ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಅಖಿಲೇಶ್ ಯಾದವ್! akhilesh yadav
ಸವಿನಾ ನಾಯ್ಕ
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಅಖಿಲೇಶ್ ಯಾದವ್! akhilesh yadav
ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಕನ್ನೌಜ್ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಅಧ್ಯಕ್ಷರು ಹಾಗೂ ಸಂಸದರಾದ ಅಖಿಲೇಶ್ ಯಾದವ್ (Akhilesh Yadav) ಬೆಂಗಳೂರಿಗೆ ಭೇಟಿ ನೀಡಿದ್ದಾರೆ.
ಬೆಂಗಳೂರಿನ ಪ್ರಸಿದ್ದ ಕೆಫೆಗೆ ಭೇಟಿ ಕೊಟ್ಟ ಅಖಿಲೇಶ್ ಯಾದವ್!
ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್ ರಾಮೇಶ್ವರಂ ಕೆಫೆ (Rameshwaram Cafe) ಗೆ ಭೇಟಿ ನೀಡಿ ಖಾದ್ಯ ಸವಿಸಿದ್ದಾರೆ. ದೋಸೆಗೆ ಅಖಿಲೇಶ್ ಯಾದವ್ ಮಾರು ಹೋಗಿದ್ದಾರೆ.
ಕರ್ನಾಟಕದ ಒಂದು ನೆನಪು,ರುಚಿಗೆ ಹಳೆಯ ಸಂಬಂಧ!
ಕರ್ನಾಟಕದ ನೆನಪು, ಹಳೆಯ ಬಂಧ.. ಧನ್ಯವಾದಗಳು ಬೆಂಗಳೂರು ಎಂದು ಬರೆದುಕೊಂಡು..ರಾಮೇಶ್ವರಂ ಕೆಫೆ ಒಳಗೆ ಕುಳಿತುಕೊಂಡು ದೋಸೆ ಸವಿಯುತ್ತಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಾಮೇಶ್ವರಂ ಕೆಫೆ ತಿಂಡಿ ಬಗ್ಗೆ ಮೆಚ್ಚುಗೆ!
ಅಖಿಲೇಶ್ ಯಾದವ್ ರಾಮೇಶ್ವರಂ ಕೆಫೆ ತಿಂಡಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿರುವ ಸಂಬಂಧಿಯೊಬ್ಬರ ಮನೆಗೆ ಬಂದಿದ್ದ ವೇಳೆ ಅಖಿಲೇಶ್ ಯಾದವ್ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ್ದಾರೆ.