'ಅಲ್ಫಾ' ಸುಂದರಿ ಶರ್ವರಿ ವಾಘ್​!

ವಿನಾಯಕ ನಾಯಕ

'ಅಲ್ಫಾ' ಸುಂದರಿ ಶರ್ವರಿ ವಾಘ್​!

ಶರ್ವರಿ ನಟನೆಯೊಂದಿಗೆ ಬಣ್ಣದ ಲೋಕಕ್ಕೆ ಬರುವ ಮುನ್ನ 2015ರಲ್ಲಿ ಸಹ ನಿರ್ದೇಶಕಿಯಾಗಿ ಕೆಲಸ ಆರಂಭಿದ್ದರು. ಇವರು 'ಪ್ಯಾರ್ ಕಾ ಪಂಚ್‌ನಾಮಾ 2', 'ಬಾಜಿರಾವ್​ ಮಸ್ತಾನಿ' ಮತ್ತು 'ಸೋನು ಕೆ ಟಿತು ಕಿ ಸ್ವೀಟಿ' ಯಂತಹ ಜನಪ್ರಿಯ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ನಟನಾ ಪ್ರವೇಶ

ಶರ್ವರಿ 2020ರಲ್ಲಿ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಬಿಡುಗಡೆಯಾದ ಕಬೀರ್ ಖಾನ್ ಅವರ 'ದಿ ಫರ್ಗೆಟನ್ ಆರ್ಮಿ - ಆಜಾದಿ ಕೆ ಲಿಯೇ' ವೆಬ್ ಸೀರಿಸ್ ಮೂಲಕ ಅಧಿಕೃತವಾಗಿ ನಟನಾ ರಂಗಕ್ಕೆ ಕಾಲಿಟ್ಟರು.

ಚಿತ್ರರಂಗಕ್ಕೆ ಪದಾವರ್ಪಣೆ ಮತ್ತು ಪ್ರಶಸ್ತಿ

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ 'ಬಂಟಿ ಔರ್ ಬಬ್ಲಿ 2' ಸಿನಿಮಾ ಮೂಲಕ ಇವರು ದೊಡ್ಡ ಪರದೆಗೆ ನಾಯಕಿಯಾಗಿ ಪರಿಚಯವಾದರು. ಈ ಚಿತ್ರದ ನಟನೆಗಾಗಿ ಅವರಿಗೆ ಪ್ರತಿಷ್ಠಿತ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪಾದಾರ್ಪಣೆ ಪ್ರಶಸ್ತಿ ಲಭಿಸಿತು.

ದೊಡ್ಡ ಬ್ರೇಕ್ ಮತ್ತು ಯಶಸ್ಸು

2024ರಲ್ಲಿ ಬಿಡುಗಡೆಯಾದ ಕಾಮಿಡಿ-ಹರರ್ ಚಿತ್ರ ಮುಂಜ್ಯಾ ಶರ್ವರಿ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಮ್ಯಾಡಾಕ್ ಹಾರರ್ ಕಾಮಿಡಿ ಯೂನಿವರ್ಸ್‌ನ ಈ ಚಿತ್ರ ಬಾಕ್ಸ್‌ಆಫಿಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿತು.

ವೈವಿಧ್ಯಮಯ ಪಾತ್ರಗಳು

ಮುಂಜ್ಯಾ ಯಶಸ್ಸಿನ ಬಳಿಕ 2024ರಲ್ಲಿ ಬಿಡುಗಡೆಯಾದ ಆಕ್ಷನ್ ಪ್ರಧಾನ ವೇದಾ ಚಿತ್ರದಲ್ಲಿ ಪ್ರಮುಖ ನಾಯಕಿಯಾಗಿ ನಟಿಸುವ ಮೂಲಕ ತಮ್ಮ ನಟನಾ ಪ್ರತಿತಿಯನ್ನು ವಿಸ್ತರಿಸಿಕೊಂಡರು.

ದೊಡ್ಡ ಬಜೆಟ್‌ನ ಆಕ್ಷನ್ ಸಿನಿಮಾಗಳು

ಶರ್ವರಿ ಬಾಲಿವುಡ್‌ನ ಪ್ರತಿಷ್ಠಿತ ವೈಆರ್​​ಎಫ್​ ಸ್ಪೈ ಯೂನಿವರ್ಸ್ ನ ಭಾಗವಾಗಿದ್ದು, ಆಲಿಯಾ ಭಟ್ ಜೊತೆ 'ಆಲ್ಫಾ' ಸಿನಿಮಾದಲ್ಲಿ ಪ್ರಮುಖ ಸೂಪರ್-ಸೋಲ್ಜರ್ ಪಾತ್ರದಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ.