ತಮಿಳು, ತೆಲುಗು, ಕನ್ನಡ ಚಿತ್ರಗಳಲ್ಲಿ ನಟಿಸಿ, ಸೈ ಎನಿಸಿಕೊಂಡಿರುವ ಬಹುಭಾಷಾ ತಾರೆ ವೇದಿಕಾ ಕುಮಾರ್, ಇದೀಗ ಸ್ಲಿಮ್ ಅಂಡ್ ಫಿಟ್ ಆಗಿ ಮಿಂಚಿರುವ ಫೋಟೋಗಳು ಸಖತ್ ವೈರಲ್ ಆಗಿದೆ.ರೂಪದರ್ಶಿ ಹಾಗೂ ನಟಿಯಾಗಿ ಮಿಂಚಿರುವ ವೇದಿಕಾ, ಕನ್ನಡ ಸೇರಿ ಹಲವು ಭಾಷೆಯ ಸೂಪರ್ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.'ಕಾಂಚಾಣ 3', 'ಮುನಿ', 'ಫಿಯರ್', 'ಬಾಡಿ', 'ಕಾಲೈ' ಮುಂತಾದ ಹಿಟ್ ಸಿನಿಮಾಗಳಲ್ಲಿ ನಾಯಕಿ ಆಗಿ ಯಶಸ್ಸು ಕಂಡಿದ್ದಾರೆ.ಕನ್ನಡ ಚಿತ್ರರಂಗದಲ್ಲಿಯೂ ಭರ್ಜರಿ ಯಶಸ್ಸು ನೋಡಿರುವ ವೇದಿಕಾ, ಮೂರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.'ಗಣ', ಗೋಲ್ಡನ್ ಸ್ಟಾರ್ ಗಣೇಶ್ ಜತೆಗೆ 'ಸಂಗಮ' ಮತ್ತು ಶಿವರಾಜ್ ಕುಮಾರ್ ಅವರೊಂದಿಗೆ 'ಶಿವಲಿಂಗ' ಚಿತ್ರದಲ್ಲಿ ನಟನೆ.'ಸಂಗಮ' ನಿರೀಕ್ಷೆಗೆ ತಕ್ಕಂತೆ ಗೆಲುವು ಸಾಧಿಸದೆ ಹೋದರೂ, ಸಿನಿಮಾದ ಹಾಡುಗಳು ಮಾತ್ರ ಸಖತ್ ಹಿಟ್ ಆಗಿದ್ದವು.ಶಿವರಾಜ್ಕುಮಾರ್ಗೆ ನಾಯಕಿ ಆಗಿ ಕಾಣಿಸಿಕೊಂಡ ಶಿವಲಿಂಗ ಚಿತ್ರವು ಶತದಿನೋತ್ಸವ ಸಂಭ್ರಮಿಸಿತು