ಗ್ಲಾಮರ್​ ಡೋಸ್​ ಹೆಚ್ಚಿಸಿದ ಐಶು!

ರಮೇಶ್​ ಕುಮಾರ್​​ ಬಿ ಎಡಮೋಳೆ

ಗ್ಲಾಮರ್​ ಡೋಸ್​ ಹೆಚ್ಚಿಸಿದ ಐಶು!

ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಪ್ರತಿಭಾನ್ವಿತ ಹಾಗೂ ಸಹಜ ಅಭಿನಯಕ್ಕೆ ಹೆಸರಾಗಿರುವ ನಟಿ ಐಶ್ವರ್ಯಾ ರಾಜೇಶ್ ಅವರ ಹಾಟ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ಚಿತ್ರರಂಗದ ಹಿನ್ನೆಲೆ

ಐಶ್ವರ್ಯಾ ರಾಜೇಶ್ ಜನಿಸಿದ್ದು ಚೆನ್ನೈನಲ್ಲಿ ಆದರೂ, ಅವರದ್ದು ಮೂಲತಃ ತೆಲುಗು ಕುಟುಂಬ. ತಂದೆ ರಾಜೇಶ್ ಕೂಡ ತೆಲುಗಿನ ಪ್ರಸಿದ್ಧ ನಟರಾಗಿದ್ದರು. ಅಷ್ಟೇ ಅಲ್ಲದೆ, ತಾತ ಅಮರನಾಥ್ ಪ್ರಮುಖ ನಟ ಮತ್ತು ನಿರ್ಮಾಪಕರಾಗಿದ್ದರು.

ವೃತ್ತಿಜೀವನದ ಆರಂಭ

ಆರಂಭದಲ್ಲಿ ಸನ್ ಟಿವಿಯ 'ಅಸತಪೋವದು ಯಾರು' ರಿಯಾಲಿಟಿ ಶೋ ಮೂಲಕ ನಿರೂಪಕಿಯಾಗಿ ಗುರುತಿಸಿಕೊಂಡ ಇವರು, ನಂತರ ಸಿನಿಮಾರಂಗಕ್ಕೆ ಪ್ರವೇಶಿಸಿದರು.

ಬ್ರೇಕ್‌ಥ್ರೂ ಸಿನಿಮಾ

2014ರಲ್ಲಿ ಬಂದ ಪಾ ರಂಜಿತ್ ನಿರ್ದೇಶನದ ಅಟ್ಟಕತ್ತಿ ಒಳ್ಳೆಯ ಹೆಸರು ತಂದುಕೊಟ್ಟರೆ, 2015ರ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಕಾಕ ಮುಟ್ಟೈ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್‌ಥ್ರೂ ನೀಡಿತು..

ಕನಾ ತಂದುಕೊಟ್ಟ ಸ್ಟಾರ್‌ಡಮ್

ವೃತ್ತಿಜೀವನದ ಮೈಲಿಗಲ್ಲು ಎಂದರೆ ಅದು 'ಕನಾ' ಸಿನಿಮಾ. ಮಹಿಳಾ ಪ್ರಧಾನ ಕ್ರೀಡಾ ಆಧಾರಿತ ಚಿತ್ರದಲ್ಲಿ ಕ್ರಿಕೆಟರ್ ಆಗಿ ಅದ್ಭುತವಾಗಿ ನಟಿಸಿದ್ದರು. ಈ ಚಿತ್ರದ ಯಶಸ್ಸು ಮಹಿಳಾ ಪ್ರಧಾನ ಸಿನಿಮಾಗಳಿಗೆ ಸೂಕ್ತ ನಾಯಕಿ ಎಂದು ಸಾಬೀತುಪಡಿಸಿತು.

ಇತ್ತೀಚಿನ ಸಿನಿಮಾಗಳು

ಐಶ್ವರ್ಯಾ ರಾಜೇಶ್ ಇತ್ತೀಚಿನ ವರ್ಷಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಕ್ರಾಂತಿಕಿ ವಸ್ತುನ್ನಾಂ ಹಾಗೂ ತೀಯವರ್ ಕುಲೈ ನಡುಂಗ ಸಿನಿಮಾಗಳಲ್ಲಿ ನಡೆಸಿದ್ದಾರೆ.

ಹಾಟ್​ ಫೋಟೋಸ್​ ವೈರಲ್​

ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುವ ಐಶ್ವರ್ಯಾ ಆಗಾಗ ಹಾಟ್​ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ. ಇದೀಗ ಇನ್​ಸ್ಟಾದಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ ನೀಲಿ ಬಣ್ಣದ ಸ್ಟ್ರ್ಯಾಪ್ಡ್ ಟಾಪ್ ಮತ್ತು ಅದಕ್ಕೆ ಮ್ಯಾಚಿಂಗ್ ಆದ ಜೀನ್ಸ್ ಪ್ಯಾಂಟ್ ಧರಿಸಿ, ಗ್ಲಾಮರಸ್​​ ಆಗಿ ಕಾಣಿಸಿಕೊಂಡಿದ್ದಾರೆ.

ಫ್ಯಾನ್ಸ್​ ಫಿದಾ

ಹೊಸ ಫೋಟೋಗಳಲ್ಲಿ ಐಶ್ವರ್ಯಾ ಅವರ ಗ್ಲಾಮರಸ್​ ಅವತಾರವನ್ನು ಕಂಡು ಫಿದಾ ಆಗಿರುವ ಫ್ಯಾನ್ಸ್ ತರಹೇವಾರಿ ಕಾಮೆಂಟ್​ಗಳ ಮೂಲಕ ಐಶ್ವರ್ಯಾರ ಸೌಂದರ್ಯವನ್ನು ಹೊಗಳುತ್ತಿದ್ದಾರೆ.​