ಟ್ರೆಂಡಿ ಲುಕ್‌ನಲ್ಲಿ ಐಶಾನಿ ಶೆಟ್ಟಿ!

ಭಾನುಪ್ರಿಯ ಡಿ.ಕೆ

ಟ್ರೆಂಡಿ ಲುಕ್‌ನಲ್ಲಿ ಐಶಾನಿ ಶೆಟ್ಟಿ!

ಕನ್ನಡ ಚಿತ್ರರಂಗದಲ್ಲಿ ತಮ್ಮ ಪ್ರತಿಭೆ ಮತ್ತು ಸಹಜ ಅಭಿನಯದಿಂದ ಗುರುತಿಸಿಕೊಂಡಿರುವ ನಟಿ. ಮಾಡೆಲಿಂಗ್‌ನಿಂದ ಸಿನಿಜೀವನ ಆರಂಭಿಸಿದ ಅವರು, ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಸರಳ ಸೌಂದರ್ಯ

ಈ ಫೋಟೋದಲ್ಲಿ ಐಶಾನಿ ಶೆಟ್ಟಿ ಹಳದಿ ಬಣ್ಣದ ಸ್ಟೈಲಿಷ್ ಹಾಲ್ಟರ್ ನೆಕ್ ಉಡುಪಿನಲ್ಲಿ ಮಿಂಚಿದ್ದಾರೆ. ಸರಳ ಮೇಕಪ್, ನಾಜೂಕಾದ ಕಿವಿಯೋಲೆ, ಕೈಬಳೆ ಮತ್ತು ನೈಸರ್ಗಿಕ ಹೇರ್‌ಸ್ಟೈಲ್ ಅವರ ಲುಕ್‌ಗೆ ಮತ್ತಷ್ಟು ಮೆರುಗು ನೀಡಿವೆ.

ಸಿನಿಮಾಗಳು

ಐಶಾನಿ ಶೆಟ್ಟಿ ಜ್ಯೋತಿ ಅಲಿಯಾಸ್ ಕೋಟಿ ರಾಜ, ವಾಸ್ತು ಪ್ರಕಾರ, ರಾಕೆಟ್, ನಡುವೆ ಅಂತರವಿರಲಿ, ನಮ್ ಗಣಿ B.Com ಪಾಸ್, ಧರಣಿ ಮಂಡಲ ಮಧ್ಯದೊಳಗೆ ಹಾಗೂ ಹೊಂದಿಸಿ ಬರೆಯಿರಿ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಪ್ರಶಸ್ತಿಗಳು

ವಾಸ್ತು ಪ್ರಕಾರ ಚಿತ್ರದ ಅಭಿನಯಕ್ಕಾಗಿ IIFA Utsavam Awards‌ನಲ್ಲಿ ಅತ್ಯುತ್ತಮ ನಟಿ ವಿಭಾಗಕ್ಕೆ ನಾಮನಿರ್ದೇಶನ ದೊರಕಿತ್ತು. ಇದರೊಂದಿಗೆ ಅವರ ಅಭಿನಯಕ್ಕೆ ಸಿನಿಪ್ರಿಯರು ಮತ್ತು ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ನಿರ್ದೇಶಕರಾಗಿ ಐಶಾನಿ

'ಕಾಜಿ' ಕಿರುಚಿತ್ರದ ಮೂಲಕ ಐಶಾನಿ ಶೆಟ್ಟಿ ನಿರ್ದೇಶಕರಾಗಿಯೂ ಗುರುತಿಸಿಕೊಂಡರು. ಈ ಕಿರುಚಿತ್ರವು ಬೆಸ್ಟ್ ಆಫ್ ಇಂಡಿಯಾ, ದಾದಾ ಸಾಹೇಬ್ ಫಾಲ್ಕೆ, ಬೆಂಗಳೂರು ಅಂತರರಾಷ್ಟ್ರೀಯ, ಪಿಂಕ್ ಸಿಟಿ ಹಾಗೂ ಮುಂಬೈ ಕಿರುಚಿತ್ರೋತ್ಸವ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅಧಿಕೃತ ಆಯ್ಕೆ ಪಡೆದು ಪ್ರದರ್ಶನಗೊಂಡಿತು.

ವಾಸ್ತು ಪ್ರಕಾರ

ಹೆಚ್ಚಿನ ಜನಪ್ರಿಯತೆ ಮತ್ತು ಗುರುತನ್ನು ತಂದುಕೊಟ್ಟ ಚಿತ್ರ ವಾಸ್ತು ಪ್ರಕಾರ. ಯೋಗರಾಜ್ ಭಟ್​ ನಿರ್ದೇಶನದ ಈ ಚಿತ್ರದಲ್ಲಿ ಅವರ ಅಭಿನಯ ಮೆಚ್ಚುಗೆ ಪಡೆದಿದ್ದು, ಅತ್ಯುತ್ತಮ ನಟಿ ವಿಭಾಗದ ಪ್ರಶಸ್ತಿ ನಾಮನಿರ್ದೇಶನವನ್ನೂ ತಂದುಕೊಟ್ಟು ಅವರ ಸಿನಿಜೀವನಕ್ಕೆ ಮಹತ್ವದ ತಿರುವು ನೀಡಿತು.