ಬ್ಲ್ಯಾಕ್ ಡ್ರೆಸ್, ಬಾಸ್ ಲುಕ್​ನಲ್ಲಿ ಮಿಂಚಿದ ಆಲಿಯಾ

ಭೂಮಿಕಾ ವಿ. ನಾಥ್​​​

ಬ್ಲ್ಯಾಕ್ ಡ್ರೆಸ್, ಬಾಸ್ ಲುಕ್​ನಲ್ಲಿ ಮಿಂಚಿದ ಆಲಿಯಾ

ಬಾಲಿವುಡ್ನ ಮುದ್ದಾದ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್, ಮಗಳು ರಾಹಾ ಬಂದ ಮೇಲೆ ಈ ಜೋಡಿಯ ಖುಷಿ ಮತ್ತಷ್ಟು ಹೆಚ್ಚಾಗಿದೆ. ದೀಗ ಬ್ಲಾಕ್ ಡ್ರೆಸ್​ನಲ್ಲಿ ಬಾಸ್ ಲುಕ್​ನಲ್ಲಿ ಆಲಿಯಾ ಮಿಂಚುತ್ತಿದ್ದಾರೆ.

ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು

ಆಲಿಯಾ ಭಟ್ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು. ನಟನೆಯ ಜೊತೆಗೆ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಈಗ ಆಲಿಯಾ ಅವರ ಮುಂಬರುವ ಚಿತ್ರದ ಬಗ್ಗೆ ದೊಡ್ಡ ಅಪ್ಡೇಟ್ ನೀಡಿದ್ದು, ಫ್ಯಾನ್ಸ್ ಖುಷ್ ಆಗಿದ್ದಾರೆ.

ಯೂನಿವರ್ಸ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

ಆಲಿಯಾ ಭಟ್ ಸ್ಪೈ ಯೂನಿವರ್ಸ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಆಕ್ಷನ್-ಎಂಟರ್ಟೈನರ್ ಚಿತ್ರದಲ್ಲಿ ಆಲಿಯಾ ಭಟ್ ಜೊತೆಗೆ ನಟಿ ಶಾರ್ವರಿ ವಾಘ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಬಾಸ್ ಲೇಡಿ ಲುಕ್ ನೋಡಿ ಅಭಿಮಾನಿಗಳು ಬೋಲ್ಡ್

ಆಲಿಯಾ ಭಟ್ ತಮ್ಮ ಇತ್ತೀಚಿನ ಪೋಸ್ಟ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಆಲಿಯಾ ಅವರ ಬಾಸ್ ಲೇಡಿ ಲುಕ್ ನೋಡಿ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ.

ಗಂಗೂಬಾಯಿ ಸಿನಿಮಾಗೆ ರಾಷ್ಟ್ರಪ್ರಶಸ್ತಿ

ಲಿಯಾ ಭಟ್ ಅವರು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ ನಟಿ ಗಂಗೂಬಾಯಿ ಸಿನಿಮಾಗಾಗಿ ರಾಷ್ಟ್ರಪ್ರಶಸ್ತಿ ಕೂಡಾ ಮುಡಿಗೇರಿಸಿಕೊಂಡಿದ್ದಾರೆ.