ಸದಾ ಅಭಿನಯ, ಪುಸ್ತಕ ಓದುವಿಕೆ ಸೇರಿದಂತೆ ಹಲವು ಆಸಕ್ತಿದಾಯಕ ಚುಟುವಟಿಕೆಗಳಲ್ಲಿ ಸಕ್ರಿಯರಾಗಿರುವ ನಟಿ ರಂಜನಿ ರಾಘವನ್, ಬರೋಬ್ಬರಿ 30 ಕಿಮೀ ಕಾಲ್ನಡಿಗೆಯಲ್ಲಿ ಭಾಗಿಯಾಗುವ ಮೂಲಕ ಉತ್ಸಾಹ ತೋರಿದ್ದಾರೆ
ಉತ್ಸಾಹದ ಓಟ
'ಪುಟ್ಟಗೌರಿ ಮದುವೆ', 'ಕನ್ನಡತಿ' ಧಾರವಾಹಿ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡ ನಟಿ ರಂಜನಿ ರಾಘವನ್
ಕಾಫಿ ತೋಟಗಳ ಮಧ್ಯೆ
ಅಭಿನಯ, ಪುಸ್ತಕ ಓದುವಿಕೆಯಲ್ಲಿ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಳ್ಳುವ ನಟಿ 30 ಕಿಮೀ ದೂರ ಓಡಿದ್ದಾರೆ
'ಮಲ್ನಾಡ್ ಅಲ್ಟ್ರಾ ರನ್'
'ಮಲ್ನಾಡ್ ಅಲ್ಟ್ರಾ ರನ್' ಅಡಿ 30 ಕಿಮಿ ಕಾಫಿ ಎಸ್ಟೇಟ್, ಬೆಟ್ಟಗುಡ್ಡ, ಏರು ತಗ್ಗುಗಳಲ್ಲಿ ಓಡೋ ಓಟದಲ್ಲಿ ಪಾಲ್ಗೊಂಡರು
ಓಟದ ಬಗ್ಗೆ ರಂಜನಿ ಮಾತು
ಮೊದಲ 6 ಕಿಮೀ ಸಿಕ್ಕಾಪಟ್ಟೆ ಎಲಿವೇಷನ್ ಬಂದು, ಕಟ್ ಆಫ್ ಟೈಮಲ್ಲಿ ಮುಗಿಸೋಕೆ ಸಾಧ್ಯವಿಲ್ಲ ಅಂದುಕೊಂಡಿದ್ದರಂತೆ
ಕಡೆಗೂ ಮುಗಿಸಿಬಿಟ್ಟೆ...
ಆದರೆ, ಲೈಫ್ ತರಾನೇ ಮುಂದೆ ಏನೋ ಆಗಿಬಿಡುತ್ತೆ ಅಂತ ಭಯಪಟ್ಟು ಈವತ್ತು ಕೈಚಲ್ಲೋದು ಬೇಡ, ನಡೆ ಮುಂದೆ ನಡೆ ಮುಂದೆ ಎಂದು ಓಡಿ 30 ಕಿಮೀ ಮುಗಿಸೇಬಿಟ್ಚೆ ಎಂದಿದ್ದಾರೆ