ಮಾಜಿ ಬಿಗ್ಬಾಸ್ ಕನ್ನಡ ಸ್ಪರ್ಧಿ, ಗಾಯಕಿ ಹಾಗೂ ನಟಿ ಶ್ರುತಿ ಪ್ರಕಾಶ್ ಅವರ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಬಿಗ್ ಬಾಸ್ ಮೂಲಕ ಖ್ಯಾತಿ
ಕನ್ನಡ ಬಿಗ್ ಬಾಸ್ ಸೀಸನ್ 5 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಶ್ರುತಿ ಪ್ರಕಾಶ್, ತಮ್ಮ ಸೌಮ್ಯ ಸ್ವಭಾವ ಮತ್ತು ಅತ್ಯುತ್ತಮ ಆಟದ ಮೂಲಕ ಫೈನಲಿಸ್ಟ್ ಆಗಿ ಹೊರಹೊಮ್ಮಿ ಕನ್ನಡಿಗರ ಮನೆಮಾತಾದರು.
ಬಹುಮುಖ ಪ್ರತಿಭೆ
ಶ್ರುತಿ ಅವರು ಕೇವಲ ನಟಿ ಮಾತ್ರವಲ್ಲದೆ ಅದ್ಭುತ ಗಾಯಕಿ ಕೂಡ ಹೌದು. ಬಿಗ್ ಬಾಸ್ ಮನೆಯಲ್ಲಿ ಹಾಗೂ ಹಲವು ವೇದಿಕೆಗಳಲ್ಲಿ ತಮ್ಮ ಮಧುರ ಕಂಠದಿಂದ ಹಾಡಿ ಅವರು ಪ್ರೇಕ್ಷಕರ ಮನ ಗೆದ್ದಿದ್ದಾರೆ.
ಹಿಂದಿ ಸೀರಿಯಲ್ ಮೂಲಕ ಆರಂಭ
ಇವರ ವೃತ್ತಿಜೀವನ ಆರಂಭವಾಗಿದ್ದು ಹಿಂದಿ ಕಿರುತೆರೆಯಿಂದ. ಸ್ಟಾರ್ ಪ್ಲಸ್ ವಾಹಿನಿಯ ಜನಪ್ರಿಯ ಧಾರಾವಾಹಿ 'ಸಾಥ್ ನಿಭಾನಾ ಸಾಥಿಯಾ'ದಲ್ಲಿ 'ಸೀತಾ' ಎಂಬ ಪ್ರಮುಖ ಪಾತ್ರ ಮಾಡಿದ್ದಾರೆ.
ಕನ್ನಡ ಸಿನಿಮಾಗಳಲ್ಲಿ ನಾಯಕಿ
ಬಿಗ್ ಬಾಸ್ ನಂತರ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶ್ರುತಿ, 'ಲಂಡನ್ನಲ್ಲಿ ಲಂಬೋದರ', 'ಫಿದಾ' ಮತ್ತು 'ಕಡಲ ತೀರದ ಭಾರ್ಗವ' ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಸೋಶಿಯಲ್ ಮೀಡಿಯಾ ಸ್ಟಾರ್
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿರುವ ಶ್ರುತಿ ಪ್ರಕಾಶ್, ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹಾಟ್ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಶ್ರುತಿ ಮೈಮಾಟ ನೋಡಿ ಪಡ್ಡೆ ಹುಡುಗರೇ ಫಿದಾ ಆಗಿದ್ದಾರೆ.
ಶಾರ್ಟ್ ಡ್ರೆಸ್
ಶ್ರುತಿ ಅವರು ಸ್ಟಾಂಡ್ ಅಪ್ ಕಾಲರ್ ಇರುವ ಸ್ಲೀವ್ ಲೈಸ್ ಬಿಳಿ ಟಾಪ್ ಮತ್ತು ಡೆನಿಮ್ ಶಾರ್ಟ್ಸ್ ಧರಿಸಿದ್ದಾರೆ. ಅವರು ಬುಕ್ ಹಿಡಿದು ಸೋಫಾ ಮೇಲೆ ಕುಳಿತಿರುವ ಭಂಗಿ ಮಾದಕವಾಗಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.