ಕಿಚ್ಚ ಸುದೀಪ್ ನಟನೆಯ ಸೂಪರ್ ಹಿಟ್ ಸಿನಿಮಾ ಪೈಲ್ವಾನ್ ಮೂಲಕ ಕನ್ನಡಿಗರಿಗೆ ಪರಿಚಿತರಾಗಿರುವ ನಟಿ ಆಕಾಂಕ್ಷಾ ಸಿಂಗ್, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದು, ವೈರಲ್ ಆಗುತ್ತಿವೆ.
ಜೈಪುರದ ಸುಂದರಿ
ಆಕಾಂಕ್ಷಾ ಸಿಂಗ್ ಅವರು 1990 ಜುಲೈ 30ರಂದು ರಾಜಸ್ಥಾನದ ಜೈಪುರದಲ್ಲಿ ಜನಿಸಿದರು. ಅವರು ಫಿಸಿಯೋಥೆರಪಿಸ್ಟ್ ಶಿಕ್ಷಣ ಪಡೆದಿದ್ದಾರೆ.
ರಂಗಭೂಮಿ ನಂಟು
ಆಕಾಂಕ್ಷಾ ಅವರ ತಾಯಿ ರಂಗಭೂಮಿ ನಟಿ ಆಗಿದ್ದು, ಅಲ್ಲಿಂದಲೇ ತಮ್ಮ ವೃತ್ತಿಜೀವನ ಆರಂಭಿಸಿದರು. 2012ರಲ್ಲಿ ಹಿಂದಿ ಟಿವಿ ಸೀರಿಯಲ್ ನಾ ಬೋಲೆ ತುಮ್ ನಾ ಮೈನ್ ಕುಚ್ ಕಹಾ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು.
ಸಿನಿಮಾಗೆ ಎಂಟ್ರಿ
2017ರಲ್ಲಿ ತೆರೆಕಂಡ ಬದ್ರಿನಾಥ್ ಕಿ ದುಲ್ಹಾನಿಯಾ (ಹಿಂದಿ) ಮತ್ತು ಮಲ್ಲಿ ರಾವ (ತೆಲುಗು) ಚಿತ್ರಗಳ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಮಲ್ಲಿ ರಾವಾಗಾಗಿ SIIMA ಅವಾರ್ಡ್‌ಗೆ ನಾಮನಿರ್ದೇಶನಗೊಂಡಿದ್ದರು.
ಪೈಲ್ವಾನ್ನಿಂದ ಖ್ಯಾತಿ
2019ರಲ್ಲಿ ತೆರೆಕಂಡ ಸುದೀಪ್ ನಟನೆಯ ಪೈಲ್ವಾನ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದರು. ಈ ಚಿತ್ರವು ಬಹುಭಾಷೆಯಲ್ಲಿ ರಿಲೀಸ್ ಆಗಿ ಗಮನ ಸೆಳೆದಯಿತು ಮತ್ತು ಕನ್ನಡದಲ್ಲಿ ಒಳ್ಳೆಯ ಗುರುತು ತಂದುಕೊಟ್ಟಿತು.
ಸಕಲಕಲಾ ವಲ್ಲಭೆ
ಹಲವು ಭಾಷೆಗಳಲ್ಲಿ (ಹಿಂದಿ, ತೆಲುಗು, ಕನ್ನಡ) ಕೆಲಸ ಮಾಡುತ್ತಿರುವ ಆಕಾಂಕ್ಷಾ ನಟಿ ಮಾತ್ರವಲ್ಲದೆ ಗಾಯಕಿ ಮತ್ತು ಬರಹಗಾರ್ತಿಯಾಗಿಯೂ ಸಕ್ರಿಯರಾಗಿದ್ದಾರೆ. 2014ರಲ್ಲಿ ಕುನಾಲ್ ಸೈನ್ ಅವರನ್ನು ಮದುವೆಯಾಗಿದ್ದಾರೆ.
ಹಾಟ್ ಫೋಟೋಸ್ ವೈರಲ್
ಜಾಲತಾಣದಲ್ಲಿ ಸಕ್ರಿಯರಾಗಿರುವ ಆಕಾಂಕ್ಷಾ, ಇದೀಗ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಿಳಿ ಬಣ್ಣದ ಶರ್ಟ್ ಮತ್ತು ಜೀನ್ಸ್ ಶಾರ್ಟ್ಸ್ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಪಡ್ಡೆ ಹುಡುಗರು ಫಿದಾ
ಆಕಾಂಕ್ಷಾ ಹಂಚಿಕೊಂಡಿರುವ ಹಾಟ್ ಫೋಟೋಗಳಿಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. 20 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಪೈಲ್ವಾನ್ ಬ್ಯೂಟಿಯ ಮೈಮಾಟವನ್ನು ನೋಡಿ ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ.