ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ ನಟಿ ಶೋಭಾ ಶೆಟ್ಟಿ ಅವರ ಹೊಸ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪಾರದರ್ಶಕ ಸೀರೆ ತೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ.
ಹಸಿರು ಬಣ್ಣದ ಶೀರ್ ಸೀರೆ
ಶೋಭಾ ಶೆಟ್ಟಿ ಅವರು ಹಸಿರು ಬಣ್ಣದ ಶೀರ್ ಸೀರೆಯನ್ನು ಧರಿಸಿ, ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ನೀಡುವ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕಿದ್ದಾರೆ.
ಕಾಮೆಂಟ್ಗಳ ಸುರಿಮಳೆ
ಪಾರದರ್ಶಕ ಸೀರೆಯಲ್ಲಿ ಶೋಭಾ ಅವರ ಮೈಮಾಟವನ್ನು ಕಂಡು ಫಿದಾ ಆಗಿರುವ ಅಭಿಮಾನಿಗಳು ಕಾಮೆಂಟ್ಗಳ ಮೂಲಕ ನಟಿಯ ಸೌಂದರ್ಯವನ್ನು ಕೊಂಡಾಡುತ್ತಿದ್ದಾರೆ.
ಕರಾವಳಿ ಸುಂದರಿ
ಅಂದಹಾಗೆ, ಶೋಭಾ ಶೆಟ್ಟಿ ಅವರು 1990. ಜನವರಿ 20ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಜನಿಸಿದರು.
ವಿದ್ಯಾಭ್ಯಾಸ
ಶೋಭಾ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ತಮ್ಮ ಪದವಿ ಹಾಗೂ ಎಂ.ಎಸ್ಸಿ (M.Sc) ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.
ಕಿರುತೆರೆಗೆ ಪದಾರ್ಪಣೆ
ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ 'ಅಗ್ನಿಸಾಕ್ಷಿ'ಯಲ್ಲಿ 'ತನು' ಎಂಬ ಖಳನಾಯಕಿಯ ಪಾತ್ರದ ಮೂಲಕ ಇವರು ತಮ್ಮ ನಟನಾ ಪಯಣವನ್ನು ಆರಂಭಿಸಿದರು.
ಖ್ಯಾತಿ ತಂದ ಪಾತ್ರ
ತೆಲುಗಿನ ಅತ್ಯಂತ ಯಶಸ್ವಿ ಧಾರಾವಾಹಿ 'ಕಾರ್ತಿಕ ದೀಪಂ'ನಲ್ಲಿ ಇವರು ನಿರ್ವಹಿಸಿದ 'ಡಾಕ್ಟರ್ ಮೋನಿತಾ' ಪಾತ್ರವು ಇವರಿಗೆ ತೆಲುಗು ನಾಡಿನಲ್ಲಿ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು.
ಚಲನಚಿತ್ರ ನಟನೆ
ಕಿರುತೆರೆಯಲ್ಲದೆ ಪುನೀತ್ ರಾಜ್‌ಕುಮಾರ್ ಅಭಿನಯದ 'ಅಂಜನಿ ಪುತ್ರ' ಸೇರಿದಂತೆ ಕೆಲವು ಕನ್ನಡ ಚಲನಚಿತ್ರಗಳಲ್ಲೂ ನಟಿಸಿದ್ದಾರೆ.
ಬಿಗ್‌ಬಾಸ್ ರಿಯಾಲಿಟಿ ಶೋ
ಇವರು ತೆಲುಗಿನ ಜನಪ್ರಿಯ ರಿಯಾಲಿಟಿ ಶೋ 'ಬಿಗ್‌ಬಾಸ್ ತೆಲುಗು ಸೀಸನ್ 7'ರಲ್ಲಿ ಬಲವಾದ ಸ್ಪರ್ಧಿಯಾಗಿ ಭಾಗವಹಿಸಿ ಫೈನಲ್ ಹಂತದವರೆಗೆ ತಲುಪಿದ್ದರು. ಅಲ್ಲದೆ, ಕನ್ನಡದ ಬಿಗ್‌ಬಾಸ್ ಸೀಸನ್ 11ರಲ್ಲೂ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯ
ಶೋಭಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ಹೊಸ ಫೋಟೋಶೂಟ್‌ಗಳು ಹಾಗೂ ರೀಲ್ಸ್‌ಗಳ ಮೂಲಕ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ.