ಬಾಲಿವುಡ್‌ನ ಉದಯೋನ್ಮುಖ ನಟಿ ಝೈನ್ ಮೇರಿ ಖಾನ್ ಅವರು ಟಾಲಿವುಡ್ನ ಡಕಾಯಿತ್ ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್ನಲ್ಲಿ ಧರಿಸಿದ್ದ ಮಾದಕ ಉಡುಗೆ ಎಲ್ಲರ ಹುಬ್ಬೇರಿಸಿದ್ದು, ಫೋಟೋಗಳು ವೈರಲ್ ಆಗಿದೆ.
ಖ್ಯಾತ ಕುಟುಂಬದ ಹಿನ್ನೆಲೆ
ಝೈನ್ ಮೇರಿ ಖಾನ್ ಬಾಲಿವುಡ್‌ನ ಖ್ಯಾತ ನಿರ್ದೇಶಕ ಮನ್ಸೂರ್ ಖಾನ್ ಅವರ ಪುತ್ರಿ. ಅಂದರೆ, ಇವರು ಖ್ಯಾತ ನಟ ಅಮೀರ್ ಖಾನ್ ಅವರ ಅಣ್ಣನ ಮಗಳು.
ನಟನೆಯ ಆರಂಭ
ಇವರು 2020ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ 'ಮಿಸೆಸ್ ಸೀರಿಯಲ್ ಕಿಲ್ಲರ್' ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಮನೋಜ್ ಬಾಜಪೇಯಿ ಪ್ರಮುಖ ಪಾತ್ರದಲ್ಲಿದ್ದರು.
ಸಹ ನಿರ್ದೇಶಕಿಯಾಗಿ ಅನುಭವ
ನಟಿಯಾಗುವ ಮೊದಲು ಝೈನ್ ಮೇರಿ ಖಾನ್ ಅವರು ಚಿತ್ರರಂಗದ ತಾಂತ್ರಿಕ ಮಗ್ಗಲುಗಳನ್ನು ಅರಿತಿದ್ದರು. ಕಪೂರ್ ಅಂಡ್ ಸನ್ಸ್ ಚಿತ್ರದಲ್ಲಿ ಇವರು ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.
ಥಿಯೇಟರ್ ಮತ್ತು ಕಲೆ
ಸಿನಿಮಾಗಳಿಗಿಂತ ಮುಂಚೆ ಇವರು ನಾಟಕಗಳಲ್ಲಿ ಸಕ್ರಿಯರಾಗಿದ್ದರು. ಕಲಾತ್ಮಕ ಹಿನ್ನೆಲೆಯಿಂದ ಬಂದಿರುವ ಇವರು ನಟನೆಯ ಸೂಕ್ಷ್ಮತೆಗಳನ್ನು ರಂಗಭೂಮಿಯ ಮೂಲಕ ಕಲಿತಿದ್ದಾರೆ.
ಇತ್ತೀಚಿನ ಜನಪ್ರಿಯತೆ
ನೆಟ್‌ಫ್ಲಿಕ್ಸ್‌ನ ಜನಪ್ರಿಯ ಸರಣಿ 'ಮೋನಿಕಾ ಓ ಮೈ ಡಾರ್ಲಿಂಗ್' ಸಿನಿಮಾದಲ್ಲಿನ ಇವರ ನಟನೆ ವಿಮರ್ಶಕರಿಂದ ಮೆಚ್ಚುಗೆ ಗಳಿಸಿತು. ಇದಲ್ಲದೆ 'ಫರ್ಜಿ' ಸರಣಿಯಲ್ಲೂ ಇವರು ಕಾಣಿಸಿಕೊಂಡಿದ್ದಾರೆ.
ಸರಳ ವ್ಯಕ್ತಿತ್ವ
ಸ್ಟಾರ್ ಕುಟುಂಬದಿಂದ ಬಂದವರಾದರೂ, ಝೈನ್ ಮೇರಿ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸರಳ ಜೀವನಶೈಲಿ, ಫಿಟ್‌ನೆಸ್ ಮತ್ತು ಪ್ರಕೃತಿಯ ಮೇಲಿನ ಪ್ರೀತಿಯನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.
ಹಾಟ್ ಉಡುಗೆ
ಝೈನ್ ಮೇರಿ ಖಾನ್ ಅವರು ಅಡವಿ ಶೇಷ ನಟನೆಯ ಡಕಾಯಿತ್ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅದ್ಧೂರಿ ಸಮಾರಂಭದಲ್ಲಿ ಟ್ರೈಲರ್ ಬಿಡುಗಡೆಯಾಯಿತು. ಈ ವೇಳೆ ಝೈನ್ ಧರಿಸಿದ್ದ ಉಡುಗೆ ಎಲ್ಲರ ಕಣ್ಣು ಕುಕ್ಕಿದೆ.
ಮಾದಕ ಫೋಟೋಗಳು ವೈರಲ್
ಕಾರ್ಯಕ್ರಮದಲ್ಲಿ ಬೂದು ಬಣ್ಣದ ಸೀರೆಯುಟ್ಟು ಎದೆ ಸೀಳು ಕಾಣುವಂತೆ ರವಿಕೆ ತೊಟ್ಟಿದ್ದರು. ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದು, ಝೈನ್ ಮೈಮಾಟ ಕಂಡು ಪಡ್ಡೆ ಹುಡುಗರ ಮೈ ಬಿಸಿಯೇರಿದೆ.