ಸೌತ್ ಬ್ಯೂಟಿ ಐಶ್ವರ್ಯಾ ರಾಜೇಶ್ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಭಿನ್ನ ಹಾಗೂ ಆಕರ್ಷಕ ಫೋಟೋಶೂಟ್ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಫ್ಯಾಷನ್ ಲುಕ್
ಹೊಸ ಫೋಟೋಶೂಟ್‌ನಲ್ಲಿ ಐಶ್ವರ್ಯಾ ಅವರು ಬೋಲ್ಡ್ ಬ್ಲಾಕ್ ಕ್ರೋಚೆಟ್ ಹಾಲ್ಟರ್ ಟಾಪ್ ಜೊತೆಗೆ ಡೆನಿಮ್ ಧರಿಸಿದ್ದು, ಬ್ಲಾಕ್ ಬಂದಾನಾ, ಲೇಯರ್ಡ್ ಗೋಲ್ಡ್-ಅಂಡ್-ಪರ್ಲ್ ನೆಕ್ಲೇಸ್ ಹಾಗೂ ಸಿಲ್ಕಿ ಸ್ಕಾರ್ಫ್ ಬಳಸಿ ಎಡ್ಜಿ ಹೈ-ಫ್ಯಾಷನ್ ಸ್ಟ್ರೀಟ್ ಸ್ಟೈಲ್ ಲುಕ್ ಪಡೆದಿದ್ದಾರೆ.
ಮೇಕಪ್ ಶೈಲಿ
ಸಾಫ್ಟ್ ಸ್ಮೋಕಿ ಐಸ್ ಮತ್ತು ಗ್ಲಾಸಿ ನ್ಯೂಡ್ ಲಿಪ್ಸ್ ಅವರ ಈ ಚಿಕ್ ಹಾಗೂ ಕಾನ್ಫಿಡೆಂಟ್ ಲುಕನ್ನು ಮತ್ತಷ್ಟು ಪೂರ್ಣಗೊಳಿಸಿವೆ.
ಆಧುನಿಕ ಶೈಲಿ ಪ್ರಯೋಗ
ತೆರೆಮೇಲಿನ ತಮ್ಮ ಸಾಂಪ್ರದಾಯಿಕ ಇಮೇಜ್‌ನಿಂದ ಹೊರಬಂದು, ಈ ಚಿತ್ರಗಳಲ್ಲಿ ಐಶ್ವರ್ಯ ಹೆಚ್ಚು ಆಧುನಿಕ ಮತ್ತು ಅರ್ಬನ್ ಸೌಂದರ್ಯದೊಂದಿಗೆ ಮಿಂಚಿದ್ದಾರೆ.
ಸಂಕ್ರಾಂತಿಗೆ ವಸ್ತುನಂ ಹಿಟ್
ಕಳೆದ ವರ್ಷ ತೆರೆಕಂಡ ಬ್ಲಾಕ್‌ಬಸ್ಟರ್ ತೆಲುಗು ಚಿತ್ರ 'ಸಂಕ್ರಾಂತಿಗೆ ವಸ್ತುನಂ' ಮೂಲಕ ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದ ಐಶ್ವರ್ಯಾ ಅವರು, ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.
ಮುಂಬರುವ ಪ್ರಾಜೆಕ್ಟ್‌ಗಳು
ತೆಲುಗಿನ 'ಮಹೇಂದ್ರಗಿರಿ ವರಾಹಿ' ಚಿತ್ರದ ಜೊತೆಗೆ ಕೆಲವು ತಮಿಳು ಮತ್ತು ಕನ್ನಡ ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದು, ಬಹುಭಾಷ ನಟಿ ಎಂಬ ಹೆಗ್ಗಳಿಕೆ ಗಳಿಸುವತ್ತ ಹೆಜ್ಜೆ ಹಾಕಿದ್ದಾರೆ.