ಕಿಚ್ಚ ಸುದೀಪ್ ನಟನೆಯ ಹುಚ್ಚ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ನಟಿ ರೇಖಾ ವೇದವ್ಯಾಸ್ ಅವರು ಇದೀಗ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹೊಸ ಹಾಟ್ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ತುಂಡುಡುಗೆ ತೊಟ್ಟ ಚಿತ್ರಾ
ನಟಿ ರೇಖಾ ವೇದವ್ಯಾಸ್ ಅವರು ತುಂಬಾ ಸ್ಟೈಲಿಶ್ ಆಗಿ ಕಾಣುವಂತಹ ತುಂಡುಡುಗೆ ಧರಿಸಿದ್ದಾರೆ. ಹಳದಿ ಬಟನ್‌ಗಳನ್ನು ಹೊಂದಿರುವ ಹಸಿರು ಬಣ್ಣದ ಟಾಪ್ ಮತ್ತು ಬಿಳಿ ಬಣ್ಣದ ಶಾರ್ಟ್ಸ್ ಧರಿಸಿದ್ದಾರೆ.
ಪಡ್ಡೆ ಹುಡುಗರು ಫಿದಾ
ತುಂಡುಡುಗೆಯಲ್ಲಿ ರೇಖಾ ಅವರ ಮೈಮಾಟ ನೋಡಿದ ಪಡ್ಡೆ ಹುಡುಗರು ವಯಸ್ಸು 41 ಆದರೂ ಸೌಂದರ್ಯ ಮಾತ್ರ ಸ್ವಲ್ಪವೂ ಕಳೆಗುಂದಿಲ್ಲ, ಇಂದಿಗೂ ಹಾಗೇ ಇದಾರೆ ಎಂದು ಕಾಮೆಂಟ್ಗಳ ಮೂಲಕ ಕೊಂಡಾಡುತ್ತಿದ್ದಾರೆ.
ಬೆಂಗಳೂರು ಸುಂದರಿ
ರೇಖಾ ವೇದವ್ಯಾಸ್ ಅವರು ಬೆಂಗಳೂರಿನಲ್ಲಿ ಜನಿಸಿದ್ದು, ಬೆಂಗಳೂರಿನ ಕೆಂಗೇರಿಯ ಬಸವ ವಸತಿ ಬಾಲಕಿಯರ ಶಾಲೆಯಲ್ಲಿ ಶಿಕ್ಷಣ ಪಡೆದರು. ಅವರು ಮಾಡೆಲಿಂಗ್ ಮಾಡುತ್ತಾ ನಟನೆಯತ್ತ ತಿರುಗಿದರು.
ಚಿತ್ರರಂಗ ಪ್ರವೇಶ
2001ರಲ್ಲಿ ಚಿತ್ರಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದೇ ವರ್ಷ ಹುಚ್ಚ ಚಿತ್ರದಲ್ಲಿ ಸುದೀಪ್ ಜೊತೆ ನಟಿಸಿ ಜನಪ್ರಿಯತೆ ಗಳಿಸಿದರು. ಚಿತ್ರಾ ಚಿತ್ರದ ಜಿಂಕೆ ಮರಿ ಹಾಡಿನಿಂದಾಗಿ ಇಂದಿಗೂ ರೇಖಾ ಜಿಂಕೆ ಮರಿ ಎಂದೇ ಫೇಮಸ್ ಆಗಿದ್ದಾರೆ.
ಇತರ ಭಾಷೆಗಳಲ್ಲಿ ಕೆಲಸ
ಮುಖ್ಯವಾಗಿ ಕನ್ನಡ ಚಿತ್ರಗಳಲ್ಲಿ ನಟಿಸಿದರೂ, ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ರೇಖಾ ಅವರು ನಟಿಸಿ, ಸೈ ಎನಿಸಿಕೊಂಡಿದ್ದಾರೆ.
ಬೇರೆ ಹೆಸರುಗಳು
ಅಕ್ಷರ ಮತ್ತು ಜಿಂಕೆ ಮರಿ ರೇಖಾ ಎಂಬ ಬೇರೆ ಹೆಸರುಗಳಿಂದಲೂ ರೇಖಾ ವೇದವ್ಯಾಸ್ ಪ್ರಸಿದ್ಧಿ ಪಡೆದಿದ್ದಾರೆ.
ವೃತ್ತಿ ಸ್ಥಿತಿ
2001ರಿಂದ 2024ರವರೆಗೆ ಸಕ್ರಿಯರಾಗಿದ್ದ ಅವರು, ಕೆಲವು ವರ್ಷಗಳ ಹಿಂದೆ ಅನಾರೋಗ್ಯದ ಕಾರಣದಿಂದ ಚಿತ್ರರಂಗದಿಂದ ದೂರವಿದ್ದರು. ಇತ್ತೀಚೆಗೆ ಮತ್ತೆ ಸಿನಿಮಾಗಳಿಗೆ ವಾಪಸ್ ಬರುತ್ತಿದ್ದಾರೆ ಎಂದು ಸುದ್ದಿಗಳಿವೆ.