ಮಾದಕ ಲುಕ್​ ಕೊಟ್ಟ ಅಮೂಲ್ಯ

ಮಮತಾ

ಮಾದಕ ಲುಕ್​ ಕೊಟ್ಟ ಅಮೂಲ್ಯ

ಮದುವೆ, ಮಕ್ಕಳು ಹೀಗೆ ಸಿನಿಮಾ ರಂಗದಿಂದ ದೂರ ಇರುವ ಅಮೂಲ್ಯ ಅವರು ಸದ್ಯ ಹೊಸ ಉದ್ಯಮವನ್ನು ಆರಂಭಿಸಿದ್ದಾರೆ. ಆ ಪಬ್​​ನಲ್ಲೇ ಫೋಟೋ ಶೂಟ್​ ನಡೆಸಿದ್ದು, ದಂತದ ಬಣ್ಣದ ಗೌನ್​ ಅವರ ಅಂದವನ್ನು ಹೆಚ್ಚಿಸಿದೆ. ಅವರ ಮಾದಕ ಲುಕ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ

ಪೀಕಬೂ ರಿಲೀಸ್ ಯಾವಾಗ?

2017ರಲ್ಲಿ ದುನಿಯಾ ವಿಜಯ್​ ಅವರೊಂದಿಗೆ ಅಮೂಲ್ಯ ಅವರು ನಟಿಸಿದ್ದರು. ಆನಂತರ ಯಾವುದೇ ಸಿನಿಮಾದ ಅಪಡೇಟ್​ ಇರಲಿಲ್ಲ. 2025ರಲ್ಲಿ ಪೀಕಬೂ ಎನ್ನುವ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಅದರಲ್ಲಿ ಡ್ಯಾನ್ಸ್​ ಮಾಡುವ ಪ್ರೋಮೋ ಮೂಲಕ ಸಿನಿಮಾದ ಹೆಸರನ್ನು ರಿವೀಲ್​ ಮಾಡಲಾಗಿತ್ತು.

ಕಿರುತರೆ ಜಡ್ಜ್​

ಸಿನಿಮಾ ಅಷ್ಟಾಗಿ ಒಪ್ಪಿಕೊಳ್ಳದ ಅವರು, ಕಿರುತರೆಯಲ್ಲಿ ರಿಯಾಲಿಟಿ ಶೋನ ಜಡ್ಜ್​​ ಆಗಿ ಕಾಣಿಸಿಕೊಂಡಿದ್ದರು.

ಜಗದೀಶ್​ ಜೊತೆ ಮದುವೆ

2017 ಮೇ 12ರಂದು ಉದ್ಯಮಿ ಪತಿ ಜಗದೀಶ್ ಆರ್​ ಚಂದ್ರ​ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸದ್ಯ ಅವರ ಪತಿ ಜಗದೀಶ್ ಆರ್​ ಚಂದ್ರ​ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಜೀರೋ ಡಿಗ್ರಿ ಆನ್​ ದಿ ಹಿಲ್

ಆರ್​ಆರ್​ ನಗರದಲ್ಲಿ ಅಮೂಲ್ಯ ಜಗದೀಶ್​ ಅವರು ಹೊಸ ಪಬ್​ ಆರಂಭಿಸಿದ್ದಾರೆ. ಪಬ್​ ಓಪನಿಂಗ್​ ಸೆರಮನಿಗೆ ಕನ್ನಡ ಸಿನಿಮಾರಂಗದ ತಾರೆಯರು ಭೇಟಿ ನೀಡಿದ್ದರು. ಸುದೀಪ್​​, ಧನಂಜಯ್​ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಚೆಲುವಿನ ಚಿತ್ತಾರದಿಂದ ಶುರುವಾಯ್ತು ಸಿನಿಮಾ ಹಾದಿ

ಅಮೂಲ್ಯ ಅವರು ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ಅವರ ಧ್ವನಿ, ನಟನೆ, ಕಿತ್ತಾಟದ ದೃಶ್ಯಗಳು ಅವರಿಗೆ ಸಾಕಷ್ಟು ಅಭಿಮಾನಿಗಳನ್ನು ಹೆಚ್ಚಿಸುವಂತೆ ಮಾಡಿತ್ತು.

ಅಮೂಲ್ಯ ನಟನೆಯ ಸಿನಿಮಾವಿದು

ಅಮೂಲ್ಯ ನಟನೆಯ ಶ್ರಾವಣಿ ಸುಬ್ರಮಣ್ಯ, ಚೈತ್ರದ ಚಂದ್ರಮ, ಖುಷಿಖುಷಿಯಾಗಿ, ಮಳೆ, ರಾಮ್​ಲೀಲಾ, ಶ್ರಾವಣಿ ಸುಬ್ರಮಣ್ಯ, ನಾನು ನನ್ನ ಕನಸು, ಮಾಸ್ತಿಗುಡಿ, ಕೃಷ್ಣ ರುಕ್ಕು, ಗಜ ಕೇಸರಿ ಹಿಟ್​​ ಸಿನಿಮಾಗಳಾಗಿವೆ

ಮಾಸ್ತಿಗುಡಿಯ ಈ ಹಾಡು ಇಂದಿಗೂ ಫೇಮಸ್

ಮಾಸ್ತಿ ಗುಡಿಯ ಚಿಪ್ಪಿನೊಳಗಡೆ ಮುತ್ತು ಮಲಗಿದೆ ಹಾಡು ಸಾಕಷ್ಟು ಹಿಟ್ ಕಂಡಿತ್ತು. ಅಮೂಲ್ಯ ಅವರು ಈ ಸಿನಿಮಾದಲ್ಲಿ ಗಂಭೀರ ಪಾತ್ರದಲ್ಲಿ ನಟಿಸಿದ್ದರು.