'ಹಲ್ಕಾ ಡಾನ್​' ಸಿನಿಮಾದಲ್ಲಿ ಅಮೃತಾ ಅಯ್ಯಂಗಾರ್

ಮಮತಾ

'ಹಲ್ಕಾ ಡಾನ್​' ಸಿನಿಮಾದಲ್ಲಿ ಅಮೃತಾ ಅಯ್ಯಂಗಾರ್

ಲವ್ ​ಮಾಕ್ಟೇಲ್ ಸಿನಿಮಾ ಮೂಲಕ ಮನೆ ಮಾತಾದ ಅಮೃತಾ ಅಯ್ಯಂಗಾರ್​ ಅವರು, ಸದ್ಯ ಮತ್ತೆ ಕನ್ನಡ ಸಿನಿಮಾದಲ್ಲಿ ಮಿಂಚಲು ಮುಂದಾಗಿದ್ದಾರೆ. ಪ್ರಮೋದ್​ ಅವರೊಂದಿಗೆ ಹಲ್ಕಾಡಾನ್​ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಣೋಟಕ್ಕೆ ಫ್ಯಾನ್ಸ್ ಫಿದಾ

ಈ ಸಿನಿಮಾ ಬ್ಯುಸಿ ಮಧ್ಯೆ ಸೈಮಾ ಅವಾರ್ಡ್​ ಕಾರ್ಯಕ್ರಮಕ್ಕೆ ಅಮೃತಾ ಅಯ್ಯಂಗಾರ್ ಭೇಟಿ ಕೊಟ್ಟಿದ್ದಾರೆ. ಕಾರ್ಯಕ್ರಮಕ್ಕೆ ಬ್ಲಾಕ್​ ಗೌನ್​ನಲ್ಲಿಯೇ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ. ಆ ಮಾದಕ ಕಣ್ಣೋಟ ಬೀರಿರುವ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಅವರ ನೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ತಾರೆಯರಿಂದ ಕಾಮೆಂಟ್ ಸುರಿಮಳೆ

ಅಮೃತಾ ಅಯ್ಯಂಗಾರ್ ಅವರ ಈ ಪೋಸ್ಟ್​ಗೆ ದಿಶಾ ಮದನ್, ಶ್ರದ್ಧಾ ಶ್ರೀನಾಥ್​ ಕಾಮೆಂಟ್ ಮಾಡಿದ್ದಾರೆ. ಯು ಲುಕ್​ಡ್ ಪರ್ಫೆಕ್ಟ್ ಎಂದು ಶ್ರದ್ಧಾ ಶ್ರೀನಾಥ್ ಹೇಳಿದ್ರೆ, ದಿಶಾ ಮದನ್​ ಅವರು ಬ್ಯೂಟಿ ಎಂದು ಕಾಮೆಂಟ್ ಮಾಡಿದ್ದಾರೆ. ದಿವ್ಯಾ ಪಿಲ್ಲೈ, ನಿಶ್ವಿಕಾ ನಾಯ್ಡು ಕಾಮೆಂಟ್ ಮಾಡಿದ್ದಾರೆ.

ಹಲ್ಕಾ ಡಾನ್​ ಸಾಯಿ ಕುಮಾರ್ ಪ್ಯಾನ್​

ಟಗರು, ಸಲಗ ಸಿನಿಮಾ ನಿರ್ಮಿಸಿರುವ ಕೆಪಿ ಶ್ರೀಕಾಂತ್​ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದರೆ, ಛಲಾ ಅವರು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಅಮೃತಾ ಅಯ್ಯಂಗಾರ್​ ಹಾಗೂ ರತ್ನನ್ ಪ್ರಪಂಚ ಖ್ಯಾತಿಯ ಪ್ರಮೋದ್​ ಮಂಜು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ಸಾಯಿಕುಮಾರ್ ಅತಿಥಿ ಪಾತ್ರ

ಅಮೃತಾ ಅಯ್ಯಂಗಾರ್ ನಟನೆಯ ಹಲ್ಕಾಡಾನ್ ಸಿನಿಮಾಕ್ಕೆ ಸಾಯಿಕುಮಾರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟಾಲಿವುಡ್​ನಲ್ಲಿ ರಿಲೀಸ್ ಆಗಿದ್ದ ಆಂಧ್ರ ಕಿಂಗ್​ ಸಿನಿಮಾವನ್ನೇ ಈ ಚಿತ್ರವೂ ಹೋಲುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಅಮೃತಾ ಮೊದಲ ಸಿನಿಮಾ

ಅಮೃತಾ ಅವರು 2017ರಲ್ಲಿ ತೆರೆಕಂಡ 'ಸಿಂಹ ಹಾಕಿದ ಹೆಜ್ಜೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.

ಅಮೃತಾ ನಟಿಸಿದ ಸಿನಿಮಾಗಳಿವು

'ಬಡವ ರಾಸ್ಕಲ್', 'ಲವ್ ಮಾಕ್ಟೇಲ್', 'ಪಾಪ್‌ಕಾರ್ನ್ ಮಂಕಿ ಟೈಗರ್', 'ಶಿವಾರ್ಜುನ' ಮತ್ತು 'ಗುರುದೇವ್ ಹೋಯ್ಸಳ ಇವರು ನಟಿಸಿ, ಹಿಟ್ ಕಂಡ ಸಿನಿಮಾವಾಗಿದೆ.

ಡಾಲಿ -ಅಮೃತಾ ಡೇಟಿಂಗ್

ಅಮೃತಾ ಅಯ್ಯಂಗಾರ್ ಮತ್ತು ಡಾಲಿ ಧನಂಜಯ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಂದಂತಿ ಹರಿದಾಡಿತ್ತು.