ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿ 350ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ, ಚಿತ್ರರಸಿಕರಿಂದ ಸೈಎನಿಸಿಕೊಂಡಿರುವ ಹಿರಿಯ ನಟಿ ಊರ್ವಶಿ.ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿ 350ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ, ಚಿತ್ರರಸಿಕರಿಂದ ಸೈಎನಿಸಿಕೊಂಡಿರುವ ಹಿರಿಯ ನಟಿ ಊರ್ವಶಿ.ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಊರ್ವಶಿ, ನಂತರದಲ್ಲಿ ಸ್ಟಾರ್ ನಟಿಯಾಗಿ ಚಿತ್ರೋದ್ಯಮದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರು.ಕನ್ನಡದಲ್ಲಿ ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ರಮೇಶ್ ಸೇರಿ ಹಲವು ಸ್ಟಾರ್ ನಟರೊಂದಿಗೆ ಊರ್ವಶಿ ಅಭಿನಯಿಸಿದ್ದಾರೆ.ನಟಿಯ ಬಾಳಿನಲ್ಲಿ ಕೆಲವು ಕೆಟ್ಟ ಘಟನೆಗಳು ಕೂಡ ನಡೆದಿವೆ ಎಂಬುದಕ್ಕೆ ಅವರ ಮೊದಲ ಮದುವೆಯೇ ಸಾಕ್ಷಿ.2000ನೇ ಇಸವಿಯಲ್ಲಿ, ನಟ ಮನೋಜ್ ಕೆ. ಜಯನ್ ಅವರ ಕೈಹಿಡಿದ ಊರ್ವಶಿಗೆ, ತೇಜ ಲಕ್ಷ್ಮಿ ಎಂಬ ಓರ್ವ ಪುತ್ರಿ ಇದ್ದಾರೆ.ಇವರಿಬ್ಬರ ಮಧ್ಯೆ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ. 2008ರಲ್ಲಿ ಊರ್ವಶಿ ವಿಚ್ಛೇದನ ನೀಡಿ ಪತಿಯಿಂದ ದೂರ ಸರಿದರು.ನಂತರ, 2013ರಲ್ಲಿ ಶಿವ ಪ್ರಸಾದ್ ಜತೆ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಓರ್ವ ಪುತ್ರನಿದ್ದಾನೆ.ಪತಿಯ ಜತೆಗೆ ಆಗಾಗ್ಗೆ ಜಗಳ ಅದಾಗಲೆಲ್ಲ ನಾನು ಸಿಟ್ಟಿನಿಂದ ವಿಪರೀತ ಕುಡಿಯುತ್ತಿದ್ದೆ. ಈ ಚಟಕ್ಕೆ ಬಿದ್ದ ಕಾರಣ, ಊಟ ಮತ್ತು ನಿದ್ರೆಯನ್ನೇ ತ್ಯಜಿಸಿದೆ..ಮದ್ಯ ವ್ಯಸನಿ ಆಗಿದ್ದರಿಂದ ಆರೋಗ್ಯ ತೀರ ಹದಗೆಡಲು ಶುರುವಾಯಿತು. ಆದರೆ, ನನ್ನ ಒಂದಷ್ಟು ಸ್ನೇಹಿತರಿಂದ ಈ ಚಟದಿಂದ ಹೊರಬರಲು ಸಾಧ್ಯವಾಯಿತು ಎಂದಿದ್ದಾರೆ ನಟಿ