ಕೇನ್ಸ್​ನಲ್ಲಿ ಆಲಿಯಾ ಭಟ್ ಸ್ಟನ್ನಿಂಗ್

ಮಮತಾ

ಕೇನ್ಸ್​ನಲ್ಲಿ ಆಲಿಯಾ ಭಟ್ ಸ್ಟನ್ನಿಂಗ್

ಮೇ.12ರಂದು ನಡೆದ ಕೇನ್ಸ್​ ಫಿಲ್ಮಂ ಫೆಸ್ಟಿವಲ್​ನ ಉದ್ಘಾಟನ ಸಮಾರಂಭದಲ್ಲಿ ಆಲಿಯಾ ಭಟ್​ ಅವರು ಲೊರಿಯಲ್ ಪ್ಯಾರಿಸ್‌ನ ಜಾಗತಿಕ ರಾಯಭಾರಿಯಾಗಿ ಭಾಗವಹಿಸಿದರು.

ಗುಲಾಬಿ ಬಣ್ಣದ ಗೌನ್​​ನಲ್ಲಿ ಮಿಂಚಿಂಗ್​

ಆಲಿಯಾ ಅವರು ಧರಿಸಿದ್ ಗೌನ್​​​ ಮತ್ತದಕ್ಕೆ ಸ್ಟ್ರಾಪ್​ಲೆಸ್​ ಬೋಡಿಸ್​ ಮತ್ತು ಡೀಪ್​ ಪ್ಲಂಜ್​ ನೆಕ್ ಲೈನ್​​​​ ಸಾಂಪ್ರದಾಯಿಕ ಶೈಲಿಗೆ ಆಧುನಿಕ ಸ್ಪರ್ಶ ಕೊಟ್ಟಂತೆ ಇತ್ತು. ಅವರ ಕೈಗಳಿಗೆ ಒಪ್ಪುವಂತೆ ಶಿಫಾನ್​ ದುಪ್ಪಟ್ಟ ಶೈಲಿಯಾ ಕೇಪ್​​​​​ ಹೇಳಿ ಮಾಡಿಸಿದಂತು. ರೆಡ್​ ಕಾರ್ಪೆಟ್​ ಮೇಲೆ ಆಲಿಯಾ ವಾಕ್​ ಸ್ಟನ್ನಿಂಗ್ ಆಗಿ ಕಂಡಿತ್ತು.

ಆಲಿಯಾ ಧರಿಸಿದ್ದ ಆಭರಣಗಳ ವಿಶೇಷತೆ ಇದು

ಆಲಿಯಾ ತನ್ನ ಗೌನ್​ಗೆ ತಕ್ಕಂತೆ 168.27 ಕ್ಯಾರೆಟ್​ನ ಗುಲಾಬಿ ಹವಳದ ನೆಕ್ಲೇಸ್​ ಅನ್ನು ಧರಿಸಿದ್ದರು. ಸ್ಕ್ವೇರ್-ಕಟ್ ಡೈಮಂಡ್ ಇಯರ್‌ರಿಂಗ್ಸ್ ಹಾಗೂ ಬೆರಳಿನಲ್ಲಿ ಅಸ್ಚರ್-ಕಟ್ ಡೈಮಂಡ್ ಉಂಗುರ ಧರಿಸಿದ್ದರು. ಇವು ಆಭರಣ ಪ್ರಿಯರ ಕಣ್​ ಸೆಳೆಯುವಂತೆ ಮಾಡಿತ್ತು.

ಎರಡನೇ ಬಾರಿ ಕೇನ್ಸ್​ನಲ್ಲಿ ಭಾಗಿ

ಆಲಿಯಾ ಭಟ್​ ಅವರು ಕಳೆದ ವರ್ಷವು ಕೇನ್ಸ್​ಗೆ ಆಗಮಿಸಿದ್ದರು. ಇದು ಅವರ ಎರಡನೇ ಭೇಟಿ. ಇದಕ್ಕೂ ಮುನ್ನ ಯಶ್​ ಪಾಟೀಲ್​ ವಿನ್ಯಾಸಗೊಳಿಸಿದ್ದ ಹ್ಯಾಂಡ್​ ಪೇಂಟೆಡ್​ ಗೌನ್​ ಧರಿಸಿ ಆಲಿಯಾ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡಿದ್ದರು.

ಮೇ. 23ವರೆಗೂ ಇರಲಿದೆ ಕೇನ್ಸ್ ಸಿನಿಮಾ​ ಸಂಭ್ರಮ

79ನೇ ಕೇನ್ಸ್​ ಚಲನ ಚಿತ್ರೋತ್ಸವ ಮೇ.12ರಿಂದ ಆರಂಭವಾಗಿದ್ದು, ಈ ತಿಂಗಳ 23ವರೆಗೂ ನಡೆಯಲಿದೆ ಎನ್ನಲಾಗುತ್ತಿದೆ. ಫ್ರ್ಯಾನ್ಸ​ನ ಪಲೈಸ್​ ಡೆಸ್ಟ್​ ಫೆಸ್ಟಿವಲ್ಸ್

ತುಪ್ಪ ಆಲಿಯಾರ ಬ್ಯೂಟಿ ಸೀಕ್ರೇಟ್​

ನಾವು ಆಹಾರವನ್ನು ಸಾಮಾನ್ಯವಾಗಿ ತುಪ್ಪದಲ್ಲಿ ಬೇಯಿಸಿದ ಆಹಾರ ಸೇವನೆ ಮಾಡುತ್ತೇವೆ. ಇದು ಕರುಳಿನ ಆರೋಗ್ಯಕ್ಕೆ ಮತ್ತು ಚರ್ಮಕ್ಕೆ ಒಳ್ಳೆಯದು ಎಂದು ಆಲಿಯಾ ಹೇಳಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.