ಅದು-ಸಿದ್ದು ಜೋಡಿ ಮೋಡಿ

ಮಮತಾ

ಅದು-ಸಿದ್ದು ಜೋಡಿ ಮೋಡಿ

ಟಾಲಿವುಡ್​ನ ಮಹಾ ಸಮುದ್ರಂ ಸಿನಿಮಾ ಮೂಲಕ ಒಟ್ಟಾದ ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ 2024ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಂಡಿಯಾ ಕೌಚರ್​ ವೀಕ್​ನಲ್ಲಿ ಡಿಸೈನರ್​ ಜಯಂತೊ ರೆಡ್ಡಿ ಅವರಿಗಾಗಿ ರಾಂಪ್​ ವಾಕ್​ ಕಂಡು ಫ್ಯಾನ್ಸ್ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸೌತ್​ ಇಂಡಿಯನ್​ ಶೈಲ ರಾಂಪ್ ವಾಕ್

ಅದಿತಿ ಚಿನ್ನದ ಬಣ್ಣದ ರಾಜಮನೆತನದ ಲಾಂಗ್​ ಕೌಚರ್​ ಧರಿಸಿದ್ದರೆ, ಸಿದ್ಧಾರ್ಥ್​ ಅದೇ ಬಣ್ಣದ ಲಾಂಗ್​ ಬೀಜ್​ ಶೇರ್ವಾನಿ ಧರಿಸಿದ್ದರು. ವಜ್ರದ ಚೋಕರ್​. ಅದಕ್ಕೊಪ್ಪುವಂತಹ ಸೊಗಸಾದ ಕಿವಿ ಓಲೆ ಅವರ ಅಂದವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿತ್ತು.

ಅದಿತಿರಾವ್​ ಸಿನಿಮಾಗಳಿವು

ಅದಿತಿ ರಾವ್ ಹೈದರಿಅವರಿಗೆ ಹೆಚ್ಚು ಫ್ಯಾನ್​ಬೇಸ್​ ಸೃಷ್ಟಿಯಾಗಿದ್ದು ಸೂಫಿಯಂ ಸುಜಾತಯುಂ ಹಾಗೂ ಹೇ ಸಿನಾಮಿಕ, ಹೀರಾಮಂಡಿ ಸಿನಿಮಾದಿಂದ. ಅವರ ಕಣ್ಣಲ್ಲೇ ಮಾತನಾಡುವ ಭಾಷೆ ಸಿಂಪಲ್​ ಲುಕ್​​. ಅವರ ಪಾತ್ರವನ್ನು ಇನ್ನಷ್ಟು ಜೀವಂತವಾಗಿಸುತ್ತದೆ.

ಹೀರಮಂಡಿ

ಹೀರಮಂಡಿ ವೆಬ್​ಸೀರಿಸ್​ನಲ್ಲಿ ಬಿಬ್ಬೋ ಜಾನ್​ ಪಾತ್ರದಲ್ಲಿ ನಟಿಸಿದ್ದರು. ಸಂಜಯ್​ ಬನ್ಸಾಲಿ ನಿರ್ದೇಶನದ ಈ ಸಿನಿಮಾ ಸಾಕಷ್ಟು ಹೆಸರು ಮಾಡಿತ್ತು ಸೈಯಾನ್​​ ಹಟ್ಟೋ ಜಾವೋ ಹಾಡಿನಲ್ಲಿ ಗಜಗಾಮಿನಿ ನಡಿಗೆ ಹಾಕಿದ್ದ ಅದಿತಿರಾವ್​ ಅವರ ಆ ನೃತ್ಯ ಸಾಕಷ್ಟು ಹಿಟ್​ ಆಗಿತ್ತು ಹಾಗೂ ಮುಜರಾ ಹಾಡಿಗೆ ಸಾಕಷ್ಟು ಜನರು ರೀಲ್ಸ್ ಹಂಚಿಕೊಂಡಿದ್ದರು.

ಅದಿತಿಗೆ ಇಂದಿಗೂ ಬೇಡಿಕೆ

2006ರ ಮಲಯಾಳಂನ ಪ್ರಜಾಪತಿ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಅದಿತಿ ತಮಿಳಿನಲ್ಲಿ ನರ್ತಕಿಯಾಗಿ ನಟಿಸಿದ ಶೃಂಗಾರಂ ಸಿನಿಮಾ ಹಿಟ್ ಕಂಡಿತ್ತು ಆನಂತರ ಟಾಲಿವುಡ್​, ಕಾಲಿವುಡ್​ ಹಾಗೂ ಬಾಲಿವುಡ್​, ಮಾಲಿವುಡ್​ನಲ್ಲಿಯೂ ಸಾಕಷ್ಟು ಚಾನ್ಸ್​ ಗಿಟ್ಟಿಸಿಕೊಂಡರು

ಅದಿತಿ-ಸಿದ್ದು ಹಳೆ ಸಂಬಂಧ

ಅದಿತಿ ರಾವ್​ ಸತ್ಯದೀಪ್​ ಮಿಶ್ರ ಅವರನ್ನು 21ನೇ ವಯಸ್ಸಿನಲ್ಲಿ ಮದುವೆ ಮಾಡಿಕೊಂಡರು. 2013ರಲ್ಲಿ ಡಿವೋರ್ಸ್​ ಪಡೆದುಕೊಂಡ ಅವರು ಸಿದ್ಧಾರ್ಥ್​ ಜೊತೆಗೆ 2024ರಲ್ಲಿ ಹಸೆಮಣೆ ಏರಿದರು. ಸಿದ್ಧಾರ್ಥ್​ ಅವರ ಮೊದಲ ಪತ್ನಿ ಮೇಘನಾ ನಾರಾಯಣ್​​. ಸಮಂತಾ ಮತ್ತು ಶ್ರುತಿ ಹಾಸನ್​ ಜೊತೆಗೆ ಡೇಟಿಂಗ್​ನಲ್ಲಿದ್ರು ಎನ್ನಲಾಗಿದೆ.

ಸಿದ್ಧಾರ್ಥ್​ ಸಿನಿಮಾವಿದು

ಸಿದ್ಧಾರ್ಥ್​ ಅವರ ಬೊಮ್ಮರಿಲ್ಲು, ನುವ್ವಸ್ತಾನಂಟೆ ನೇನು ಒದ್ದಂಟಾನ, ಬಾಯ್ಸ್​, ಜಿಗರ್​ಥಂಡಾ, ಚಿತ್ತಾ. ಇಂಡಿಯನ್​ 2, 3BHK, ರಂಗ್​ ದೇ ಬಸಂತಿ, ಹೋ ಮೈ ಫ್ರೆಂಡ್​, ಮಿಸ್​​ ಯೂ, ಮಹಾ ಸಮುದ್ರಂ, ಅರನ್​ಮನೈ2, ಕೊಂಚಂ ಇಷ್ಟಂ ಕೊಂಚಂ ಕಷ್ಟಂ, ಚುಕ್ಕಲೋ ಚಂದ್ರುಡು ಸೇರಿದಂತೆ ಸಾಕಷ್ಟು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.