಾತ್ರಗಳಲ್ಲಿ ನಟಿಸುವ ಮೂಲಕ ನಾಯಕಿಯಾಗಿ ಬೆಳೆದರು.
ಅಡವಿ ಶೇಷ್ ನಟನೆಯ 'ಕ್ಷಣಂ' ಸಿನಿಮಾದಲ್ಲಿ ಇವರು ನಿರ್ವಹಿಸಿದ ಪೊಲೀಸ್ ಅಧಿಕಾರಿ ಪಾತ್ರವು ಇವರಿಗೆ ದೊಡ್ಡ ಮಟ್ಟದ ಹೆಸರು ಮತ್ತು ಪ್ರಶಂಸೆ ತಂದುಕೊಟ್ಟಿತು.
ಸುಕುಮಾರ್ ನಿರ್ದೇಶನದ 'ರಂಗಸ್ಥಳಂ' ಚಿತ್ರದಲ್ಲಿ 'ರಂಗಮ್ಮ ಅಕ್ಕ' ಪಾತ್ರದಲ್ಲಿ ನಟಿಸುವ ಮೂಲಕ ಅನಸೂಯಾ ತಮ್ಮ ನಟನೆಯಿಂದ ಇಡೀ ದಕ್ಷಿಣ ಭಾರತದ ಸಿನಿಪ್ರಿಯರ ಮನಗೆದ್ದರು.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬ್ಲಾಕ್‌ಬಸ್ಟರ್ 'ಪುಷ್ಪ' ಚಿತ್ರದಲ್ಲಿ ಅವರು ಮಾಡಿದ ದ್ರಾಕ್ಷಮ್ಮ ಪಾತ್ರವು ಅವರ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲಾಯಿತು.
ಸಿನಿಮಾಗಳು ಮತ್ತು ಶೋಗಳಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಂಚಿಕೊಳ್ಳುವ ಮಾಡರ್ನ್ ಮತ್ತು ಟ್ರೆಡಿಷನಲ್ ಫೋಟೋಶೂಟ್‌ಗಳು ಸದಾ ವೈರಲ್ ಆಗುತ್ತಿರುತ್ತವೆ.
ವೃತ್ತಿ ಜೀವನದ ಜೊತೆಗೆ ತಮ್ಮ ಪತಿ ಪ್ರತ್ಯೂಷ್ ಭಾರದ್ವಾಜ್ ಹಾಗೂ ಮಕ್ಕಳೊಂದಿಗೆ ಸಂತೋಷದ ಕುಟುಂಬ ಜೀವನವನ್ನು ನಡೆಸುತ್ತಿದ್ದಾರೆ.
ಕೇವಲ ಗ್ಲಾಮರಸ್ ಪಾತ್ರಗಳಷ್ಟೇ ಅಲ್ಲದೆ, ನಟನೆಗೆ ಆಧ್ಯತೆಯಿರುವ ಸವಾಲಿನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಮ್ಮ ನಟನಾ ನೈಪುಣ್ಯತೆಯನ್ನು ಸಾಬೀತುಪಡಿಸುತ್ತ ಬಂದಿದ್ದಾರೆ.