ಲಸ್ಟ್​ ಸ್ಟೋರಿಸ್​ನಲ್ಲಿ ಅದು-ಸಿದ್ದು ಜೋಡಿ

ಮಮತಾ

ಲಸ್ಟ್​ ಸ್ಟೋರಿಸ್​ನಲ್ಲಿ ಅದು-ಸಿದ್ದು ಜೋಡಿ

ಲಸ್ಟ್​​ ಸ್ಟೋರಿಸ್​ 3ರಲ್ಲಿ ಅದಿತಿ ರಾವ್ ಹೈದರಿ ಹಾಗೂ ಸಿದ್ಧಾರ್ಥ್​ ನಟಿಸಿದ್ದು, ಸದ್ಯ ಇದರ ಭಾಗವಾಗಿ ಇಬ್ಬರು ಮಾಡಿಸಿಕೊಂಡಿರುವ ಫೊಟೋ ಶೂಟ್​ ಪಟಗಳು ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಂಡಿದೆ. ಅಲ್ಲದೇ ಕಾಮೆಂಟ್​ಗಳ ಸುರಿಮಳೆ ಕಾಣಿಸಿಕೊಂಡಿದೆ.

ಲಸ್ಟ್​​ ಸ್ಟೋರಿಸ್​ 3ರಲ್ಲಿ ನಟನೆ

ಈಗಾಗಲೇ ಲಸ್ಟ್​ ಸ್ಟೋರಿಸ್ ಮತ್ತು ಪಾರ್ಟ್​ 2 ಸಾಕಷ್ಟು ವೀಕ್ಷಣೆ, ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಇದರ ಮುಂದಿನ ಭಾಗ ಲಸ್ಟ್​ ಸ್ಟೋರಿಸ್​3 ಆನ್​ಲೈನ್​ ಪ್ಲಾಟ್​ಫಾರ್ಮ್​ನಲ್ಲಿ ಸದ್ದು ಮಾಡಲು ಸಜ್ಜಾಗಿದೆ.

ಮಹಾಸಮುದ್ರಂ ಸಿನಿಮಾ ಮೂಲಕ ಒಂದಾಗಿದ್ದ ಜೋಡಿ

ಅದಿತಿರಾವ್​ ಹೈದರಿ ಮತ್ತು ಸಿದ್ಧಾರ್ಥ್​ ಜೋಡಿ ತೆಲುಗಿನಲ್ಲಿ ಮೂಡಿಬಂದ ಮಹಾಸಮುದ್ರಂ ಸಿನಿಮಾ ಮೂಲಕ ಪರಿಚಿತರಾದರು. ನಂತರ ಒಟ್ಟಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಊಹಾಪೋಹ ಹರಿದಾಡಿತ್ತು. 2024ರಲ್ಲಿ ಪ್ರಸಿದ್ಧ ದೇವಾಲಯದಲ್ಲಿ ಸರಳವಾಗಿ ವಿವಾಹವಾದರು.

ಹೇಗಿದೆ ಔಟ್​ಫಿಟ್​

ಅದಿತಿ ಮತ್ತು ಸಿದ್ಧಾರ್ಥ್​ ಅವರು ಫೋಟೋಶೂಟ್​ಗೆ ಸಖತ್​ ಟ್ರೆಂಡಿಯಾಗಿರುವ ಕ್ಲಾತ್​ ಪರ್ಚೇಸ್ ಮಾಡಿದ್ದಾರೆ. ಇದರಲ್ಲಿ ಅದಿತಿ ಕಪ್ಪು ಮತ್ತು ಚಿನ್ನದ ಬಣ್ಣದ ಮುದ್ರಿತ ಎಥ್ನಿಕ್ ಉಡುಗೆಯಲ್ಲಿ ಅತ್ಯಂತ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾಚಿಂಗ್ ಆದ ಪ್ಯಾಂಟ್, ದೊಡ್ಡ ಜುಮುಕಿಗಳು ಮತ್ತು ನ್ಯೂಡ್ ಹೀಲ್ಸ್ ಧರಿಸಿದ್ದಾರೆ.

ಮೇಕಪ್ ಹೀಗಿತ್ತು

Soft waves ಕೂದಲು ಹಾಗೂ ಸಿಂಪಲ್ ಮೇಕಪ್ ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಸಿದ್ಧಾರ್ಥ್​ ಲುಕ್ ಬೆಸ್ಟೆಸ್ಟ್

ಸಿದ್ಧಾರ್ಥ್ ಅವರು ಬರ್ಂಟ್-ಆರೆಂಜ್ ಪ್ರಿಂಟೆಡ್ ಶರ್ಟ್, ಬ್ರೌನ್ ಟ್ರೌಸರ್ಸ್ ಮತ್ತು ಬ್ಲಾಕ್ ಸ್ನೀಕರ್ಸ್ ಧರಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ಐಟಂ ಸಾಂಗ್​ಗೆ ಕುಣಿಯಲ್ಲ

ಇತ್ತೀಚೆಗೆ ಸಿದ್ಧಾರ್ಥ್​ ಅವರು ತಮ್ಮ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ ಐಟಂ ಹಾಡುಗಳಲ್ಲಿ ನಟಿಸಲ್ಲ. ಮಹಿಳೆ ಸುತ್ತ ಕುಡಿದು ಗಂಡಸರು ಕುಣಿಯುತ್ತಿದ್ದರೆ,. ನಾನು ಆ ಪೈಕಿ ಇರುವುದು ಇಷ್ಟವಿಲ್ಲ. ನಾನು ಮಹಿಳೆಯರಿಗೆ ಗೌರವ ಇರದ ಯಾವುದೇ ದೃಶ್ಯದಲ್ಲಿ ಕಾಣಿಸಿಕೊಳ್ಳಲ್ಲ ಎಂದಿದ್ದರು.

2024ರಲ್ಲಿ ಅದು-ಸಿದ್ದು ಮದುವೆ

ಅದಿತಿ ರಾವ್​ ಮತ್ತು ಸಿದ್ಧಾರ್ಥ್​ ಕೆಲ ಕಾಲ ಡೇಟಿಂಗ್​ನಲ್ಲಿದ್ದರು. 2024ರಲ್ಲಿ ತೆಲಂಗಾಣದಲ್ಲಿನ ಪ್ರಸಿದ್ಧ ದೇವಾಲಯ ವನರ್ಪತಿಯಲ್ಲಿ ಸಂಬಂಧಿಕರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದರು. ಇದು ನಾಲ್ಕುನೂರು ವರ್ಷದ ಹಳೆಯ ದೇವಸ್ಥಾನವಾಗಿದೆ.