ನಾನು ದೊಡ್ಡ ಕುಡುಕಿಯಾಗಿದ್ದೆ ಎಂದ ಶ್ರುತಿ ಹಾಸನ್! Shruti Haasan

Vijayavan

ನಾನು ದೊಡ್ಡ ಕುಡುಕಿಯಾಗಿದ್ದೆ ಎಂದ ಶ್ರುತಿ ಹಾಸನ್! Shruti Haasan

ಸಕಲಕಲಾವಲ್ಲಭ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಇದೀಗ ಕೂಲಿ ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ.

ಜೀವನದ ಕಹಿ ಘಟನೆ

ಕಮಲ್ ಹಾಸನ್ ಮಗಳಾದರೂ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿರುವ ಶ್ರುತಿ ತಮ್ಮ ಜೀವನದ ಕಹಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.

ಕುಡಿಯುವ ಚಟ

ಚಿತ್ರರಂಗದಲ್ಲಿ ನಡೆಯುವ ಪಾರ್ಟಿಗಳು ನನ್ನನ್ನು ಅತಿಯಾಗಿ ಕುಡಿಯುವ ಚಟಕ್ಕೆ ಸುಲಭವಾಗಿ ನೂಕಿತ್ತು ಎಂದಿದ್ದಾರೆ.

ಪಾರ್ಟಿಗಳಿಗೆ ನನ್ನ ವಿರೋಧವಿಲ್ಲ

ಪಾರ್ಟಿಗಳಿಗೆ ನನ್ನ ವಿರೋಧವಿಲ್ಲ ಆದರೆ, ಕುಡಿಯದೇ ಇರುವವರಿಗೆ ಪಾರ್ಟಿಗಳು ಯಾವಾಗಲೂ ಕಷ್ಟಕರ ಸ್ಥಳವಾಗಿದೆ ಎಂದು ಹೇಳಿದ್ದಾರೆ.

ವಿಪರೀತ ಕುಡಿಯುತ್ತಿದ್ದೆ

ನಾನು ವಿಪರೀತ ಕುಡಿಯುತ್ತಿದ್ದೆ. ವ್ಯಸನದಿಂದ ಹೊರಬರಲು ಶ್ರಮಪಟ್ಟೆ. 8 ವರ್ಷದಿಂದ ಮದ್ಯ ಸೇವಿಸುತ್ತಿಲ್ಲ. ಆದ್ರೆ ಹಳೇ ದಿನಗಳು ನೆನಪಾದ್ರೆ ಬೇಜಾರಾಗುತ್ತೆ ಎಂದಿದ್ದಾರೆ.

ಸಿಗರೇಟ್ ಬಳಸಿಲ್ಲ

ನಾನೆಂದಿಗೂ ಡ್ರಗ್ಸ್ ಅಥವಾ ಸಿಗರೇಟ್ ಬಳಸಿಲ್ಲ. ಪಾರ್ಟಿಗಳಿಗೆ ಬಾ ಎಂದು ನನ್ನನ್ನು ಒತ್ತಾಯಿಸುವ ಫ್ರೆಂಡ್ ಗಳಿಂದ ದೂರವಿದ್ದೇನೆಂದು ಹೇಳಿದ್ದಾರೆ.

ಡಕಾಯಿತ್​ ಸಿನಿಮಾ

ಸಿನಿಮಾ ವಿಚಾರಕ್ಕೆ ಬಂದರೆ ಅಡಿವಿ ಶೇಷ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಡಕಾಯಿತ್​ನಲ್ಲಿ ಶ್ರುತಿ ನಟಿಸಿದ್ದಾರೆ.

ಶ್ರುತಿ ಈಗ ಏಕಾಂಗಿ

ಶ್ರುತಿ ಅವರು ಶಂತನು ಹಜಾರಿಕಾ ಅವರೊಂದಿಗೂ ಬ್ರೇಕಪ್​ ಮಾಡಿಕೊಂಡಿದ್ದಾರೆ. ಈ ಹಿಂದೆ ಮೈಕಲ್ ಕೊರ್ಸಲೆ ಜತೆ 2 ವರ್ಷ ಡೇಟಿಂಗ್ ಮಾಡಿ ಬ್ರೇಕಪ್ ಮಾಡಿಕೊಂಡರು.