'ಅವನಿಗೆ ಒಬ್ಬಿಬ್ಬರ ಜತೆಯಲ್ಲ'.. ನಟಿಯ ಓಪನ್​ಟಾಕ್

ಮೋಹನ್​ ಶೆಟ್ಟಿ

'ಅವನಿಗೆ ಒಬ್ಬಿಬ್ಬರ ಜತೆಯಲ್ಲ'.. ನಟಿಯ ಓಪನ್​ಟಾಕ್

ಹರಿದಾಡುವ ವದಂತಿಗಳ ಬಗ್ಗೆ ಕೆಲವೇ ಕೆಲವು ಹೀರೋಯಿನ್​ಗಳು ಮಾತ್ರ ತಮ್ಮ ನೇರ ಸ್ವಭಾವದಿಂದ ಖಡಕ್​ ಹಾಗೂ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ಉತ್ತರಿಸುತ್ತಾರೆ

ನಟಿಯ ಅಚ್ಚರಿ ಹೇಳಿಕೆ

ಈ ಸಾಲಿನಲ್ಲಿ ಟಾಲಿವುಡ್ ಸುಂದರಿ ಪ್ರಿಯಾ ಭವಾನಿ ಶಂಕರ್ ಕೂಡ ಒಬ್ಬರು. ತಮ್ಮ ಲವ್​ ಕುರಿತು ಪ್ರತಿಕ್ರಿಯಿಸಿದ ನಟಿ, ಶಾಕಿಂಗ್ ಹೇಳಿಕೆಗಳನ್ನೇ ನೀಡಿದ್ದಾರೆ

ಬ್ರೇಕಪ್​ ವಿಚಾರಕ್ಕೆ ಪ್ರತಿಕ್ರಿಯೆ

ಟಾಲಿವುಡ್​ನಲ್ಲಿ ಒಂದಷ್ಟು ಚಿತ್ರಗಳಿಂದ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಪ್ರಿಯಾ, ಕಳೆದ ಹತ್ತು ವರ್ಷಗಳಿಂದ ರಾಜ್‌ವೆಲ್ ಎಂಬ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿದ್ದಾರೆ

ಟಾಲಿವುಡ್​ ಅಂಗಳದಲ್ಲಿ ಸದ್ದು

ಇತ್ತೀಚೆಗಷ್ಟೇ, ಇವರಿಬ್ಬರ ಮಧ್ಯೆ ಒಂದಷ್ಟು ಮನಸ್ತಾಪ ಉಂಟಾಗಿ, ಸದ್ಯ ದೂರ ಉಳಿದಿದ್ದಾರೆ ಎಂಬ ಸುದ್ದಿ ಟಾಲಿವುಡ್​ ಅಂಗಳದಲ್ಲಿ ಚರ್ಚೆಯಾಗುತ್ತಿವೆ.

ನನ್ನ ಫಸ್ಟ್​ ಅಂಡ್​ ಲಾಸ್ಟ್​ ಬಾಯ್​ಫ್ರೆಂಡ್

ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಿಯಾ, ರಾಜ್ ನನ್ನ ಕಾಲೇಜಿನ ಸ್ನೇಹಿತ. ಅವನು ನನ್ನ ಫಸ್ಟ್​ ಅಂಡ್​ ಲಾಸ್ಟ್​ ಬಾಯ್​ಫ್ರೆಂಡ್​

ಸಾಕಷ್ಟು ಜನರೊಂದಿಗೆ ಡೇಟಿಂಗ್

ಅವನನ್ನು ಪ್ರೀತಿಸುವ ಮೊದಲೇ ಆತನಿಗೆ ಕಾಲೇಜು ದಿನಗಳಲ್ಲಿ ಅನೇಕ ಹುಡುಗಿಯರ ಜತೆ ಸಂಬಂಧವಿತ್ತು, ಆತ ಸಾಕಷ್ಟು ಜನರೊಂದಿಗೆ ಡೇಟಿಂಗ್ ಮಾಡುತ್ತಿದ್ದ ಎಂದಿದ್ದಾರೆ

ಯುವಜನತೆಗೆ ಕಿವಿಮಾತು

ನಿಮಗೆ ಯಾವುದೋ ಒಂದು ಸಂಬಂಧ ಸರಿಯಿಲ್ಲ ಎನಿಸಿದ್ರೆ ಅಥವಾ ಅದು ಉಸಿರುಗಟ್ಟಿಸುತ್ತಿದೆ ಎಂದು ಭಾವಿಸಿದ್ರೆ, ತಕ್ಷಣವೇ ಬ್ರೇಕಪ್ ಮಾಡಿಕೊಳ್ಳುವ ಮೂಲಕ ಹೊರಬನ್ನಿ ಎಂದಿದ್ದಾರೆ