ಹೊಸ ಕೇಶ ವಿನ್ಯಾಸದೊಂದಿಗೆ ನಟಿ ಮೌನ ಗುಡ್ಡೆಮನೆ ಅವರು ವಿವಿಧ ಭಂಗಿಗಳಲ್ಲಿ ಕ್ಯಾಮರಾಗೆ ಪೋಸ್ ನೀಡಿರುವ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಮಂಗಳೂರು ಬ್ಯೂಟಿ
ಮೌನ ಗುಡ್ಡೆಮನೆ ಅವರು ಮೂಲತಃ ಮಂಗಳೂರಿನವರು 17ನೇ ವಯಸ್ಸಿನಲ್ಲಿ ಮಾಡೆಲಿಂಗ್‌ಗೆ ಕಾಲಿಟ್ಟರು. 202ರಲ್ಲಿ 'ಮಿಸ್ ಟೀನ್ ತುಳುನಾಡು' ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆಗಿ ಗುರುತಿಸಿಕೊಂಡರು.
ಕಿರುತೆರೆಯ ಜನಪ್ರಿಯತೆ
ಮೌನ ಗುಡ್ಡೆಮನೆ ಅವರು ಕಲರ್ಸ್ ಕನ್ನಡ ವಾಹಿನಿಯ ಸೂಪರ್ ಹಿಟ್ ಧಾರಾವಾಹಿ 'ರಾಮಾಚಾರಿ' ಮೂಲಕ ಕರ್ನಾಟಕದ ಮನೆಮಾತಾಗಿದ್ದಾರೆ. ಈ ಧಾರಾವಾಹಿಯಲ್ಲಿ ಚಾರು ಪಾತ್ರ ಪ್ರೇಕ್ಷಕರಿಂದ ಅಪಾರ ಪ್ರೀತಿ ಗಳಿಸಿದೆ.
ಬೆಳ್ಳಿತೆರೆ ಎಂಟ್ರಿ
2025ರಲ್ಲಿ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾದ ಮೂಲಕ ಕನ್ನಡ ಚಲನಚಿತ್ರ ಜಗತ್ತಿಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಮಡೆನೂರು ಮನು ಅವರೊಂದಿಗೆ ನಟಿಸಿದ್ದಾರೆ.
ಇತರ ಕೆಲಸಗಳು
ಮೌನ ಗುಡ್ಡೆಮನೆ ಅವರು 'ಲವ್ ಪಂಚ್' ಮೈಕ್ರೋ ಸರಣಿಯಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ವೈರಲ್ ಆಗಿದ್ದಾರೆ. ಅವರ ಹೊಸ ಹೇರ್‌ಸ್ಟೈಲ್ ಎಲ್ಲರ ಗಮನ ಸೆಳೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕ್ರೇಜ್
ನಟನೆಯ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಮೌನ, ತಮ್ಮ ಗ್ಲಾಮರಸ್ ಫೋಟೋಶೂಟ್ ಹಾಗೂ ರೀಲ್ಸ್‌ಗಳ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ಹೊಸ ಫೋಟೋಗಳು ವೈರಲ್
ಇದೀಗ ಮೌನ ಗುಡ್ಡೆಮನೆ ಅವರ ಹೊಸ ಹೇರ್‌ಸ್ಟೈಲ್ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದ್ದು, ಮೌನ ಅವರ ಮಾದಕ ನೋಟವನ್ನು ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.