ಅಮಲಾ ಪೌಲ್ ಅವರು 2017ರಲ್ಲಿ ರಿಲೀಸ್ ಆದ ಹೆಬ್ಬುಲಿ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಸುದೀಪ್ಗೆ ನಾಯಕಿಯಾಗಿ, ಮಿಂಚಿದ್ದರು. ಸಿನಿಮಾದಲ್ಲಿ ಸರಳತೆ ತೆಳ್ಳಗೆ ಬೆಳಗ್ಗೆ ಇದ್ದಾನೆ, ಯುದ್ಧಕ್ಕೆ ನಿಂತಾರೆ ಮದ್ದಾನೆ ಹಾಡಿನಲ್ಲಿ ಇವರು ಧರಿಸಿದ್ದ ಬಟ್ಟೆ ಹಾಗೂ ಆಕರ್ಷಕ ಆಭರಣಗಳು ಹೆಚ್ಚು ಗಮನ ಸೆಳೆದಿತ್ತು.
ಪಿಂಕ್ ಗೌನ್ನಕಲ್ಲಿ ಕ್ಲಾಸಿಕ್ ಲುಕ್
ಮಗುವಿನ ಆರೈಕೆಯಲ್ಲಿರುವ ಅಮಲಾ ಅವರು ಆಗಾಗ್ಗೆ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಲಿರುತ್ತಾರೆ, ಇನ್ಸ್ಟಾಗ್ರಾಮ್ನಲ್ಲಲಿ ಗುಲಾಬಿ ಬಣ್ಣದ ಗೌನ್ ಧರಿಸಿ ಸಂಪ್ರದಾಯಸ್ಥ ಮಾದರಿ ಫೋಟೋಶೂಟ್ ಮಾಡಿಸಿಕೊಂಡು ಪಟ ಹಂಚಿಕೊಂಡಿದ್ದಾರೆ. ಇದಕ್ಕೆ ಡ್ರೀಂ ಟೀಂ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.
'ದೈವ ತಿರುಮಗಳ್' ಎಂದ ಫ್ಯಾನ್ಸ್
ಅಮಲಾ ಪೌಲ್ ಅವರು ಧರಿಸಿರುವ ಬಟ್ಟೆ ಮೇಲೆ ಕಸೂತಿಯಿಂದ ವರ್ಕ್ ಮಾಡಲಾಗಿದೆ. ಇದಕ್ಕೆ ತಕ್ಕನಾಗಿ ಕ್ಲಾಸಿ ಮೇಕಪ್ ಮಾಡಿಕೊಂಡು, ಬಿಳಿ ಬಣ್ಣದ ಹೈ ಹೀಲ್ಡ್ ಧರಿಸಿದ್ದಾರೆ, ಅಭಿಮಾನಿಗಳು ಅವರಿಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿರುವುದಲ್ಲೇ, ಅವರದ್ದೇ ಸಿನಿಮಾದ ಹಾಡುಗಳನ್ನು ಹಾಡುತ್ತಿದ್ದಾರೆ.
ಲೆವಲ್ ಕ್ರಾಸ್ ಕೊನೇ ಸಿನಿಮಾ?
2024ರಲ್ಲಿ ಅಮಲಾ ಪೌಲ್ ಲೆವಲ್ಕ್ರಾಸ್ ಸಿನಿಮಾದಲ್ಲಿ ನಟಿಸಿದ್ದರು. ಇದೇ ಕೊನೆ ಅಂದಿನಿಂದ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಅಪಡೇಟ್ ಸಹ ಇಲ್ಲ. ಲೆವೆಲ್ ಕ್ರಾಸ್ ಮಲಯಾಳಂ ಸಿನಿಮಾ ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾ.
ಅಮಲಾ ಪೌಲ್ ಸಿನಿ ಪಯಣ
ಇದ್ದರಮ್ಮಾಯಲತೋ, ಮೈನಾ ಹೆಬ್ಬುಲಿ, ದಿ ಗೋಟ್ ಕೈಫ್ ಅಡೈ.ವೇಲೈಯಿಲ್ಲಾ ಪಟ್ಟಾದಾರಿ ದೈವ ತಿರುಮಗಲ್, ತಲೈವಾ, ರಾಟ್ಸಸನ್, ಅಡೈ ಇವರ ಹಿಟ್ ಸಿನಿಮಾಗಳಾಗಿವೆ.
ದಾಂಪತ್ಯ ಜೀವನ ಹೇಗಿದೆ?
ಅಮಲಾ ಪೌಲ್ ಅವರು 2023ರಂದು ನವೆಂಬರ್ನಲ್ಲಿ ಜಗತ್ ದೇಸಾಯಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಂಪತಿಗೆ ಇಲಾಯ್ ಎನ್ನುವ ಮಗುವಿದೆ. ಇದಕ್ಕೂ ಮುನ್ನ 2014ರಲ್ಲಿ ನಿರ್ದೇಶಕ ಎಎಲ್ ವಿಜತ್ ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಅವರು 2017ರಲ್ಲಿ ಡಿವೋರ್ಸ್ ಪಡೆದುಕೊಂಡಿದ್ದರು.