ಬ್ಲಾಕ್​ ಔಟ್‌ಫಿಟ್‌ನಲ್ಲಿ ಐಶಾನಿ ಶೆಟ್ಟಿ!

ಭಾನುಪ್ರಿಯ ಡಿ.ಕೆ

ಬ್ಲಾಕ್​ ಔಟ್‌ಫಿಟ್‌ನಲ್ಲಿ ಐಶಾನಿ ಶೆಟ್ಟಿ!

ಐಶಾನಿ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಹಜ ಅಭಿನಯ ಮತ್ತು ಸರಳ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡ ನಟಿ. ಮಾಡೆಲಿಂಗ್‌ ಕ್ಷೇತ್ರದಿಂದ ಸಿನಿಮಾ ಲೋಕಕ್ಕೆ ಕಾಲಿಟ್ಟ ಅವರು, ಆರಂಭದಲ್ಲೇ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ವಾಸ್ತು ಪ್ರಕಾರ

'ವಾಸ್ತು ಪ್ರಕಾರ' (2015) ಯೋಗರಾಜ್ ಭಟ್ ನಿರ್ದೇಶನದ ಕನ್ನಡ ವ್ಯಂಗ್ಯ-ಹಾಸ್ಯ ಚಿತ್ರ. ರಕ್ಷಿತ್ ಶೆಟ್ಟಿ, ಜಗ್ಗೇಶ್, ಐಶಾನಿ ಶೆಟ್ಟಿ ಮತ್ತು ಪಾರುಲ್ ಯಾದವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜ್ಯೋತಿಷ್ಯ, ಮೂಢನಂಬಿಕೆ ಹಾಗೂ ವೈಜ್ಞಾನಿಕ ಚಿಂತನೆಯ ನಡುವಿನ ಸಂಘರ್ಷವನ್ನು ಹಾಸ್ಯದ ಮೂಲಕ ಚಿತ್ರವು ತೆರೆದಿಡುತ್ತದೆ.

ರಾಕೆಟ್

'ರಾಕೆಟ್' 2015ರಲ್ಲಿ ಬಿಡುಗಡೆಯಾದ ಕನ್ನಡದ ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದೆ. ಈ ಚಿತ್ರವನ್ನು ಶಿವ ಶಶಿ ನಿರ್ದೇಶಿಸಿದ್ದು, ಸತೀಶ್ ನೀನಾಸಂ ನಿರ್ಮಾಣದ ಜೊತೆಗೆ ನಾಯಕನಾಗಿ ಅಭಿನಯಿಸಿದ್ದಾರೆ.

ನಡುವೆ ಅಂತರವಿರಲಿ

'ನಡುವೆ ಅಂತರವಿರಲಿ' 2018ರಲ್ಲಿ ಬಿಡುಗಡೆಯಾದ ಕನ್ನಡದ ರೊಮ್ಯಾಂಟಿಕ್-ಡ್ರಾಮಾ ಚಿತ್ರವಾಗಿದೆ. ಯುವ ಪ್ರೇಮಕಥೆಯ ಜೊತೆಗೆ ಸಂಬಂಧಗಳಲ್ಲಿ ನಂಬಿಕೆ, ಜವಾಬ್ದಾರಿ ಹಾಗೂ ಬದುಕಿನ ಮೌಲ್ಯಗಳನ್ನು ಮನಮುಟ್ಟುವ ರೀತಿಯಲ್ಲಿ ಪ್ರೇಕ್ಷಕರಿಗೆ ತಲುಪಿಸುವ ಸಂದೇಶಾತ್ಮಕ ಚಿತ್ರವಾಗಿ ಇದು ಗುರುತಿಸಿಕೊಂಡಿದೆ.

ಧರಣಿ ಮಂಡಲ ಮಧ್ಯದೊಳಗೆ

'ಧರಣಿ ಮಂಡಲ ಮಧ್ಯದೊಳಗೆ' ನಮ್ಮ ಸುತ್ತಮುತ್ತ ನಡೆಯುವ ಬದುಕಿನ ಕಥೆಯನ್ನು ಹೇಳುವ ಹೈಪರ್‌ಲಿಂಕ್ ಶೈಲಿಯ ಕ್ರೈಂ-ಡ್ರಾಮಾ ಚಿತ್ರ. ಬಾಕ್ಸಿಂಗ್‌ ಮೇಲೆ ಅಪಾರ ಆಸಕ್ತಿ ಹೊಂದಿರುವ ಯುವಕನ ಜೀವನದ ಸುತ್ತ ಕಥೆ ಸಾಗುತ್ತಿದ್ದು, ಪ್ರೀತಿ, ಭಾವನೆ ಹಾಗೂ ರೋಚಕ ತಿರುವುಗಳೊಂದಿಗೆ ಮನರಂಜನೆ ನೀಡಿದೆ.

ಕಾಜಿ

'ಕಾಜಿ' 2019ರ ಮೇ 12ರಂದು ಅಮ್ಮಂದಿರ ದಿನದ ಅಂಗವಾಗಿ ಬಿಡುಗಡೆಯಾದ ಕನ್ನಡ ಕಿರುಚಿತ್ರವಾಗಿದೆ. ಇದು ನಟಿ ಐಶಾನಿ ಶೆಟ್ಟಿ ಅವರ ನಿರ್ದೇಶನದ ಚೊಚ್ಚಲ ಕಿರುಚಿತ್ರವಾಗಿದ್ದು, ಸತೀಶ್ ನೀನಾಸಂ ಅವರ ಸತೀಶ್ ಪಿಕ್ಚರ್ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದೆ.