2026ರ ಕೇನ್ಸ್ ಚಲನಚಿತ್ರೋತ್ಸದಲ್ಲಿ ಹಸಿರು ಗೌನ್ ತೊಟ್ಟು ಅದಿತಿ ರಾವ್ ಮಿಂಚು
ನಿರುಪಾದಿ ಬ್ಯಾಡಗಿ
2026ರ ಕೇನ್ಸ್ ಚಲನಚಿತ್ರೋತ್ಸದಲ್ಲಿ ಹಸಿರು ಗೌನ್ ತೊಟ್ಟು ಅದಿತಿ ರಾವ್ ಮಿಂಚು
2026ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಟಿ ಅದಿತಿ ರಾವ್ ಹೈದರಿ, ಎಲ್ ಸೆರ್ ಕ್ವೆರಿಡೊ ಚಿತ್ರದ ಪ್ರದರ್ಶನದ ಸಮಯದಲ್ಲಿ ಹಸಿರು ಟೋನಿ ವಾರ್ಡ್ ಕೌಚರ್ ಗೌನ್‌ನಲ್ಲಿ ಮಿಂಚಿದ್ದಾರೆ.
ಸ್ಪಾನೀಷ್ ಚಿತ್ರ ಪ್ರದರ್ಶನ
ಖ್ಯಾತ ಸ್ಪ್ಯಾನಿಷ್ ಚಲನಚಿತ್ರ ನಿರ್ಮಾಪಕ ರೊಡ್ರಿಗೋ ಸೊರೊಗೊಯೆನ್ ಅವರ ಎಲ್ ಸೆರ್ ಕ್ವೆರಿಡೊ ಪ್ರದರ್ಶನಕ್ಕಾಗಿ, ಲೋಹೀಯ ನಿಯಾನ್-ಹಸಿರು ಟೋನಿ ವಾರ್ಡ್ ಕೌಚರ್ ಗೌನ್ ಧರಸಿದ್ದರು.
ಅದಿತಿ ಲುಕ್‌ಗೆ ಪತಿ ಸಿದ್ದಾರ್ಥ್ ಪ್ರತಿಕ್ರಿಯೆ
ಅದಿತಿ ಲುಕ್‌ಗೆ ಪತಿ ಸಿದ್ಧಾರ್ಥ್ ಇನ್ಸ್ಟಾದಲ್ಲಿ ಸ್ಟೋರಿ ಹಾಕಿದ್ದು, ಅದಿತಿಯ ಕ್ಯಾನೆಸ್ ಚಿತ್ರಗಳನ್ನು ಹಂಚಿಕೊಂಡು, "ವಾವ್" ಮತ್ತು "ಲೈಕ್ ಓನ್ಲಿ ಎ ಗಾಡೆಸ್ ಕೇನ್ಸ್" ಎಂದು ಬರೆದಿದ್ದಾರೆ.
ರಾಜಮನೆತನದ ನಟಿ
ಅದಿತಿ ರಾವ್ ಹೈದರಿ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ, ಸುಂದರ ಮತ್ತು ರಾಜಮನೆತನ ಹಿನ್ನೆಲೆಯುಳ್ಳ ನಟಿ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಲವರ್ ಬಾಯ್ ಸಿದ್ದಾರ್ಥ್ ಜೊತೆ ಮದುವೆ
ಬೊಮ್ಮರಿಲ್ಲು ಖ್ಯಾತಿಯ ಸೌತ್ ಚಿತ್ರರಂಗದ ಖ್ಯಾತ ನಟ ಸಿದ್ಧಾರ್ಥ್ ರನ್ನು ಪ್ರೀತಿಸಿದ್ದ ಅದಿತಿ, ಹಲವು ವರ್ಷ ಡೇಟಿಂಗ್ನಲ್ಲಿದ್ದರು. ಕೊನೆಗೆ 2024ರ ಸೆಪ್ಟೆಂಬರ್ನಲ್ಲಿ ತೆಲಂಗಾಣದ ವನಪರ್ತಿಯ ಶ್ರೀ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾದರು.