ಬೆಂಗಳೂರು ಬ್ಯೂಟಿ ನುವೇಕ್ಷಾ ಬೋಲ್ಡ್​ನೆಸ್​

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು ಬ್ಯೂಟಿ ನುವೇಕ್ಷಾ ಬೋಲ್ಡ್​ನೆಸ್​

ತಮ್ಮ ಬೋಲ್ಡ್​ ಲುಕ್​ನಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುವ ನಟಿ ನುವೇಕ್ಷಾ ಅವರ ಇತ್ತೀಚಿನ ಹಾಟ್​ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

ಕಪ್ಪು ಬಣ್ಣದ ದಿರಿಸಿನಲ್ಲಿ ಹಾಟ್​ ಅವತಾರ

ಸದ್ಯ ವೈರಲ್​ ಆಗಿರುವ ಫೋಟೋಗಳಲ್ಲಿ ನಟಿ ನುವೇಕ್ಷಾ ಅವರು ಕಪ್ಪು ಬಣ್ಣದ ಲೇಸ್ ಡಿಸೈನ್‌ನ ಅತ್ಯಂತ ಗ್ಲಾಮರಸ್ ಹಾಗೂ ಸ್ಟೈಲಿಶ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಬೋಲ್ಡ್ ಲುಕ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗುರುತು

ನುವೇಕ್ಷಾ ಅವರು ಪ್ರಸ್ತುತ ದಕ್ಷಿಣ ಭಾರತದ ಚಿತ್ರರಂಗದಲ್ಲಿ, ಪ್ರಮುಖವಾಗಿ ತೆಲುಗು ಸಿನಿಮಾಗಳಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿಯಾಗಿದ್ದಾರೆ.

ತೆಲುಗು ಚಿತ್ರರಂಗಕ್ಕೆ ಎಂಟ್ರಿ

ಇವರು 2022 ರಲ್ಲಿ ತೆರೆಕಂಡ 'ಅತಿಥಿ ದೇವೋ ಭವ' ಎಂಬ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ನಟ ಆದಿ ಸಾಯಿಕುಮಾರ್ ಅವರಿಗೆ ಜೋಡಿಯಾಗಿ ಇವರು ನಟಿಸಿದ್ದರು.

ಬೆಂಗಳೂರು ಸುಂದರಿ

ನುವೇಕ್ಷಾ ಅವರು 1999 ಆಗಸ್ಟ್​ 1ರಂದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಜನಿಸಿದರು. ಹಿಟ್: ದಿ ಫಸ್ಟ್ ಕೇಸ್ (2022), ಸೆಬಾಸ್ಟಿಯನ್ ಪಿಸಿ 524 (2022) ಮತ್ತು ಇಪ್ಪುಡು ಕಾಕ ಇಂಕೆಪ್ಪುದು (2021) ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮಾಡೆಲಿಂಗ್ ಹಿನ್ನೆಲೆ

ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಇವರು, ಪ್ರಮುಖ ಬ್ರ್ಯಾಂಡ್‌ಗಳಿಗೆ ಮಾಡೆಲ್ ಆಗಿ ಕೆಲಸ ಮಾಡಿ, ಆ ನಂತರ ತಮ್ಮ ನಟನಾ ಕೌಶಲ್ಯದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಇನ್‌ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಇವರು, ಆಗಾಗ್ಗೆ ತಮ್ಮ ಹೊಸ ಹೊಸ ಫೋಟೋಶೂಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಮೈಮಾಟಕ್ಕೆ ಫ್ಯಾನ್ಸ್​ ಫಿದಾ

ಸದ್ಯ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಪ್ಪು ಉಡುಪಿನ ಹಾಟ್​ ಫೋಟೋಗಳಲ್ಲಿ ನುವೇಕ್ಷಾ ಅವರ ಮೈಮಾಟವನ್ನು ಕಂಡು ಫಿದಾ ಆಗಿರುವ ಅಭಿಮಾನಿಗಳು ಕಾಮೆಂಟ್​ಗಳ ಮೂಲಕ ಅಂದವನ್ನು ಹೊಗಳುತ್ತಿದ್ದಾರೆ.