ಅನಸೂಯ ಹಾಟ್​ ಅವತಾರ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಅನಸೂಯ ಹಾಟ್​ ಅವತಾರ!

ನಿನ್ನೆಯಷ್ಟೇ (ಮೇ 16) 41ನೇ ವಸಂತಕ್ಕೆ ಹೆಜ್ಜೆಯಿಟ್ಟ ಹೈದರಾಬಾದ್‌ನ ಜನಪ್ರಿಯ ನಟಿ ಅನುಸೂಯ ಭರದ್ವಾಜ್, ತಮ್ಮ ಕುಟುಂಬದೊಂದಿಗೆ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಕುಟುಂಬದೊಂದಿಗೆ ಸಂಭ್ರಮ

ಪತಿ ಸುಶಾಂಕ್ ಭರದ್ವಾಜ್ ಹಾಗೂ ಇಬ್ಬರು ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಮತ್ತು ಪೂಲ್‌ನಲ್ಲಿ ಸಮಯ ಕಳೆಯುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ.

ಸುದ್ದಿ ವಾಹಿನಿಯಿಂದ ಆರಂಭ

ಟಿವಿ ವಾಹಿನಿಯೊಂದರಲ್ಲಿ ಸುದ್ದಿ ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರ ಜರ್ನಿ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ.

'ಜಬರ್ದಸ್ತ್' ಯಶಸ್ಸು

ತೆಲುಗಿನ ಅತ್ಯಂತ ಜನಪ್ರಿಯ ಕಾಮಿಡಿ ಶೋ 'ಜಬರ್ದಸ್ತ್' ನಿರೂಪಣೆ ಮಾಡುವ ಮೂಲಕ ಅನಸೂಯಾ ಅವರು ಮನೆಮಾತಾದರು.

ನೆಗೆಟಿವ್ ಪಾತ್ರಗಳಲ್ಲಿ ಮಿಂಚು

ಕೇವಲ ನಿರೂಪಣೆಗೆ ಸೀಮಿತವಾಗದೆ ಚಿತ್ರರಂಗದಲ್ಲಿ ನೆಗೆಟಿವ್ ಪಾತ್ರಗಳನ್ನು ಮಾಡುವ ಮೂಲಕ ಅನುಸೂಯ ಎಲ್ಲರಿಗೂ ಅಚ್ಚರಿ ಮೂಡಿಸಿದರು.

ಪ್ರಶಸ್ತಿಗಳ ಗರಿ

ತಮ್ಮ ಅದ್ಭುತ ನಟನೆಗಾಗಿ 'ಕ್ಷಣಂ' ಮತ್ತು 'ರಂಗಸ್ಥಲಂ' ಚಿತ್ರಗಳಿಗೆ 'ಅತ್ಯುತ್ತಮ ಪೋಷಕ ನಟಿ' ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

'ಪುಷ್ಪ' ತಂದುಕೊಟ್ಟ ಪ್ಯಾನ್-ಇಂಡಿಯಾ ಖ್ಯಾತಿ

'ಪುಷ್ಪ: ದಿ ರೈಸ್' ಮತ್ತು 'ಪುಷ್ಪ 2: ದಿ ರೂಲ್' ಚಿತ್ರಗಳಲ್ಲಿ 'ದಾಕ್ಷಾಯಣಿ' ಎಂಬ ಬೋಲ್ಡ್ ಪಾತ್ರದ ಮೂಲಕ ಇಡೀ ದೇಶಾದ್ಯಂತ ಭಾರಿ ಜನಪ್ರಿಯತೆ ಗಳಿಸಿದರು.

ಮುಂದಿನ ದೊಡ್ಡ ಅಧ್ಯಾಯ

ಸದ್ಯದಲ್ಲೇ ಬರಲಿರುವ 'ಪುಷ್ಪ 3' ಚಿತ್ರದಲ್ಲೂ ಇವರು ನಟಿಸಲಿದ್ದು, ಅನುಸೂಯ ಅವರ ವೃತ್ತಿಜೀವನದ ಅತ್ಯಂತ ದೊಡ್ಡ ಹಾಗೂ ಪ್ರಮುಖ ಅಧ್ಯಾಯ ಮುಂದಿದೆ ಎಂದು ನಿರೀಕ್ಷಿಸಲಾಗಿದೆ.