'ಡಿಯರ್​ ಕಾಮ್ರೇಡ್​' ರಶ್ಮಿಕಾ

ಮಮತಾ

'ಡಿಯರ್​ ಕಾಮ್ರೇಡ್​' ರಶ್ಮಿಕಾ

ಸ್ಯಾಂಡಲ್‌ವುಡ್‌ನಿಂದ ಕೆರಿಯರ್ ಆರಂಭಿಸಿ ಇಂದು ಬಾಲಿವುಡ್ ವರೆಗೂ ಜಯಭೇರಿ ಬಾರಿಸುತ್ತಿರುವ ನಮ್ಮ ಹೆಮ್ಮೆಯ ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಜೂನ್ 19ರಂದು ಕಾಕ್ಟೇಲ್​2 ರಿಲೀಸ್​

ರಶ್ಮಿಕಾ ಮಂದಣ್ಣ ನಟಿಸಿರುವ ಕಾಕ್ಟೇಲ್​2 ಸಿನಿಮಾ ಜೂನ್ 19ರಂದು ರಿಲೀಸ್​ ಆಗಲಿದೆ. ಆ ಮುನ್ನ ಅವರು ಪ್ರವಾಸಿ ಮೂಡ್​ನಲ್ಲಿದ್ದಾರೆ. ಇತ್ತೀಚೆಗೆ ಪತಿ ವಿಜಯ್​ ದೇವರಕೊಂಡ ಜೊತೆಗೆ ಪ್ರಯಾಣ ಬೆಳಸಿದ್ದ ಬಗ್ಗೆ ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದರು.

ರಶ್ಮಿಕಾ ಹೊಸ ಪೋಸ್

Wear this.. Pose.. Let’s goooo ಇದನ್ನು ಧರಿಸಿ ಹೀಗೆ ಪೋಸ್ ಕೊಡಿ, ಈಗ ಬನ್ನಿ ಹೊರಡೋಣ ಎಂದು ಗ್ರೇ ಕೋಟ್​ ಅದಕ್ಕೆ ಮೈ ಬಣ್ಣದ ಶಾರ್ಟ್​​ ಟಾಪ್​, ಅದಕ್ಕೊಪ್ಪುವ ಮೇಕಪ್​​ ಅವರ ಸೊಬಗನ್ನು ಇನ್ನಷ್ಟು ಅಂದಗೊಳಿಸಿದೆ. ಕಿರಿಕ್​ ಹುಡುಗಿಯ ಈ ಪೋಸ್ಟ್​ಗೆ ಫ್ಯಾನ್ಸ್ ನೈಸ್, ಬ್ಯೂಟಿಫುಲ್​ ಎಂದು ಕಾಮೆಂಟ್ ಮಾಡಿದ್ದಾರೆ.

ಕಾಕ್ಟೇಲ್​ ಒಪ್ಪಿಕೊಳ್ಳಲು ಭಯ ಪಟ್ಟಿದ್ದೆ

Cocktail 2 ಚಿತ್ರ ಒಪ್ಪಿಕೊಳ್ಳುವ ಮುನ್ನ ತಾವು ತೀವ್ರ ಗೊಂದಲ ಮತ್ತು ಭಯದಲ್ಲಿದ್ದೆ ಎಂದು ರಶ್ಮಿಕಾ ಇತ್ತೀಚಿನ ಸಂದರ್ಶನವೊಂದರಲ್ಲಿ ಆಸಕ್ತಿದಾಯಕ ವಿಷಯವನ್ನು ಹಂಚಿಕೊಂಡಿದ್ದಾರೆ.

ಮಾಡ್ರನ್​ ಗರ್ಲ್​ ಆಗಲು ಆತಂಕವಿತ್ತು

ನಾನು ಕಾಕ್ಟೇಲ್2 ಚಿತ್ರಕ್ಕೆ ಒಪ್ಪಿಗೆ ನೀಡಲು ಆರಂಭದಲ್ಲಿ ಸಾಕಷ್ಟು ಹೆದರಿದ್ದೆ. ಏಕೆಂದರೆ, ಇಡೀ ಸಿನಿಮಾ ಕೆರಿಯರ್‌ನಲ್ಲೇ ನಾನು ಕಾಣಿಸಿಕೊಂಡ ಅತ್ಯಂತ ಮಾಡರ್ನ್ ಹಾಗೂ ಅಲ್ಟ್ರಾ ಅರ್ಬನ್ ಲುಕ್ ಇದಾಗಿದೆ. ಇದುವರೆಗೆ ನಾನು ನಟಿಸಿದ ಸಿನಿಮಾಗಳಲ್ಲಿ ಪ್ರೇಕ್ಷಕರು ನನ್ನನ್ನು ಸಾಂಪ್ರದಾಯಿಕ ಉಡುಪುಗಳಲ್ಲೇ ನೋಡಿದ್ದಾರೆ. ಹೀಗಿರುವಾಗ ಸಡನ್ ಆಗಿ ಇಷ್ಟು ಹೈ-ಫೈ ಮಾಡರ್ನ್ ಪಾತ್ರದಲ್ಲಿ ಜನರು ನನ್ನನ್ನು ಸ್ವೀಕರಿಸುತ್ತಾರಾ? ಎಂಬ ಆತಂಕ ನನಗಿತ್ತು

'ವಿಜಯ್​​ ಜೊತೆ ಸಂತೋಷವಾಗಿದ್ದೇನೆ'

ಕಾಕ್ಟೇಲ್​ ಸಿನಿಮಾದ ಸಂದರ್ಶನದ ವೇಳೆ ಮೊದಲ ಪ್ರೀತಿ ಬಗ್ಗೆ ಮಾತನಾಡಿದ ರಶ್ಮಿಕಾ ಅವರು, ನಾನು ವಿಜಯ್​ ಜೊತೆ ಸಂತೋಷವಾಗಿದ್ದೇನೆ ಎಂದು ಅಚ್ಚರಿ ಮೂಡಿಸಿದ್ದರು.