ನಟಿ ಐಶ್ವರ್ಯಾ ಲಕ್ಷ್ಮೀ ಅವರು ಇತ್ತೀಚೆಗೆ ತಮ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅವರ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ವೃತ್ತಿಜೀವನದ ಯಶಸ್ಸಿನ ಹಂತ
ನಟಿ ಐಶ್ವರ್ಯಾ ಲಕ್ಷ್ಮೀ ಅವರು ಸದ್ಯ ತಮ್ಮ ಸಿನಿಮಾ ಕೆರಿಯರ್‌ನ ಅತ್ಯಂತ ರೋಚಕ ಹಾಗೂ ಯಶಸ್ವಿ ಹಂತವನ್ನು ಆನಂದಿಸುತ್ತಿದ್ದಾರೆ.
ಥಗ್ ಲೈಫ್ ತಂದ ಜನಪ್ರಿಯತೆ
ಕಳೆದ ವರ್ಷ ತೆರೆಕಂಡ ಕಮಲ್ ಹಾಸನ್ ಹಾಗೂ ಸಿಂಬು ಅವರಂತಹ ಸ್ಟಾರ್ ನಟರನ್ನೊಳಗೊಂಡ ಬಿಗ್ ಬಜೆಟ್ ಸಿನಿಮಾ 'ಥಗ್ ಲೈಫ್' ಚಿತ್ರದಲ್ಲಿ ಅವರು ನಿಭಾಯಿಸಿದ ಅತಿಥಿ ಪಾತ್ರ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿತ್ತು.
ಸಾಲು ಸಾಲು ದೊಡ್ಡ ಚಿತ್ರಗಳು
ಸದ್ಯ ಅವರ ಕೈಯಲ್ಲಿ ಬ್ಯಾಕ್-ಟು-ಬ್ಯಾಕ್ ಮೂರು ದೊಡ್ಡ ಸಿನಿಮಾಗಳಿದ್ದು, ಭವಿಷ್ಯದಲ್ಲಿ ದೊಡ್ಡ ಸ್ಟಾರ್ ಆಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಬಹುಭಾಷಾ ಚಿತ್ರಗಳಲ್ಲಿ ಬಿಜಿ
ಐಶ್ವರ್ಯಾ ಅವರು ತೆಲುಗಿನ 'ಎಸ್‌ವೈಜಿ' (Sambarala Yeti Gattu), ಮಲಯಾಳಂನ ಇಂಟರೆಸ್ಟಿಂಗ್ ಥ್ರಿಲ್ಲರ್ ಚಿತ್ರ 'ಆಶಾ' ಹಾಗೂ ತಮಿಳಿನ ಬಹುನಿರೀಕ್ಷಿತ 'ಗಟ್ಟಾ ಕುಸ್ತಿ 2' ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಕೀರ್ತಿ ನಾಯರ್' ಆಗಿ ಮರಳಿ ಅಂಗಳಕ್ಕೆ
ಪ್ರೇಕ್ಷಕರಿಂದ ಭಾರಿ ಪ್ರೀತಿ ಗಳಿಸಿದ್ದ ತಮಿಳಿನ 'ಗಟ್ಟಾ ಕುಸ್ತಿ' ಚಿತ್ರದ ಸೀಕ್ವೆಲ್ ಆದ 'ಗಟ್ಟಾ ಕುಸ್ತಿ 2' ನಲ್ಲಿ ಐಶ್ವರ್ಯಾ ಅವರು ಮತ್ತೊಮ್ಮೆ 'ಕೀರ್ತಿ ನಾಯರ್' ಎಂಬ ಪವರ್‌ಫುಲ್ ಪಾತ್ರದ ಮೂಲಕ ಅಬ್ಬರಿಸಲಿದ್ದಾರೆ.
ಕ್ಲಾಸಿಕ್ ಸಾಂಪ್ರದಾಯಿಕ ಲುಕ್
ಇತ್ತೀಚೆಗೆ ಐಶ್ವರ್ಯಾ ಅವರು ಧರಿಸಿದ್ದ ತಿಳಿ ಚಿನ್ನದ ಬಣ್ಣದ ಬಾರ್ಡರ್ ಇರುವ ಐವರಿ ಕ್ರೀಮ್ ಸೀರೆ ಮತ್ತು ಡೀಪ್-ನೆಕ್ ಸ್ಲೀವ್‌ಲೆಸ್ ಬ್ಲೌಸ್ ಫ್ಯಾಷನ್ ಪ್ರಿಯರ ಗಮನ ಸೆಳೆದಿದೆ.
ರಾಯಲ್ ಫೋಟೋಶೂಟ್
ಉಡುಪಿಗೆ ಮ್ಯಾಚ್ ಆಗುವಂತೆ ಚಿನ್ನ ಮತ್ತು ಹಸಿರು ಬಣ್ಣದ ಚೋಕರ್ ಹಾರ, ಶಾರ್ಟ್ ಬಾಬ್ ಹೇರ್ನೊಂದಿಗೆ ಐಶ್ವರ್ಯಾ ಮಾಡಿಸಿರುವ ಫೋಟೋಶೂಟ್ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಭಿಮಾನಿಗಳು ಫಿದಾ
ಐಶ್ವರ್ಯಾ ಅವರ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ತರಹೇವಾರಿ ಕಾಮೆಂಟ್ಗಳ ಮೂಲಕ ಐಶ್ವರ್ಯಾ ಅವರ ಸೌಂದರ್ಯದ ಗುಣಗಾನ ಮಾಡುತ್ತಿದ್ದಾರೆ.