ನಶೆ ಏರಿಸಿದ ನಿಕೇಶಾ!

ರಮೇಶ್​ ಕುಮಾರ್​​ ಬಿ ಎಡಮೋಳೆ

ನಶೆ ಏರಿಸಿದ ನಿಕೇಶಾ!

ವರದ ನಾಯಕ, ಡಕೋಟಾ ಪಿಕ್ಚರ್​ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾಗಿರುವ ನಟಿ ನಿಕೇಶಾ ಪಟೇಲ್​ ಅವರ ಇತ್ತೀಚಿನ ಗ್ಲಾಮರಸ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.

ಚಿತ್ರರಂಗಕ್ಕೆ ಪಾದಾರ್ಪಣೆ

ನಿಕೇಶಾ ಅವರು 2010ರಲ್ಲಿ ಬಿಡುಗಡೆಯಾದ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಸೂಪರ್ ಹಿಟ್ ತೆಲುಗು ಚಲನಚಿತ್ರ 'ಪುಲಿ' ಮೂಲಕ ಸಿನಿರಂಗಕ್ಕೆ ನಾಯಕಿಯಾಗಿ ಭರ್ಜರಿ ಎಂಟ್ರಿ ಕೊಟ್ಟರು.

ಕನ್ನಡ ಚಿತ್ರರಂಗದಲ್ಲಿ ಗುರುತು

ಕನ್ನಡ ಸಿನಿರಂಗದಲ್ಲೂ ಸಕ್ರಿಯರಾಗಿದ್ದ ನಿಕೇಶಾ, ವರದ ನಾಯಕ ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ಹಾಗೂ ನರಸಿಂಹ ಚಿತ್ರದಲ್ಲಿ ರವಿಚಂದ್ರನ್​ಗೆ ಜೋಡಿಯಾಗಿ ನಟಿಸಿದ್ದಾರೆ.

ಬಹುಭಾಷಾ ನಟಿ

ತೆಲುಗು ಮತ್ತು ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲೂ ನಟಿಸುವ ಮೂಲಕ ದಕ್ಷಿಣ ಭಾರತದ ಪ್ರಮುಖ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಬ್ರಿಟಿಷ್ ಮೂಲ

ನಿಕೇಶಾ ಪಟೇಲ್ ಅವರು ಯುಕೆಯ ಬರ್ಮಿಂಗ್‌ಹ್ಯಾಮ್‌ನಲ್ಲಿ ಹುಟ್ಟಿ ಬೆಳೆದ ಗುಜರಾತಿ ಮೂಲದ ಬ್ರಿಟಿಷ್-ಇಂಡಿಯನ್ ಮಾಡೆಲ್ ಮತ್ತು ನಟಿಯಾಗಿದ್ದಾರೆ. ಆದರೆ, ಸದ್ಯ ಸಿನಿಮಾ ಅವಕಾಶಗಳು ಕಡಿಮೆಯಾಗಿದೆ.

ಸೌಂದರ್ಯ ಸ್ಪರ್ಧೆಗಳ ಹಿನ್ನೆಲೆ

ಚಿತ್ರರಂಗಕ್ಕೆ ಬರುವ ಮುನ್ನ ಇವರು ಮಾಡೆಲಿಂಗ್ ಲೋಕದಲ್ಲೂ ಸಕ್ರಿಯರಾಗಿದ್ದು, 2006ರ ಮಿಸ್ ಇಂಡಿಯಾ ಯುಕೆ ಸೌಂದರ್ಯ ಸ್ಪರ್ಧೆಯಲ್ಲಿ ಫೈನಲಿಸ್ಟ್ ಆಗಿ ಗುರುತಿಸಿಕೊಂಡಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಕ್ರೇಜ್

ತಮ್ಮ ಪರ್ಫೆಕ್ಟ್ ಫಿಗರ್, ವಿಶಿಷ್ಟ ಫ್ಯಾಷನ್ ಸೆನ್ಸ್ ಹಾಗೂ ಸ್ಟೈಲಿಶ್ ಅವತಾರಗಳ ಮೂಲಕ ನಿರಂತರವಾಗಿ ಇನ್‌ಸ್ಟಾಗ್ರಾಮ್‌ನಂತಹ ವೇದಿಕೆಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಾ ಯುವ ವೀಕ್ಷಕರ ಮನ ಗೆದ್ದಿದ್ದಾರೆ.

ಹಾಟ್​ ಫೋಟೋಸ್​ ವೈರಲ್​

ಸದ್ಯ ನಿಕೇಶಾ ಅವರು ಆಲಿವ್ ಗ್ರೀನ್ (ಗಾಢ ಹಸಿರು) ಬಣ್ಣದ ಸ್ಲಿಟ್ ಡ್ರೆಸ್ ಮತ್ತು ಕಪ್ಪು ಬಣ್ಣದ ಹೈ ಹೀಲ್ಸ್ ಧರಿಸಿ ಗ್ಲಾಮರಸ್ ಆಗಿ ಪೋಸ್ ನೀಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳು ಸಖತ್​ ವೈರಲ್​ ಆಗುತ್ತಿವೆ.

ಪಡ್ಡೆ ಹುಡುಗರು ಫಿದಾ

ಥೈ ಸ್ಲಿಟ್ ಡ್ರೆಸ್​ನಲ್ಲಿ ನಿಕೇಶಾ ಅವರ ಮೈಮಾಟವನ್ನು ಕಂಡು ಫಿದಾ ಆಗಿರುವ ಪಡ್ಡೆ ಹುಡುಗರು ತರಹೇವಾರಿ ಕಾಮೆಂಟ್​ಗಳ ಮೂಲಕ ನಟಿಯ ಅಂದವನ್ನು ಕೊಂಡಾಡುತ್ತಿದ್ದಾರೆ.